ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಕೈಗಾರಿಕೆಗಳಲ್ಲಿ ಒಂದಾದ ವಿಐಎಸ್‌ಎಲ್ ಕಾರ್ಖಾನೆಯನ್ನು #VISL Factory ಪುನರ್ ಆರಂಭಿಸುವ ನಿಟ್ಟಿನಲ್ಲಿ ೧೦ ಸಾವಿರ ಕೋಟಿ ರೂ. ಹೂಡಿಕೆ ಮಾಡು ವುದಾಗಿ ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ನೀಡಿರುವ ಹೇಳಿಕೆ ಅಭಿನಂದನೀಯ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ #PM Narendra Modi ಹಾಗೂ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರ ಸ್ವಾಮಿ ಯವರ ಇಚ್ಚಾಶಕ್ತಿ ಅನ್ವಯ ಕಾರ್ಖಾನೆಯನ್ನು ಪುನರುಜ್ಜೀವನ ಗೊಳ್ಳುತ್ತಿದೆ ಈ ಹಿಂದೆ ಮುಖ್ಯಮಂತ್ರಿ ಯಾಗಿದ್ದ ಬಿ.ಎಸ್.ಯಡಿಯೂರಪ್ಪ ನವರು ತವರು ಜಿಲ್ಲೆಯ ಕಾರ್ಖಾನೆ ಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿದ್ದರು. ಅದು ಈಗ ಸಾಕಾರಗೊಂಡಿದೆ ಎಂದು ಸಂಸದರು ತಿಳಿಸಿದರು.
ವಿಶ್ವೇಶ್ವರಯ್ಯನವರು ಸ್ಥಾಪಿಸಿದಂತಹ ಈ ಕಾರ್ಖಾನೆ ಸಾವಿರಾರು ಕಾರ್ಮಿ ಕರಿಗೆ ಉದ್ಯೋಗವನ್ನು ಸೃಷ್ಟಿಸಿತ್ತು. ಇಂತಹ ಕಾರ್ಖಾನೆ ತಾಂತ್ರಿಕ ಕಾರಣ ಗಳಿಂದಾಗಿ ತನ್ನ ಶಕ್ತಿಯನ್ನು ಕಳೆದು ಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಪುನಃ ಶ್ಚೇತನಗೊಳಿ ಸುವ ನಿಟ್ಟಿನಲ್ಲಿ ಸಂಸದರಾದ ದಿನದಿಂದಲೂ ನಿರಂತರವಾಗಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿದ ಪರಿಣಾಮ ಅದು ಈಗ ಸಾಕಾರಗೊಳ್ಳುತ್ತಿದೆ.
ಇದರ ಪರಿಣಾಮವಾಗಿ ಅಂದಿನ ಕೇಂದ್ರ ಸಚಿವರಾಗಿದ್ದ ನಮ್ಮ ರಾಜ್ಯದವರೇ ಆದ ಅನಂತಕುಮಾರ ಹೆಗಡೆ, ಕೇಂದ್ರದ ಉಕ್ಕು ಸಚಿವರಾದ ನರೇಂದ್ರಸಿಂಗ್ ತೋಮರ್ ನಂತರದಲ್ಲಿ ಮತ್ತೋರ್ವ ಉಕ್ಕು ಸಚಿವ ಮನೋಜ್ ಸಿನ್ಹಾ, ಹಾಗೂ ಬಿರೇನ್‌ಸಿಂಗ್ ಇವರುಗಳು ಭೇಟಿ ನೀಡಿ ಪರಿಶೀಲಿಸಿ ಕಾರ್ಖಾನೆಯ ಜೀರ್ಣೋದ್ದಾರ ಮಾಡಲು ಎಲ್ಲಾ ರೀತಿಯ ಪ್ರಯತ್ನ ವನ್ನು ಮಾಡಿದ್ದರು. ಈ ಎಲ್ಲಾ ಸಚಿವರುಗಳೊಂದಿಗೆ ನಮ್ಮ ರಾಜ್ಯದವರೇ ಆದ ಸಚಿವ ಪ್ರಹ್ಲಾದ್ ಜೋಶಿ ಅವರು ಸಹ ಕಾರ್ಖಾನೆಯ ಉಳಿವಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರು.
ನಂತರದ ದಿನಗಳಲ್ಲಿ ಕೇಂದ್ರದಲ್ಲಿ ೩ನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ರಾಜ್ಯದವರೇ ಆದ ಹೆಚ್.ಡಿ.ಕುಮಾರಸ್ವಾಮಿ ಕೈಗಾರಿಕಾ ಸಚಿವರಾಗಿದ್ದು, ನನ್ನ ಪ್ರಯತ್ನಕ್ಕೆ ಆನೆ ಬಲ ಬಂದಂತಾಯಿತು. ಅವರನ್ನು ಸಹ ಕಾರ್ಖಾನೆಗೆ ಭೇಟಿ ನೀಡುವಂತೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಸಚಿವರು, ಇಡೀ ದಿನ ಕಾರ್ಖಾನೆ ಯನ್ನು ಪರಿಶೀಲಿಸಿ ಅಧಿಕಾರಿಗ ಳೊಂದಿಗೆ ಚರ್ಚಿಸಿ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿದ್ದರು. ಇದಾದ ನಂತರ ಕಾರ್ಖಾನೆಯನ್ನು ಆಧುನೀಕರಣಗೊಳಿಸಬೇಕೆಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಚಿವರೊಂದಿಗೆ ಚರ್ಚಿಸಿ ಆಗಬೇಕೆಂಬ ಒತ್ತಾಯವನ್ನು ಕೂಡ ಮಾಡಿದ್ದು, ಈಗ ಫಲಕೊಡುವಂತಾಗಿದೆ.
ಭದ್ರಾವತಿಯಿಂದ ಚಿತ್ರದುರ್ಗ, ಚಿಕ್ಕಜಾಜೂರು ರೈಲ್ವೇ ಮಾರ್ಗಕ್ಕೆ ಮಂಜೂರಾತಿಯನ್ನು ಪಡೆದುಕೊಂಡಿ ರುವುದು ಕಾರ್ಖಾನೆಗೆ ಬಲ ಬಂದಂತಾಗಿದೆ. ಇದರಿಂದ ಕಾರ್ಖಾನೆಗೆ ಅದಿರನ್ನು ಸುಲಭವಾಗಿ ಪೂರೈಸಬಹುದಾಗಿದೆ. ಸಾವಿರಾರು ಕಾರ್ಮಿಕರ ಪ್ರಾರ್ಥನೆ ನಾಡಿನ ವಿವಿಧ ಮಠಾಧೀಶರರ ಪ್ರಯತ್ನ, ಸಲಹೆ, ಸಹಕಾರ ಹಾಗೂ ಆಶೀರ್ವಾದ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಒತ್ತಾಯ, ಅಭಿಪ್ರಾಯದ ಮೇರೆಗೆ ಸಂಸದನಾಗಿ ನಮ್ಮ ಪ್ರಯತ್ನ ಫಲ ಕೊಡುವಂತಾಗಿದೆ. ಇದಕ್ಕೆ ಕ್ಷೇತ್ರದ ಜನತೆಯ ಆಶೀರ್ವಾದವೇ ಕಾರಣ ಎಂದು ಸಂದರ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















