ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಹೆಸರಿನ ಇನ್ನೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ಮತದಾರರು ಎಚ್ಚರಿಕೆಯಿಂದ ಮತ ಕ್ರಮ ಸಂಖ್ಯೆ 8, ಕೆ.ಎಸ್. ಈಶ್ವರಪ್ಪ #K S Eshwarappa ಹೆಸರಿಗೆ ಮತದಾನ ಮಾಡಿ ಎಂದು ಸ್ವತಃ ಅವರೇ ಮನವಿ ಮಾಡಿದರು.
ಈ ಕುರಿತಂತೆ ಮಾತನಾಡಿದ ಅವರು, ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿz್ದೆÃನೆ. ನನ್ನ ಸ್ಪರ್ಧೆಗೆ ಕಾರಣ ನೀವೆಲ್ಲಾ ಮಾಧ್ಯಮಗಳಲ್ಲಿ ನೋಡಿದ್ದೀರಾ. ಆದರೆ ವಿರೋಧಿಗಳು ಮತ್ತೊಬ್ಬ ಈಶ್ವರಪ್ಪ ಎನ್ನುವ ವ್ಯಕ್ತಿಯನ್ನು ನಿಲ್ಲಿಸುವ ಮೂಲಕ ವಿರೋಧಿಗಳು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.
ನೀವೆಲ್ಲಾ ನನಗೆ ಮತ ಹಾಕುವಾಗ ಎಚ್ಚರದಿಂದ ನನ್ನ ಗುರುತು ಕಬ್ಬಿನ ಜೊತೆ ಇರುವ ರೈತ ಚಿಹ್ನೆ ಕ್ರಮ ಸಂಖ್ಯೆ 8 ಕೆ.ಎಸ್. ಈಶ್ವರಪ್ಪ ಹೆಸರಿಗೆ ಮತ ಹಾಕಿ ಎಂದು ಮನವಿ ಮಾಡುತ್ತೇನೆ ಎಂದರು.
Also read: ಅಲ್ಪ ಸಂಖ್ಯಾತರ ಓಲೈಸುವ ಕಾಂಗ್ರೆಸ್ ಮಾನಸಿಕತೆ ಎಷ್ಟಿದೆ ಎಂದರೆ..? ಶಾಸಕ ಚನ್ನಬಸಪ್ಪ ಹೇಳಿದ್ದೇನು
ಇಂಡಸ್ಟ್ರಿಯಲ್ ಏರಿಯಾದಲ್ಲಿ ಪ್ರಚಾರ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ನಗರದಲ್ಲಿ ಮತ ಯಾಚನೆ ನಡೆಸಿದರು.
ಶಿವಮೊಗ್ಗ ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ ಶೋರೂಮ್, ಸುಪ್ರೀಂ ಬಜಾಜ್ ಶೋರೂಂ ಹಾಗೂ ಸಾಗರ ರಸ್ತೆಯ ಇಂಡಸ್ಟಿçಯಲ್ ಏರಿಯಾದ ಕಾರ್ಖಾನೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಕಾರ್ಮಿಕರಲ್ಲಿ ಮತ ಯಾಚನೆ ನಡೆಸಿದರು.
ಪ್ಲೀಸ್ ಒಂದು ದಿನ ರಜೆ ಕೊಡಿ
ಮತ ಯಾಚನೆ ವೇಳೆ ಶೋರೂಂ, ಗಾರ್ಮೆಂಟ್ಸ್ ಹಾಗೂ ಕಾರ್ಖಾನೆಗಳ ಮಾಲೀಕರ ಬಳಿ ಕೆ.ಎಸ್. ಈಶ್ವರಪ್ಪ ನನ್ನ ಪರ ಪ್ರಚಾರ ಮಾಡಲು ಸಿಬ್ಬಂದಿಗಳಿಗೆ ಒಂದು ದಿನ ರಜೆ ಕೊಡುವಂತೆ ಮನವಿ ಮಾಡಿದರು.
ಈಶ್ವರಪ್ಪ ಮನವಿ ಮೇರೆಗೆ ಮಾಲೀಕರು ನಿಮ್ಮ ಪರ ಪ್ರಚಾರ ಮಾಡಲು ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ರಜೆ ಕೊಡುವುದಾಗಿ ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post