ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶರಾವತಿ #Sharavathi ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸರ್ಕಾರ ಸಂತ್ರಸ್ತರ ಕೈ ಹಿಡಿಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ #Minister Madhu Bangarappa ಹೇಳಿದರು.
ಗ್ರಾಮ ಪಂಚಾಯ್ತಿ ಹಿರೇನಲ್ಲೂರು, ಎಂಬಿಎನ್‌ಆರ್‌ಇಬಿಎ ಅಡಿಯಲ್ಲಿ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರ ಹಾಗೂ ಆರ್‌ಎಲ್‌ಎಂ ವರ್ಕ್ಶೆಡ್ ಶೀರ್ಷಿಕೆಯಡಿ ನಿರ್ಮಿಸಿದ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Also read: ಶೃಂಗೇರಿ ವಿಧುಶೇಖರ ಶ್ರೀಗಳ ಆರ್ಶೀವಾದ ಪಡೆದ ಗೃಹ ಸಚಿವ ಅಮಿತ್ ಶಾ | ಕನ್ನಡದಲ್ಲೇ ಪೋಸ್ಟ್
ತಾಳಗುಪ್ಪ-ಸಾಗರದಿಂದ ಕುಡಿಯುವ ನೀರಿನ ಕುರಿತು ಡಾ.ಕಾಗೋಡು ತಿಮ್ಮಪ್ಪನವರ ಜೊತೆಗೂಡಿ ಮೊದಲ ಬಾರಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಕಾಗೋಡು ತಿಮ್ಮಪ್ಪನವರೇ ಖುದ್ದು ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಿದ್ದರು. ಅದು ರದ್ದಾಯಿತು. ಅವರಿಗೆ ಹಕ್ಕುಪತ್ರ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಶೀಘ್ರದಲ್ಲೇ ಅವರಿಗೆ ನ್ಯಾಯ ಒದಗಲಿದೆ. ಸರ್ಕಾರ ಸಂತ್ರಸ್ತರ ಪರವಾಗಿದೆ ಎಂದು ಭರವಸೆ ನೀಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post