ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಅಕ್ರಮವಾಗಿ ಗೋವುಗಳನ್ನು ಸಾಗಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದು, ೫ ಗೋವುಗಳನ್ನ ರಕ್ಷಿಸಲಾಗಿದೆ.

ನಗರದ ವಾದಿ ಎ ಹುದ ಬಡಾವಣೆಯಲ್ಲಿ ಅಕ್ರಮವಾಗಿ ಗೋವುಗಳನ್ನ ತೆಗೆದುಕೊಂಡು ಹೋಗುವಾಗ ಮಳಲಿಕೊಪ್ಪ ತಿರುವಿನ ಬಳಿ ತುಂಗಾನಗರದ ಪಿಎಸ್‌ಐ ದೂದ್ಯನಾಯ್ಕ್ ಅವರು ಗೋವುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ಮೆಹತಾಬ್ ಅಹಮದ್ (29)ನನು ತಡೆದು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಮೆಹತಾಬ್ ಅಹ್ಮದ್ ಹಣದ ಉದ್ದೇಶಕ್ಕಾಗಿ ಕರೆದುಕೊಂಡು ಹೋಗುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಸಿ ಜೈಲಿಗೆ ಕಳುಹಿಸಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















