ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಡಿಯ ದೇಶದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿರುವ ದಿ ಕಾಶ್ಮೀರಿ ಫೈಲ್ಸ್ The Kashmiri files ಸಿನಿಮಾದ ಉಚಿತ ಪ್ರದರ್ಶನವನ್ನು ಮಾರ್ಚ್ ೧೫ರ ನಾಳೆ ಸಂಜೆ ನಗರದಲ್ಲಿ ಆಯೋಜನೆ ಮಾಡಲಾಗಿದೆ.
ನಾಳೆ ಸಂಜೆ 5.30ಕ್ಕೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಉಚಿತ ಪ್ರದರ್ಶನ ಆಯೋಜಿಸಲಾಗಿದ್ದು, ಸಚಿವ ಕೆ.ಎಸ್. ಈಶ್ವರಪ್ಪ, Minister Eshwarappa ಕೆ.ಈ. ಕಾಂತೇಶ್ ಸೇರಿದಂತೆ ಅವರ ಕುಟುಂಬಸ್ಥರೂ ಸಹ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಮಾತನಾಡಿರುವ ಕೆ.ಈ. ಕಾಂತೇಶ್, ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಿದ ಮೇಲೆ ಮನಸ್ಸು ಭಾರವಾಗಿದೆ. ಈ ಚಿತ್ರ ನಮಗೆ ದೊಡ್ಡ ಪಾಠ. ರಕ್ತಸಿಕ್ತ ಇತಿಹಾಸದ ಭಾಗವಾಗಿದ್ದು, ರಾಷ್ಟ್ರಭಕ್ತರೆಲ್ಲರೂ ಈ ಚಿತ್ರವನ್ನು ನೋಡಲೇಬೇಕಿದೆ. ಹೀಗಾಗಿ, ನಮ್ಮ ತಂದೆಯವರ ಆಸೆಯಂತೆ ನಾಳೆ ಸಂಜೆ ಉಚಿತ ಪ್ರದರ್ಶನ ಏರ್ಪಡಿಸಲಾಗಿದ್ದು, ಒಟ್ಟಿಗೆ ಕುಳಿತು ಸಿನಿಮಾ ವೀಕ್ಷಣೆ ಮಾಡೋಣ ಎಂದು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post