ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್, ಸರ್ಜಿ ಫೌಂಡೇಶನ್, ಪರೋಪಕಾರಂ, ಯೋಗ ಶಿಕ್ಷಣ ಸಮಿತಿ ಹಾಗೂ ಆದಿಚುನಗಿರಿ ಶಾಲೆಯ ಸಂಯುಕ್ತಾಶ್ರಯದಲ್ಲಿ ಜ. 22ರಂದು ಬೆಳಗ್ಗೆ 7.30 ರಿಂದ 12.30 ರವರೆಗೆ ಆದಿಚುಂಚನಗಿರಿ ಶಾಲಾವರಣದಲ್ಲಿ ನಡೆಯಲಿರುವ ಸೂರ್ಯಥಾನ್ 2023 ರ 8ನೇ ಆವೃತ್ತಿಯ ಅಂಗವಾಗಿ ಸೂರ್ಯ ನಮಸ್ಕಾರ ವಿವಿಧ ಸ್ಪರ್ಧೆಗಳು ಜರುಗಲಿವೆ.
ಯುವ ಜನರಲ್ಲಿ ಯೋಗ- ಆರೋಗ್ಯ,ದೇಹಭಕ್ತಿ-ದೇಶ ಭಕ್ತಿ ಜಾಗೃತಿಗಾಗಿ ರಥಸಪ್ತಮಿ, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ನಡೆಯುವ ಈ ಬೃಹತ್ ಸೂರ್ಯಥಾನ್ ಕಾರ್ಯಕ್ರಮದಲ್ಲಿ 1500 ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಲಿದ್ದಾರೆ.
ಸ್ಪರ್ಧೆಗಳ ವಿವರ :
ಒಂದು ನಿಮಿಷದಲ್ಲಿ ಅತೀ ಹೆಚ್ಚು ಸೂರ್ಯ ನಮಸ್ಕಾರಗಳನ್ನು ಮಾಡುವುದು, ಎರಡು ನಿಮಿಷದ ಸಂಗೀತ ಹಿನ್ನೆಲೆಯಲ್ಲಿ ನಾಲ್ಕು ಜನರ ತಂಡದಿಂದ ಸೂರ್ಯ ನಮಸ್ಕಾರ, ವೃಕ್ಷಾಸನದಲ್ಲಿ ನಿಂತುಕೊಂಡು ಸೂರ್ಯ್ಷ್ಠಕಂ ಅಥವಾ ಬೀಜಾಕ್ಷರ ಸಹಿತ ದ್ವಾದಶಾದಿತ್ಯ ಮಂತ್ರ ಪಠನೆ ಮಾಡುವುದು, ಥಟ್ ಅಂತ ಕೇಳಿ, ಪಟ್ ಅಂತ ಮಾಡಿ ಸ್ಪರ್ಧೆಯಲ್ಲಿ ತೀರ್ಪುಗಾರರು ಕೇಳುವ ಸೂರ್ಯ ನಮಸ್ಕಾರದ ಒಂದು ಆಸನ ಮಾಡುವುದು ಹಾಗೂ ಬೆಳಗ್ಗೆ 11 ರಿಂದ 11.30 ರವರೆಗೆ ಸೂರ್ಯ ನಮಸ್ಕಾರ ಮತ್ತು ಆರೋಗ್ಯ ಚಿತ್ರಕಲಾ ಸ್ಪರ್ಧೆ, ಬೆಳಗ್ಗೆ 12 ರಿಂದ 12.30 ರವರೆಗೆ ಸೂರ್ಯ ನಮಸ್ಕಾರ ರಸಪ್ರಶ್ನೆ ಸ್ಪರ್ಧೆ ಜರುಗಲಿದೆ.
Also read: ಅಹಿತಕರ ಘಟನೆಗಳ ನಿಷ್ಪಕ್ಷಪಾತ ತನಿಖೆಯಾಗಲಿ: ಎಸ್‌ಪಿಗೆ ಜಿಲ್ಲಾ ಕಾಂಗ್ರೆಸ್ ಮನವಿ
ಪ್ರತಿ ಸ್ಪರ್ಧೆಗೆ ಪ್ರಥಮ ನಗದು ಬಹುಮಾನವಾಗಿ 1000 ರೂ, ದ್ವಿತೀಯ 750 ರೂ, ತೃತೀಯ 500 ರೂ ಹಾಗೂ ತಂಡ ಸೂರ್ಯ ನಮಸ್ಕಾರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 3000 ರೂ, ದ್ವಿತೀಯ 2000 ರೂ, ಹಾಗೂ ತೃತಿಯ 1000 ರೂ.ಗಳನ್ನು ನಿಗದಿಸಲಾಗಿದೆ. ಪ್ರತಿ ಸ್ಪರ್ಧೆ ಮತ್ತು ಸ್ಪರ್ಧಿಗೆ 100 ರೂ.ಪ್ರವೇಶ ಶುಲ್ಕವಿರುತ್ತದೆ. ಶುಲ್ಕ ಪಾವತಿಗೆ ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್.ಶೆಟ್ಟರ್ ಅವರನ್ನು (ಮೊ.ನಂ 9886674375) ಸಂಪರ್ಕಿಸಬಹುದು. ನೋಂದಣಿಗೆ ಜ.20 ಕೊನೆಯ ದಿನ. ವಿಜೇತರಿಗೆ ಬಹುಮಾನಗಳನ್ನು ಜ. 29 ರಂದು ಸೂರ್ಯಥಾನ್ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಪರೋಪಕಾರಂ ಮುಖ್ಯಸ್ಥರಾದ ಎನ್.ಎಂ.ಶ್ರೀಧರ್ (ಮೊ.ನಂ.9448238926), ಕಣಾದ ಯೋಗ ಮತ್ತು ರಿಸರ್ಚ್ ಸೆಂಟರ್‌ನ ಅಧ್ಯಕ್ಷರಾದ ಬೆಲಗೂರು ಮಂಜುನಾಥ್(94804 57274) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post