ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಾಜನೂರಿನ ತುಂಗಾ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟ ತಲುಪುತ್ತಿದ್ದಂತೆಯೇ ಕ್ರಸ್ಟ್ ಗೇಟ್’ಗಳನ್ನು ತೆರೆದು ನದಿಗೆ ನೀರನ್ನು ಹರಿಸಲಾಗಿದೆ.
ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಹೀಗಾಗಿ, ಅಣೆಕಟ್ಟೆಯ ಗರಿಷ್ಠ ಮಟ್ಟವಾದ 588.24 ಅಡಿಗೆ ನೀರು ತಲುಪಿದೆ. ಹೀಗಾಗಿ, ಬುಧವಾರ ರಾತ್ರಿ ಎರಡು ಕ್ರಸ್ಟ್ ಗೇಟ್’ಗಳನ್ನು ತೆರೆದು 7 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದೆ.
ಇಷ್ಟು ಒಳಹರಿವಿದೆ?
ಇಂದು ಮುಂಜಾನೆಯ ಮಾಹಿತಿಯಂತೆ ಸುಮಾರು 12,082 ಕ್ಯೂಸೆಕ್ಸ್ ನೀರು ಅಣೆಕಟ್ಟೆಗೆ ಹರಿದುಬಂದಿದ್ದು, 7545 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
Also read: ಶಿವಮೊಗ್ಗದಲ್ಲಿ ಮುಂದುವರೆದ ಮಳೆ: ಜಿಲ್ಲೆಯಲ್ಲಿ ಎಷ್ಟು ದಿನ, ಯಾವ ಅಲರ್ಟ್?
ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದೆ. ಇದರಿಂದ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬAದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post