ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಿಳೆಯರಿಗೆ, ಶ್ರೀ ಸಾಮಾನ್ಯರಿಗೆ, ಅಶಕ್ತರಿಗೆ ಕಾನೂನಿನ ನೆರವು ಸಿಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್. ಸಂತೋಷ್ ಹೇಳಿದರು.
ಅಖಿಲ ಭಾರತ ಅಂಚೆ ನೌಕರರ ಸಂಘ ಮಹಿಳಾ ಘಟಕದ ವತಿಯಿಂದ ಭಾನುವಾರ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಆಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಸ್ಥಳದಲ್ಲಿ ಮಹಿಳೆಯರ ಗೌರವ, ಭದ್ರತೆ, ಸಮಾನತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಲೈಂಗಿಕ ದೌರ್ಜನ್ಯ ತಡೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಕೇವಲ ಪುಸ್ತಕದಲ್ಲಿದ್ದರೆ ಸಾಲದು, ನಿಜ ಜೀವನದಲ್ಲಿಯೂ ಆನುಷ್ಠಾನಗೊಳ್ಳಬೇಕು. ಒಂದು ದೇಶದ ಸಾಮಾಜಿಕ ಪರಿಸ್ಥಿತಿ ನೋಡಬೇಕು ಎಂದರೆ ಅ ದೇಶದ ಕಾನೂನನ್ನು ನೋಡಬೇಕು. ಮಹಿಳೆಯರು, ಶ್ರೀ ಸಾಮಾನ್ಯರು, ಅಶಕ್ತರಿಗೆ ಕಾನೂನಿನ ನೆರವು ಸಿಗಬೇಕು. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸುರಕ್ಷಿತ ವಾತಾವರಣ ಇರಬೇಕು. ದೂರು ಸಮಿತಿಗಳು ಬಂದ ದೂರುಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ವೆಂಕಟೇಶ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿಯೂ ಹೆಣ್ಣು ಮೊದಲ ಅಧ್ಯಾಯ. ಪ್ರತಿ ಪುರುಷನ ಯಶಸ್ವಿನ ಹಿಂದೆ ಮಹಿಳೆ ಪಾತ್ರ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಖಿಲ ಭಾರತ ಅಂಚೆ ನೌಕರರ ಸಂಘ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕ್ರಿಸ್ಟಿನಾ ಅಧ್ಯಕ್ಷತೆ ವಹಿಸಿದ್ದರು. ಎಐಪಿಯು ಗ್ರೂಪ್ ಬಿ ಅಸೋಸಿಯೇಷನ್ ಕರ್ನಾಟಕ ವಲಯದ ಕನ್ವೀನಿಯರ್ ಬಿ.ಆರ್. ರೂಪಾ ಇದ್ದರು. ಪ್ರೀತಿ ಎನ್.ಎಸ್., ಪ್ರಿಯಾಂಕಾ ನಿರೂಪಿಸಿದರು. ಮೀರಾ ಪ್ರಾರ್ಥಿಸಿದರು. ಪೂರ್ಣಿಮಾ ಸ್ವಾಗತಿಸಿದರು. ಯಶೋದಾ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















