ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜದ ಅಭ್ಯುದಯಕ್ಕೆ ನಾವು ಕಲಿತ ಶಿಕ್ಷಣ ಅತ್ಯಂತ ಪರಿಣಾಮಕಾರಿ ವಿಚಾರವಾಗಿದ್ದು, ಸಮಾಜಮುಖಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವೆಂಕಟೇಶ್ ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಗುರುವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಫಾರ್ಮಸಿ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಜಗತ್ತಿನಲ್ಲಿ ನಾವೀನ್ಯತೆಯ ಬದಲಾವಣೆಗಳನ್ನು ತಲುಪಲು ಶಿಕ್ಷಣವೆಂಬುದು ಅವಶ್ಯಕ. ಪ್ರಸ್ತುತ ಸಮಾಜದಲ್ಲಿ ಜ್ಞಾನದ ಜೊತೆಗೆ ವಿಜ್ಞಾನ, ಕೌಶಲಾಭಿವೃದ್ಧಿ ಗುಣ ಹೊಂದುವುದು ತೀರಾ ಅವಶ್ಯವಿದೆ. ಸೃಜನಶೀಲತೆಯೊಂದಿಗೆ ವ್ಯಕ್ತಿತ್ವ ವಿಕಸನ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
Also read: ಕುವೆಂಪು ವಿವಿ ವೆಬ್’ಸೈಟ್ ಹ್ಯಾಕ್ | ಎಲ್ಲಿಂದ ಆಯ್ತು? ರಿಸ್ಟೋರ್ ಕೆಲಸ ಆರಂಭ
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಫಾರ್ಮಸಿ ಬದುಕಿನ ಅತ್ಯಂತ ಹತ್ತಿರದ ವಿಚಾರವಾಗಿದೆ. ಔಷಧ ತಯಾರಿಕೆ ಮತ್ತು ವಿತರಣೆಯಲ್ಲಿ ಫಾರ್ಮಸಿ ಪದವಿಧರರ ಪಾತ್ರ ದೊಡ್ಡದಾಗಿದ್ದು, ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವಲ್ಲಿ ಸಫಲರಾಗಿ.
ಜ್ಞಾನ ಅಧಿಕಾರ ಅಂತಸ್ತು ನೀಡಿದರೇ, ತಿಳುವಳಿಕೆ ಮತ್ತು ವ್ಯಕ್ತಿತ್ವ ಬದುಕಿನ ಉನ್ನತಿಕರಣಕ್ಕೆ ಕಾರಣವಾಗುತ್ತದೆ. ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಾಗ ಸಂಬಂಧಗಳನ್ನು ಹೆಚ್ಚಿಸಿಕೊಳ್ಳುವ ಸೌಜನ್ಯಯುತ ಮಾತುಗಾರಿಕೆ ನಿಮ್ಮದಾಗಬೇಕಿದೆ.
ಮೆದುಳಿನ ಶಿಕ್ಷಣದ ಜೊತೆಗೆ ಹೃದಯಕ್ಕೆ ಶಿಕ್ಷಣ ನೀಡಿದಾಗ ಮಾತ್ರ ಜ್ಞಾನಾರ್ಜನೆ ಎಂಬುದು ಪರಿಪೂರ್ಣಗೊಳ್ಳಲಿದೆ. ತಾಳ್ಮೆ ಬದುಕಿನ ದುರ್ಬಲ ವಿಚಾರವಲ್ಲ. ತಾಳ್ಮೆ ಮತ್ತು ಅದನ್ನು ಉಳಿಸಿಕೊಳ್ಳುವ ಜಾಣ್ಮೆ ನಿಮ್ಮದಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕರಾದ ಡಾ.ಪ್ರಸನ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲಾವಣ್ಯ ಪಾಟೀಲ್ ಸ್ವಾಗತಿಸಿ, ಡಾ.ಶಾಂಭವಿ ನಿರೂಪಿಸಿದರು. ಇದೇ ವೇಳೆ 70 ಕ್ಕು ಹೆಚ್ಚು ಫಾರ್ಮಸಿ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post