ಕಲ್ಪ ಮೀಡಿಯಾ ಹೌಸ್ | ಪ್ರಯಾಗರಾಜ್ |
ಕೇಂದ್ರ ಗೃಹ ಸಚಿವ ಅಮಿತ್ ಶಾ #AmitShah ಅವರು ಮಹಾಕುಂಭದಲ್ಲಿ ಪಾಲ್ಗೊಳ್ಳಲು ಪ್ರಯಾಗರಾಜ್’ನಲ್ಲಿ ವಾಸ್ತವ್ಯ ಹೂಡಿರುವ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ #VidhushekharaBharati ದರ್ಶನ ಪಡೆದು, ಆರ್ಶೀವಾದ ಪಡೆದರು.
ಪ್ರಯಾಗರಾಜ್’ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಪಾಲ್ಗೊಳ್ಳಲು ವಿಧುಶೇಖರ ಭಾರತೀ ಮೊಕ್ಕಾಂ ಹೂಡಿದ್ದಾರೆ.
Also Read>> ಶಕ್ತಿ, ಬುದ್ಧಿಯ ಮೇಲೆ ಹಿಡಿತ ಸಾಧಿಸಿ ಗುರಿಯಡೆಗೆ ಮುನ್ನುಗ್ಗಿದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ
ಇದೇ ವೇಳೆಯಲ್ಲಿ ಪ್ರಯಾಗರಾಜಕ್ಕೆ #Prayagraj ತೆರಳಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪುಣ್ಯಸ್ನಾನದ ನಂತರ ಸಾಧುಸಂತರನ್ನು, ದೇಶದ ವಿವಿಧ ಪ್ರಮುಖ ಮಠಾಧೀಶರನ್ನು ಭೇಟಿಯಾಗಿ ಅನಗ್ರಹ ಪಡೆದರು.
ಅದೇ ರೀತಿಯಲ್ಲಿ ವಿಧುಶೇಖರ ಭಾರತೀ ಸ್ವಾಮಿಗಳನ್ನೂ ಸಹ ಭೇಟಿಯಾದ ಅಮಿತ್ ಶಾ, ಗುರುಗಳಿಗೆ ಫಲ ಸಮರ್ಪಣೆ ಮಾಡಿ, ತಲೆಬಾಗಿ ನಮಸ್ಕರಿಸಿ ಅರ್ಶೀವಾದ ಪಡೆದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲೇ ಪೋಸ್ಟ್ ಮಾಡಿರುವ ಅಮಿತ್ ಶಾ, ನಮ್ಮ ಸಂತಶ್ರೇಷ್ಠರು ಅನಾದಿ ಕಾಲದಿಂದಲೂ ಸನಾತನ ಸಂಸ್ಕೃತಿಯ ದರ್ಶನ ಹಾಗೂ ಏಕತೆಯ ಕಲ್ಪನೆಯನ್ನು ಪ್ರಪಂಚದಾದ್ಯಂತ ಪಸರಿಸುತ್ತಿದ್ದಾರೆ. ಪ್ರಯಾಗರಾಜ್’ನಲ್ಲಿ ಇಂದು ಶೃಂಗೇರಿ #Sringeri ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆದೆನು ಎಂದಿದ್ದಾರೆ.
ಈ ವೇಳೆ ಶ್ರೀಮಠದ ವತಿಯಿಂದ ಗೃಹ ಸಚಿವರಿಗೆ ಅನುಗ್ರಹ ಪ್ರಸಾದ ನೀಡಿ ಗುರುಗಳು ಆರ್ಶೀವದಿಸಿದರು. ಗೃಹಸಚಿವರೊಂದಿಗೆ ಅವರ ಕುಟುಂಬಸ್ಥರೂ ಸಹ ಉಪಸ್ಥಿತರಿದ್ದರು. ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post