ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ; ಜಿಲ್ಲೆಯಲ್ಲಿ ಮೊದಲನೆಯ ಬಾರಿಗೆ ಕೊರೋನಾ ಪಾಸಿಟಿವ್ ಸಂಖ್ಯೆ ಸಾವಿರ ಗಡಿ ದಾಟಿರುವ ಕಾರಣದ ಶಿವಮೊಗ್ಗ ನಗರವನ್ನು ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೈಗಾರಿಕೆ, ಹೋಲ್ ಸೇಲ್ ದಿನಸಿ ವ್ಯಾಪಾರಸ್ಥರು, ಗಾಂಧಿ ಬಜಾರ್ ವ್ಯಾಪರಸ್ಥರು ಸಂಪೂರ್ಣ ಲಾಕ್‌ಡೌನ್‌ಗೆ ಒಪ್ಪಿಗೆ ನೀಡಿರುವ ಹಿನ್ನೆಲೆ ನಗರದಲ್ಲಿ ಮಾತ್ರ ವಾರಕ್ಕೆ 4 ದಿನ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತಿದೆ. ಉಳಿದ ದಿನ ಎಂದಿನಂತೆ ಮುಂದುವರೆಯಲಿದೆ ಎಂದರು.
ಇವತ್ತು ನಾಲ್ಕು ದಿನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನ ಖರೀದಿಸಲು ಅವಕಾಶ ನೀಡಲಾಗಿದೆ. ಎಪಿಎಂಸಿ ಇರುವುದಿಲ್ಲ. ದಿನಸಿ ವಸ್ತುಗಳನ್ನು ತಮ್ಮ ಮನೆಯ ಬಳಿ ಖರೀದಿಸಬೇಕಿದೆ ಎಂದರು.
ಶೇ.50ರಷ್ಟು ಸರ್ಕಾರಿ ಕಚೇರಿಗಳು ತೆರಯಲಿದೆ. ಚಿಕಿತ್ಸೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ದೊರೆಯುವಂತಾಗಿದೆ. ಐಸೋಲೇಷನ್ ಪ್ರಕರಣಗಳಿಗೆ ಲಾಡ್ಜ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ಸಾಧ್ಯವಾದಷ್ಟು ಬೆಡ್ ಕೊಡಿಸಲಾಗುತ್ತಿದೆ. ಶನಿವಾರ, ಭಾನುವಾರ ಎರಡು ದಿನ ರಜೆ ಇದೆ. ಇನ್ನೆರಡು ದಿನ ಮಾತ್ರ ಸರ್ಕಾರಿ ಕಚೇರಿಗಳಿರುತ್ತವೆ, ಕೈಗಾರಿಕೆಗಳು ಇರುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುತ್ತಿದ್ದು, ನಿಯಂತ್ರಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಿರ್ಧಾರಕ್ಕೂ ಮುಂಚೆ ಕೈಗಾರಿಕಾ ಸಂಘ, ಗಾಂಧಿ ಬಜಾರ್ ವ್ಯಾಪಾರ ಸಂಘ, ಹೋಲ್ ಸೇಲ್ ದಿನಸಿ ಹೀಗೆ ಎಲ್ಲರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಏನಿರಲಿದೆ:
ಗುರುವಾರದಿಂದ ಭಾನುವಾರದವರೆಗೆ ಮೆಡಿಕಲ್, ಸ್ಥಳೀಯವಾಗಿ ದಿನಸಿ, ತರಕಾರಿ ಲಭ್ಯ, ಹೋಟೆಲ್‌ಗಳಲ್ಲಿ ಪಾರ್ಸಲ್ ಲಭ್ಯ.
ಏನಿರಲ್ಲ:
ಎಪಿಎಂಸಿ, ಕೈಗಾರಿಕೆ, ಬೆಂಗಳೂರಿನಿಂದ ಯಾವ ವಾಹನಕ್ಕೂ ಜಿಲ್ಲಾ ಪ್ರವೇಶವಿಲ್ಲ, ವಾಹನಗಳ ಬಳಕೆಯೂ ನಿಷೇಧ, ಗಾಂಧಿ ಬಜಾರ್, ಹೋಲ್ ಸೇಲ್ ಮಾರಾಟ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post