ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಸ್ತೆಗೆ ಅಡ್ಡ ಬಂದ ಹಾವೊಂದು ಬಲಿಯಾಗುವುದನ್ನು ತಪ್ಪಿಸುವ ಭರದಲ್ಲಿ ಕಾರೊಂದು ನಾಲೆಗೆ ಉರುಳಿದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.
ಗಾಜನೂರು ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುವ ಚೇತನ್ ಕುಮಾರ್ ಅವರ ತುಮಕೂರಿನಲ್ಲಿರುವ ತಾಯಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರಿನಲ್ಲಿ ತಮ್ಮ ಪತ್ನಿಯೊಂದಿಗೆ ಹೊರಟಿದ್ದರು. ಗಾಜನೂರಿನ ತುಂಗಾನದಿ ಎಡದಂಡೆ ನಾಲೆಯ ಬಳಿಯ ರಸ್ತೆಯಲ್ಲಿ ವೇಗವಾಗಿ ತೆರಳುತ್ತಿದ್ದ ವೇಳೆ ಹಾವೊಂದು ಅಡ್ಡ ಬಂದಿದೆ. ಹಾವಿನ ಮೇಲೆ ಕಾರು ಹರಿಯುವುದನ್ನು ತಪ್ಪಿಸುವ ಸಲುವಾಗಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ನಾಲೆಗೆ ಕಾರು ಉರುಳಿದೆ.
ಕಾರು ಬಿದ್ದ ತಕ್ಷಣ ಚೇತನ್ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆದರೆ, ರಾತ್ರಿಯ ಸಮಯವಾದ್ದರಿಂದ ಯಾರೂ ಸಹಾಯಕ್ಕೆ ಬರಲಾಗಲಿಲ್ಲ. ವಿಷಯ ತಿಳಿದು ಗ್ರಾಮಸ್ಥರು ಬಂದು ಸಹಾಯ ಮಾಡುವಲ್ಲಿ ಚೇತನ್ ಪತ್ನಿ ಸುಷ್ಮಾ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post