ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂತೋಷ್ ಪಾಟೀಲ್ ಸಾವಿನ ಪ್ರಕರಣ ಒಂದು ಷಡ್ಯಂತ್ರ ಇದರ ಹಿಂದೆ ಯಾರಿದ್ದಾರೆ ಎಂಬ ಅಮೂಲಾಗ್ರ ತನಿಖೆಯಾಗಬೇಕು. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಈಬಗ್ಗೆ ನಮ್ಮ ಪಕ್ಷದ ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರಿಗೂ ತಿಳಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ Minister Eshwarappa ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್ ಪಾಟೀಲ್ ತಮ್ಮ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ್ದು, ಅವರ ಡೆತ್‌ನೋಟ್ ಬರಹ ರೂಪದಲ್ಲಿಲ್ಲ ಹಾಗೂ ಆತನ ಸಹಿ ಕೂಡ ಇಲ್ಲ. ಅದೊಂದು ವಾಟ್ಸಪ್ ಸಂದೇಶವಷ್ಟೇ. ಅದಕ್ಕೆ ಯಾವುದೇ ಮಾನ್ಯತೆ ಕೊಡುವ ಅಗತ್ಯವಿಲ್ಲ ಎಂದು ಸಿಎಂ ಬಸವರಾಜಬೊಮ್ಮಾಯಿ ಅವರೆ ತಮಗೆ ಹೇಳಿದ್ದಾರೆ ಎಂದರು.
ನೀತಿ, ನಿಯಮ, ಕಾನೂನನ್ನು ಮೀರಿ ನಾವು ಯಾವುದೇ ಬಿಲ್ ಕೊಡಲು ಸಾಧ್ಯವಿಲ್ಲ. ಇದನ್ನು ತಿಳಿದೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಾವುದೇ ದಾಖಲೆಗಳಿಲ್ಲದೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಸಮಂಜಸವಲ್ಲ. ಯಾವುದೇ ಬೆದರಿಕೆ, ಒತ್ತಾಯಗಳಿಗೆ ತಾನು ಬಗ್ಗುವುದಿಲ್ಲ ಹಾಗೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
Also read: ಶಿಕಾರಿಪುರ: ಏ.16ರಂದು ಶ್ರೀ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ
ರಾಜ್ಯದ ಜನತೆಗೆ ತಾನು ಈ ಮೂಲಕ ತಿಳಿಸಬಯಸುವುದೇನೆಂದರೆ, ಈ ಪ್ರಕರಣದ ಹಿಂದೆ ಯಾರಿದ್ದಾರೆ. ಸಂತೋಷ್ ಪಾಟೀಲ್ ಅವರನ್ನು ದೆಹಲಿಗೆ ಕಳುಹಿಸಿದವರಾರು, ಅವರು ಬರೆದಿದ್ದಾರೆ ಎನ್ನಲಾಗಿರುವ ವಾಟ್ಸಪ್ ಟೈಪಿಂಗ್ ಯಾರು ಮಾಡಿದ್ದು ಈ ಎಲ್ಲದರ ಬಗ್ಗೆ ಕೂಲಂಕುಷವಾಗಿ ಅಮೂಲಾಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತೇನೆ. ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬರಲು ಸಾಧ್ಯ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post