ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ರಾಜ್ಯದಲ್ಲಿನ ಹಿಜಾಬ್ Hijab ವಿವಾದದ ಕುರಿತಾಗಿ ಕಾಯ್ದಿರಿಸಲಾಗಿದ್ದ ತೀರ್ಪನ್ನು ಹೈಕೋರ್ಟ್ ನಾಳೆ ಮುಂಜಾನೆ 10.30ಕ್ಕೆ ಪ್ರಕಟಿಸಲಿದೆ.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿರವಸ್ತ್ರ ಧರಿಸುವ ಕುರಿತಾಗಿ ಮೊದಲು ವಿವಾದವೆದ್ದು, ಗಲಭೆಗೆ ತಿರುಗಿ ಆನಂತರ ಅದು ನ್ಯಾಯಾಲಯದ ಮಟ್ಟಿಲೇರಿತ್ತು.
Also read: ಹಿಜಾಬ್ ಕುರಿತು ನಾಳೆ ಹೈಕೋರ್ಟ್ ತೀರ್ಪು ಪ್ರಕಟ: ಎಷ್ಟು ಗಂಟೆಗೆ ಹೊರಬೀಳಲಿದೆ?
ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ Karnataka High Court ಕಳೆದ ತಿಂಗಳು ಈ ಸಂಬಂಧ ಸುದೀರ್ಘ ವಾದ ವಿವಾದ ನಡೆದಿತ್ತು. ಈ ಪ್ರಕರಣಕ್ಕೆ ಮುಖ್ಯ ನ್ಯಾಯಾಧೀಶರಾದ ಮಾನ್ಯ ರಿತುರಾಜ್ ಅವಸ್ಥಿ, ಕೃಷ್ಣ ಎಸ್ ದೀಕ್ಷಿತ್, ಜಸ್ಟೀಸ್ ಜೆಎಂ ಖಾಜಿ ರವರ ಮುಂದೆ ಸುಮಾರು 7 ವಿವಿಧ ಅರ್ಜಿದಾರರು ಶಿರವಸ್ತ್ರದ ಬಗ್ಗೆ ವಾದವನ್ನು ಮಂಡಿಸಿದ್ದರು. ಸುಮಾರು 25 ಗಂಟೆಗೂ ಅಧಿಕ ಸಮಯ ವಾದವನ್ನು ಆಲಿಸಿ ನ್ಯಾಯಾಧೀಶರು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದರು. ನಾಳೆ ಬೆಳಗ್ಗೆ 10.30 ರಂದು ಈ ಪ್ರಕರಣದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಲಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post