ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಾರಣಾಸಿ ಜಿಲ್ಲಾ ನ್ಯಾಯಾಲಯ ಹಿಂದೂ ಮಹಿಳೆಯ ಪರ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಹಾಗೂ ಇಂದು ಇಡೀ ದೇಶದ ರಾಷ್ಟ್ರಭಕ್ತರು ಅತ್ಯಂತ ಸಂತೋಷ ಪಡುವ ದಿನ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಶಿ ವಿಶ್ವನಾಥನ ಮಂದಿರದ ಪಕ್ಕದಲ್ಲಿರುವ ಮಸೀದಿಯೊಳಗೆ ಈಶ್ವರ, ನಂದಿ, ಗಣೇಶ, ಶೃಂಗಾರ ಗೌರಿ ವಿಗ್ರಹಗಳಿಗೆ ವರ್ಷ ಪೂರ್ತಿ ಪೂಜೆ ಸಲ್ಲಿಸಬೇಕೆಂಬ ಹಿತಾಸಕ್ತಿಯಿಂದ ಐವರು ಹೆಣ್ಣು ಮಕ್ಕಳು ಜಿಲ್ಲಾ ಕೋರ್ಟ್ ಮೊರೆ ಹೋಗಿದ್ದು, ಅರ್ಜಿಯನ್ನು ಪುರಸ್ಕರಿಸುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಅಲ್ಲಿರುವ ಎಲ್ಲಾ ಹಿಂದೂ ದೇವರಿಗೆ ವರ್ಷವಿಡೀ ಪೂಜೆ ಸಲ್ಲಿಸುವ ಅವಕಾಶ ಸಿಗಲಿದೆ ಎಂಬ ಆತ್ಮವಿಶ್ವಾಸವಿದೆ ಎಂದರು.
ಅಯೋಧ್ಯೆ, ಕಾಶಿ ಮತ್ತು ಮಥುರಾ ಕ್ಷೇತ್ರಗಳು ರಾಮ, ಈಶ್ವರ ಮತ್ತು ಕೃಷ್ಣನ ಶ್ರದ್ಧಾ ಕೇಂದ್ರಗಳು. ನೂರಾರು ವರ್ಷಗಳ ಹಿಂದೆ ಇವುಗಳನ್ನು ಅಕ್ರಮಕಾರಿ ಮುಸಲ್ಮಾನರು ಹಿಂದೂ ದೇವಾಲಯಗಳಲ್ಲಿ ಸ್ಥಳದಲ್ಲಿ ಮಸೀದಿ ನಿರ್ಮಿಸಿದ್ದಾರೆ. ಸ್ವಾತಂತ್ರ್ಯಸ ನಂತರವೂ ಗುಲಾಮಗಿರಿ ನಡೆಸಿ ಬಾಬರ್ ಮಸೀದಿ ನಿರ್ಮಿಸಿದ್ದರು. ಪ್ರಸ್ತುತ ಅದು ಧ್ವಂಸವಾಗಿ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅದೇರೀತಿ ಕಾಶಿ ವಿಶ್ವನಾಥನ ದೇವಸ್ಥಾನದ ಪಕ್ಕದಲ್ಲಿ ಮಸೀದಿ ಇದ್ದು, ಹೊರಗಡೆ ಮುಖ ಮಾಡಿರುವ ನಂದಿ ಹಾಗೂ ಈಶ್ವರ ಲಿಂಗವಿದೆ ಅದು ಮುಸ್ಲಿಮರ ವಶದಿಂದ ಆದಷ್ಟು ಬೇಗ ಮುಕ್ತವಾಗಿ ಅಲ್ಲಿರುವ ಈಶ್ವರ, ಗೌರಿ ಸೇರಿದಂತೆ ಎಲ್ಲಾ ದೇವರಿಗೆ ಪೂಜೆ ಸಲ್ಲಿಸುವಂತಾಲಿ ಎಂದರು.
Also read: ರಾಜ್ಯ ಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಪಶಸ್ತಿ ಕುವೆಂಪು ವಿವಿ ಮಡಿಲಿಗೆ…
ಅದರಂತೆ ಆದಷ್ಟು ಬೇಗ ಮಥುರಾದ ಶ್ರೀ ಕೃಷ್ಣ ದೇವಸ್ಥಾನ ಪಕ್ಕದಲ್ಲಿರುವ ಮಸೀದಿಯನ್ನು ತೆರವುಗೊಳಿಸಿ ಸದಾ ಶ್ರೀ ಕೃಷ್ಣನ ಆರಾಧನೆ ನಡೆಯುವಂತಾಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post