ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ತುಂಗಾ ತರಂಗ ಕನ್ನಡ ಪತ್ರಿಕೆಯ 2022ರ ದಿನದರ್ಶಿಕೆ (ಕ್ಯಾಲೆಂಡರ್)ಯನ್ನು ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ನೂತನ ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ನೂತನ ಅಧ್ಯಕ್ಷ ಎನ್.ಗೋಪಿನಾಥ್, ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ತುಂಗಾತರಂಗ ದಿನ ಪತ್ರಿಕೆಯ ಸಂಪಾದಕರಾದ ಗಜೇಂದ್ರ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್. ಸತ್ಯನಾರಾಯಣ್ ರಾವ್, ಜವಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್‌ಶೆಟ್ಟಿ, ಉದ್ಯಮಿ ಹಾಗೂ ಸಮಾಜ ಸೇವಕ ಸುರೇಶ್ ಬಾಳೆಗುಂಡಿ, ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಹಾಗೂ ಗ್ರಾ.ಪಂ.ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್, ಎಂಜಿನಿಯರ್ ಭರತ್.ಎಸ್., ಉದ್ಯಮಿಗಳಾದ ಎಂ.ಪಿ.ಗಣೇಶ್, ಎಸ್.ಮಂಜುನಾಥ್, ದೇವಕಿ ಟ್ಯುಟೋರಿಯಲ್ಸ್‌ನ ಮಹೇಶ್, ಮಾನವ ಹಕ್ಕು ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಶಿಕ್ಷಕಿ ಎಸ್.ವಿ.ವೀಣಾರಾಣಿ, ಪತ್ರಕರ್ತರಾದ ಜಿ.ಸಿ.ಸೋಮಶೇಖರ್, ಅರುಣ್, ಅಭಿನಂದನ್, ಮಂಜುನಾಥ್ ಬಿ, , ಪತ್ರಿಕಾ ಬಳಗದ ನಿರಂಜನ್‌ಮೂರ್ತಿ, ರವಿ ಹಾಗೂ ಇತರರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post