ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಕ್ಷೆ ಬೇಡಿ ಬದುಕುತ್ತಿದ್ದ ಸುಮಾರು ಎಪ್ಪತೈದು ವರುಷದ ವೃದ್ದೆಯೊಬ್ಬರು ಊರಿಗೆ ಹೋಗುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ದೆಯು ಸ್ಥಳದಲ್ಲೇ ಸಾವು ಕಂಡ ಘಟನೆ ನಿನ್ನೆ ರಾತ್ರಿ ಹೊನ್ನಾಳಿ ರಸ್ತೆಯ ತೇವರ ಚಟ್ನಳ್ಳಿ ಬಳಿ ನಡೆದಿದೆ.

ಅಲ್ಲಿನ ಲಾಡ್ಜ್ ಸಮೀಪದಲ್ಲಿ ಈ ಅಪಘಾತ ಸಂಬವಿಸಿದ್ದು ಮೃತರನ್ನು ಹೊಳೆ ಹನಸವಾಡಿಯ ಕೆಂಚಮ್ಮ ಎಂದು ಗುರುತಿಸಲಾಗಿದೆ.
ವಾಹನ ಡಿಕ್ಕಿ ಹೊಡೆದ ಪರಿಣಾಮ ವೃದ್ದೆಯ ದೇಹ ಛಿದ್ರವಾಗಿದೆ. ಲಾಡ್ಜ್ ಗೆ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಇತ್ತೀಚಿನ ಪ್ರತಿಭಟನೆ ಹಿನ್ನೆಲೆಯಲ್ಲಿ ಒಳಗೆ ತಿರುಗಿಸಿದ್ದು ರಸ್ತೆಯ ಅಪಘಾತ ಘಟನೆ ಚಿತ್ರಿಕರಣ ಕಷ್ಟವೆನ್ನಲಾಗಿದೆ.

ಸ್ಥಳಕ್ಕೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಎಸೈ ತಿಮ್ಮಯ್ಯ ಸೇರಿದಂತೆ ಹಲವು ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















