ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ Shimoga Central Jail ಬಂದಿಯೊರ್ವನಿಗೆ ನೀಡಲು ತಂದಿದ್ದ ಬೇಕರಿ ಪದಾರ್ಥದಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು, ಓರ್ವ ಸಂದರ್ಶಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಭದ್ರಾವತಿಯ ವೀರಾಪುರದ ಮೊಹಮ್ಮದ್ ಇಬ್ರಾಹಿಂ ಮೀರಾ ಬಂಧಿತ ಆರೋಪಿ. ಈತ ಜೈಲಿನಲ್ಲಿರುವ ಸೈಯದ್ ಸಮೀರ್ ಎಂಬುವವರನ್ನು ಭೇಟಿ ಮಾಡಲು ಬಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೈಲು ಸಿಬ್ಬಂದಿ ಮೊಹಮ್ಮದ್ ಇಬ್ರಾಹಿಂನನ್ನು ಮಾದಕ ವಸ್ತು ಸಮೇತ ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
