ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊನ್ನಾಳಿ ರಸ್ತೆಯ ಚಟ್ನಹಳ್ಳಿಯಲ್ಲಿನ ಲಾಡ್ಜ್ ವೊಂದರಲ್ಲಿ ಅನ್ಯ ಕೋಮಿನ ಹುಡುಗ ಹಾಗೂ ಕಾಲೇಜು ವಿದ್ಯಾರ್ಥಿನಿಗೆ ಸರ್ಕಾರದ ನಿಬಂಧನೆಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ರೂಮ್ ನೀಡಿ ಅನೈತಿಕ ಚಟುವಟಿಕೆಗೆ ಸಹಕಾರ ನೀಡಿದ ಲಾಡ್ಜ್ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಯುವಕರಿಗೆ ಯಾವುದೇ ನಿಬಂಧನೆ ಇಲ್ಲದೇ ರೂಮ್‌ಗಳನ್ನು ನೀಡಿ ಕಾನೂನು ಬಾಹಿರ ಚಟುವಟಿಕೆಗೆ ಲಾಡ್ಜ್ ಮಾಲೀಕರು ಸಹಕರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕಿದ್ದರೂ ಸಹ ಜಾಣ ಮೌನ ವಹಿಸಿದ್ದಾರೆ. ಲಾಡ್ಜ್ ನಲ್ಲಿರುವ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ನಿನ್ನೆ ರೂಮಿಗೆ ಆಗಮಿಸಿದ ಯುವಕನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ್, ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ನಾರಾಯಣ್ ಜೀ ವರ್ಣೇಕರ್, ಸಚ್ಚಿನ್ ರಾಯ್ಕರ್, ಸಂತೀಶ್ ಮುಂಚೆಮನೆ, ಎಸ್. ಆರ್. ಸುಧಾಕರ, ಅಂಕುಶ್, ಸುರೇಶ್ ಬಾಬು ಇನ್ನಿತರರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















