ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ವಿಐಎಸ್’ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದ್ದಾರೆ.
ರೇಡಿಯೋ ಶಿವಮೊಗ್ಗ ಆಯೋಜಿಸಿದ್ದ ಲೈವ್ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಕಾರ್ಯಾವಧಿಯಲ್ಲಿ ಆದಂತಹ ಪ್ರಮುಖವಾದ ಕಾರ್ಯಗಳ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡ ಸಂಸದರು, ಕ್ಷೇತ್ರದ ದೃಷ್ಟಿಯಿಂದ ತಮ್ಮ ಕನಸುಗಳೇನು ಎಂಬುದರ ಬಗ್ಗೆಯೂ ವಿವರಣೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಭದ್ರಾವತಿಯ ವಿಐಎಸ್’ಎಲ್ ಕಾರ್ಖಾನೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಕೇಳುಗರಿಗೆ ಭರವಸೆ ನೀಡಿದರು.
Also read: ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ ಅರ್ಪಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ
ಶಿವಮೊಗ್ಗ ಶಿಕ್ಷಣ ಕಾಶಿ, ಪ್ರವಾಸೋದ್ಯಮ ಕಾಶಿಯಾಗಿ ಹೇಗೆ ಅಭಿವೃದ್ಧಿಯಾಗುತ್ತಿದೆ ಎಂಬುದನ್ನು ತಿಳಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರವ್ಯಾಪ್ತಿಯ ಬೈಂದೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸರ್ ನಿಲ್ದಾಣ, ಶಿವಮೊಗ್ಗದ ಕೋಟೆ ಗಂಗೂರಿನ ರೈಲ್ವೇ ಡಿಪೋ, ಮುಂದೆ ಆಗಲಿರುವ ರೈಲ್ವೇ ಮಾರ್ಗಗಳು, ಯೋಜನೆಗಳು, ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವ ಫ್ಲೈ ಓವರ್ ಇತ್ಯಾದಿ ವಿಚಾರಗಳ ಬಗ್ಗೆ ತಿಳಿಸಿದರು.
ರೇಡಿಯೋ ಶಿವಮೊಗ್ಗ ಆಯೋಜಿಸಿದ್ದ ಈ ಲೈವ್ ಫೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮ ಸಂಯೋಜಕ ಅಜೇಯ ಸಿಂಹ ಕಾರ್ಯಕ್ರಮ ನಿರೂಪಿಸಿದರು. ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಉಪಸ್ಥಿತರಿದ್ದರು.
ಶಿವಾನಂದಪ್ಪ, ಮನೋಜ್ ಈಸೂರು, ಚಂದ್ರಶೇಖರ್ ಶೆಟ್ಟಿ ಹೊಸನಗರ, ವಿಜಯಾ ಗಣೇಶ್ ವಿನೋಬನಗರ, ಫಣೀಂದ್ರ ವಿನೋಬನಗರ, ಪವಿತ್ರಾ ಮೈಸೂರು, ಪ್ರೇಮಕುಮಾರ್ ರತ್ನಾಕರ ನಗರ, ಸೀತಾರಾಮ್ ಭದ್ರಾವತಿ, ರಾಕೇಶ್ ಚುರ್ಚಿಗುಂಡಿ, ಟಿ. ರಾಮಚಂದ್ರಪ್ಪ ವಿಠ್ಠಗೊಂಡನಕೊಪ್ಪ, ಸುರೇಶ್ ಭದ್ರಾವತಿ, ಯುವರಾಜ್ ಯಮ್ಮಿಗನೂರು, ಗಣೇಶ್ ಭದ್ರಾವತಿ, ತ್ರಿವೇಣಿ ಭದ್ರಾವತಿ, ಶ್ರೀಶೈಲೂ ಪದ್ಮನಾಭ ಅಥಣಿ, ಮನೋಜ್ ಭದ್ರಾವತಿ, ಕೃಷ್ಣಮೂರ್ತಿ ಶಿವಮೊಗ್ಗ ಕರೆ ಮಾಡಿ, ತಮ್ಮ ಅಹವಾಲುಗಳನ್ನು ತಿಳಿಸಿದರು.
ಸಂಸ್ಥೆಯ ಪದಾಧಿಕಾರಿಗಳಾದ ಸಿ. ಎಸ್. ಚಂದ್ರಶೇಖರ್, ವಿಶ್ರಾಂತ ತಹಸೀಲ್ದಾರ್ ಚಂದ್ರಶೇಖರ್, ಪುಟ್ಟಪ್ಪ, ಹೂವಯ್ಯ ಗೌಡ, ನಿಲಯ ಸಂಯೋಜಕ ಗುರುಪ್ರಸಾದ್, ವಿಶ್ರಾಂತ ಮುಖ್ಯಶಿಕ್ಷಕಿ ವಿನೋದಾಕುಮಾರಿ, ಜೀವ ವೈವಿಧ್ಯ ಸಂಶೋಧಕ ಡಾ. ನಂದಾ ಅಪ್ಪಾಜಿ, ಸಂಶೋಧನಾ ಸಹಾಯಕಿ ರಾಧಾ, ಗ್ರಾಮ ಪಂಚಾಯ್ತಿ ಸದಸ್ಯ ಹರ್ಷ, ರೇಡಿಯೋ ಶಿವಮೊಗ್ಗದ ಆರ್’ಜೆಗಳು, ಸ್ಥಳೀಯ ನಿವಾಸಿಗಳು ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post