ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ಪರ್ಧೆಗಳಲ್ಲಿ ಬಹುಮಾನ ಮುಖ್ಯವಲ್ಲ, ಇಂದಿನ ಸೋಲೇ ನಾಳೆಯ ಗೆಲುವಿನ ಮೆಟ್ಟಿಲು ಎಂದು ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆರ್’ಸಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಬಿಎಚ್ ರಸ್ತೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ಕಾರ್ಯಕ್ರವದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಜೀವನ ಕಲೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾ ಸ್ಪರ್ಧೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಸ್ಪರ್ಧಿಸುವುದು ಮುಖ್ಯ. ಬಹುಮಾನ ಬರುವುದು ಮುಖ್ಯವಲ್ಲ. ಇಂದಿನ ಸೋಲೆ ನಾಳೆಯ ಗೆಲುವಿಗೆ ಮೆಟ್ಟಿಲು, ಸೋಲೇ ಗೆಲುವಿನ ಸೋಪಾನ ಎಂದರು.
Also read: ಅರಿಶಿನ ಮಿಶ್ರಿತ ಗೋಧಿ/ರಾಗಿ ಹಿಟ್ಟಿನಿಂದ ಮಾಡಿದ ಗಣೇಶ ವಿಗ್ರಹ ಪೂಜಿಸಿ
ಸ್ಟ್ಯಾನಿ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಲಾಖಾ ಸಂಯೋಜಕರಾದ ಶಿವಣ್ಣ ಸಂಗಣ್ಣನವರ್, ಸಿಆರ್’ಪಿ ಯತೀಶ್, ಪ್ರಾಂಶುಪಾಲರಾದ ಡಿಸೋಜಾ, ಲೂಸಿ, ಶಿಕ್ಷರ ಸಂಘದ ಜಂಟಿ ಕಾರ್ಯದರ್ಶಿ ಸುಮತಿ, ರವಿಕುಮಾರ್, ಹೊಸಮನಿ, ವಿವಿಧ ಶಾಲಾ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post