ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊರವಲಯ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ, ಸುಮಾರು 7 ಇಂಚು ಉದ್ದದ ಶೂ ಒಳಗೆ 3 ಅಡಿ ಉದ್ದದ ನಾಗರಹಾವೊಂದು ಅಡಗಿ ಕುಳಿತ್ತಿದ್ದ ಘಟನೆ ನಡೆದಿದೆ.
ಹಾವನ್ನು ಗಮನಿಸಿದ ಕುಟುಂಬದವರು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಅವರು ಶೂ ಒಳಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ.
ಮನೆಯ ಕಾಂಪೌಂಡ್ ಆವರಣದಲ್ಲಿ ಕಾಣಿಸಿಕೊಂಡ ಹಾವು, ಜನರನ್ನು ನೋಡಿ ಭಯಭೀತವಾಗಿ ಶೂ ಒಳಗಿ ಅವಿತುಕೊಂಡಿದೆ ಎಂದು ಕಿರಣ್ ತಿಳಿಸಿದ್ದಾರೆ.
Also read: ನಾವು ಪಡೆದ ಪದವಿ ದೇಶದ ಅಭ್ಯುದಯಕ್ಕೆ ಸಹಕಾರಿಯಾಗಲಿ: ಜಿ. ಅನುರಾಧ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post