ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2022-23ನೇ ಸಾಲಿನ ಕೇಂದ್ರ ಬಜೆಟ್ #2022-23 Central Budget ಜನಸ್ನೇಹಿ, ಜನಪರ, ಬಜೆಟ್ ಆಗಿದೆ. ರೈತರು ಸೇರಿದಂತೆ ಎಲ್ಲ ವರ್ಗದವರಿಗೆ ಈ ಬಜೆಟ್‌ನಲ್ಲಿ ಮಾನ್ಯತೆ ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP Raghavendra ಅಭಿಪ್ರಾಯಪಟ್ಟರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ 2022-23ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಮತ್ತು ನಮ್ಮ ಜಿಲ್ಲೆಗೆ ಬಜೆಟ್‌ನಲ್ಲಿ ಪ್ರಮುಖ ಯೋಜನೆಗಳು ಘೋಷಣೆಯಾಗಿದೆ. ನಮ್ಮ ಜಿಲ್ಲೆಗೂ ಲಾಭವಾಗಿದೆ. ರೈಲ್ವೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣ #Shivamogga Ariport ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಕೈಗಾರಿಕೆ ಸ್ಥಾಪಿಸಲು ಯೋಚನೆ ಮಾಡಲಾಗುತ್ತಿದೆ. ಭಾರತ ಸ್ವಾವಲಂಬನೆ ಹೊಂದಬೇಕು ಎಂಬ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ #Prime Minister Narendra Modi ಕನಸಿನ ಮೇಡಿನ್ ಇಂಡಿಯಾ #Made In India ಮತ್ತು ಮೇಕ್ ಇನ್ ಇಂಡಿಯಾ #Make In India ಇವೆರಡಕ್ಕೂ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ 7.50 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚವನ್ನು ಘೋಷಿಸಿದ್ದಾರೆ. ಇದು 2022-23ನೇ ಆರ್ಥಿಕ ಸಾಲಿನ ಬಂಡವಾಳ ವೆಚ್ಚದಲ್ಲಿ ಶೇ.35.4 ಏರಿಕೆ ಆಗಿದೆ. ಮತ್ತು ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ, ಯಾವುದೇ ಹೊರೆ ಇಲ್ಲದಿರುವುದು, ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಸ್ವಾಗತರ್ಹ ಎಂದು ಹೇಳಿದರು.
ನಾಲ್ಕನೇ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ #Finance Minister Nirmala Seetharaman ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಹಾಗೂ ಮುಂಬರುವ 25 ವರ್ಷಗಳಿಗೆ ಈ ಬಜೆಟ್ ಭದ್ರ ಅಡಿಪಾಯ ಒದಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೇಂದ್ರದ 2022-23ನೇ ಸಾಲಿನ ಬಜೆಟ್ ಕುರಿತ ಪತ್ರಿಕಾಗೋಷ್ಠಿಗೆ ಅಂಶಗಳು
- ಈ ಆರ್ಥಿಕ ವರ್ಷದಲ್ಲಿ ಬಜೆಟ್ ನೇರವಾಗಿ ಮತ್ತು ಪರೋಕ್ಷವಾಗಿ ನಮ್ಮ ರಾಜ್ಯಕ್ಕೆ ಸಾಕಷ್ಟು ಅನುಕೂಲ
ಮಾಡಿ ಕೊಟ್ಟಿದೆ. - ಭಾರತದ ಆರ್ಥಿಕ ಬೆಳವಣಿಗೆಯ ಶೇ.9.2 ಎಂದು ಅಂದಾಜಿಸಲಾಗಿದ್ದು, ಇದು ಎಲ್ಲಾ ದೊಡ್ಡ ಆರ್ಥಿಕತೆಗಳ ಪೈಕಿ ಅತ್ಯಧಿಕವಾಗಲಿದೆ.
- 14 ವಲಯಗಳಲ್ಲಿ ಉತ್ಪಾದಕತೆ ಆಧಾರಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
- ಈ ಬಜೆಟ್ ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಆಟೋ ಮೊಬೈಲ್ ಮತ್ತು ಡ್ರೋನ್
ಉದ್ಯಮಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪಿ.ಎಲ್.ಐ), ಯೋಜನೆಗೆ ಸರ್ಕಾರದ ಅನುಮೋದನೆ. - 7.6 ಲಕ್ಷಕ್ಕೂ ಅಧಿಕ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಲಿದೆ. ಪಿ.ಐ.ಎಲ್. ಯೋಜನೆ ಉದ್ಯಮಕ್ಕೆ 5 ವರ್ಷಗಳಲ್ಲಿ 26,058 ಕೋಟಿ ಪ್ರೋತ್ಸಾಹಧನ ನೀಡಲಾಗುವುದು. ಆಟೋ: ವಲಯದ ಪಿ.ಎಲ್.ಐ. ಯೋಜನೆಗೆ 5 ವರ್ಷಗಳಲ್ಲಿ ರೂ.42,500 ಕೋಟಿಗಳಷ್ಟು ಹೊಸ ಹೂಡಿಕೆ ಮತ್ತು 2.3 ಲಕ್ಷ ಕೋಟಿ ರೂ. ಗಳಷ್ಟು ಹೆಚ್ಚಿನ ಉತ್ಪಾದನೆಗೆ ಕಾರಣವಾಗುತ್ತದೆ.
- ಕೋವಿಡ್ ಸಂಕಷ್ಟ ಕಾಲದಿಂದ ಹೊರ ಬರುತ್ತಿರುವ ದೇಶಕ್ಕೆ ಕೇಂದ್ರ ಸರ್ಕಾರ ಮಂಡಿಸಿದ ಪ್ರಸ್ತುತ ಹೊಸ ಶಕ್ತಿಯನ್ನು
ನೀಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಶತಮಾನೋತ್ಸವದ ಸಂಭ್ರಮದವರೆಗಿನ ಇಪ್ಪತ್ತೈದು ವರ್ಷಗಳ
ಆವಧಿಯ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಬಜೆಟ್ ರೂಪಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ
ಮಾತು ಸತ್ಯ ಎಂದು ಸಾಬೀತುಪಡಿಸಲು ಬಜೆಟ್‌ನ ಅಂಕಿ-ಅಂಶಗಳೆ ಸಾಕು. ಸಮಗ್ರ ಅಭಿವೃದ್ಧಿಯ ಜತೆಗೆ ಬಡವರ ಕಲ್ಯಾಣವನ್ನೆ ಗುರಿಯಾಗಿಸಿಕೊಂಡು ರೂಪಿಸಲಾದ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿಯ ಫಲ. - ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದಾಗ ಹೇಳಿದ್ದ ಮಾತೆಂದರೆ ಸಬ್ -ಕಾ-ಸಾಥ್, ಸಬ್ – ಕಾ ವಿಕಾಸ್. ಅಂದರೆ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡುವುದು. ಹಲವು ವಿಶಿಷ್ಟ ಮತ್ತು ಜನಪರ ಯೋಜನೆಗಳ ಮೂಲಕ ಈ ಅಮೂಲ್ಯ ಮಂತ್ರವನ್ನು ಅವರು ಸಾಕಾರ ಮಾಡಿ ತೋರಿಸಿದ್ದಾರೆ. ಈ ಬಜೆಟ್‌ನಲ್ಲಿ ಇದಕ್ಕೆ ಮತ್ತಷ್ಟು ಶಕ್ತಿ ತುಂಬಿರುವುದು ವಿಶೇಷ. ಬಡತನ ನಿರ್ಮೂಲನೆಯ ಜೊತೆಗೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ, ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ, ಮೂಲ ಸೌಕರ್ಯಕ್ಕೆ
- ಅಧಿಕ ಅನುದಾನ ನೀಡುವ ಮೂಲಕ ಉದ್ಯೋಗ ಸೃಷ್ಟಿಯ ಅವಕಾಶದ ಬಾಗಿಲು ತೆರೆದಿರುವುದು ಬಜೆಟ್ ವಿಶೇಷ. ಆ ಕಾರಣದಿಂದ ಬಜೆಟ್ ದೇಶದ ಅರ್ಥ ವ್ಯವಸ್ಥೆಯನ್ನು ಬಲಗೊಳಿಸುವ ಜತೆಗೆ ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಅನೇಕ ಅವಕಾಶದ ಬಾಗಿಲುಗಳನ್ನು ತೆರೆದಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
- ಸೌರ ವಿದ್ಯುತ್ ಉತ್ಪಾದನೆಗೆ 19,500 ಕೋಟಿ ಖಾಸಗಿ ಹೂಡಿಕೆಗೆ ಅವಕಾಶ, 25,000 ಕಿ.ಮೀ. ಹೆದ್ದಾರಿ ಅಭಿವೃದ್ಧಿ, 3.8 ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸೌಕರ್ಯ, ವಸತಿ ಯೋಜನೆಗೆ ಹೆಚ್ಚುವರಿ ಆರ್ಥಿಕ ನೆರವು, ದೇಶಾದ್ಯಂತ ರಾಸಾಯನಿಕ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಉತ್ತೇಜನ, ಅನ್ನದಾತನ ಮನೆಗೆ ಡಿಜಿಟಲ್ ಹಾಗೂ ಹೈಟೆಕ್ ಸೇವೆಯನ್ನು ತಲುಪಿಸಲು ಸರ್ಕಾರಿ, ಸಹಭಾಗಿತ್ವದ ಯೋಜನೆ, “2023 ನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ” ಎಂಬ ಘೋಷಣೆ
ಮುಂತಾದ ಅಂಶಗಳನ್ನು ಗಮನಿಸಿದಾಗ ಬಜೆಟ್ ಹೇಗೆ ಎಲ್ಲ ವರ್ಗದವರ ಹಿತವನ್ನು ಒಳಗೊಂಡಿದೆ ಎನ್ನುವುದು ಎಂತಹವರಿಗೂ ಮನವರಿಕೆ ಆಗುತ್ತದೆ. - ಕೃಷಿ ಬೆಂಬಲ ಬೆಲೆ (ಎಂ.ಎಸ್.ಪಿ) 2.37 ಲಕ್ಷ ಕೋಟಿ ಮೀಸಲಿಟ್ಟಿರುವುದು ಮಹತ್ವದ ಅಂಶ. ಬೆಲೆ ಕುಸಿತದ ಸಂದರ್ಭದಲ್ಲಿ ಇದು ನಿಜವಾಗಿಯೂ ರೈತನ ನೆರವಿಗೆ ಬರುತ್ತದೆ.
ಮೂಲ ಸೌಕರ್ಯಕ್ಕೆ ಮನ್ನಣೆ:
- ಕೇಂದ್ರದ ಈ ಬಾರಿ ಬಜೆಟ್ ನಲ್ಲಿ ಮೂಲಸೌಕರ್ಯಕ್ಕೆ ಭಾರಿ: ಒತ್ತು ಕೊಡಲಾಗಿದೆ. ಕೋವಿಡ್ ನಿಂದ ತತ್ತರಿಸಿರುವ ಆರ್ಥಿಕ ವ್ಯವಸ್ಥೆಗೆ ವೇಗ ತುಂಬಲು ಇದು ಸಹಕಾರಿ. ರೂ.10.68 ಲಕ್ಷ ಕೋಟಿ ಭಾರೀ ಮೊತ್ತವನ್ನು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಇದರಿಂದ ದೇಶದ ಆರ್ಥಿಕತೆ ಚೈತನ್ಯಗೊಂಡು ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ. ದೇಶದ ಯುವಜನರ ಪಾಳಿಗೆ ಇದು ಆಶಾಕಿರಣವಾಗಲಿದೆ.
ಬಡವರ ಕಲ್ಯಾಣ:
- ಪ್ರತಿ ಕುಟುಂಬಕ್ಕೆ ಪಕ್ಕಾ ಮನೆ, ನಲ್ಲಿ ನೀರಿನ ವ್ಯವಸ್ಥೆ, ಅನಿಲ ಸಂಪರ್ಕವನ್ನು ಖಚಿತಪಡಿಸಿರುವ ಬಜೆಟ್ ಬಡವರ ಪರವಾದ ಬಜೆಟ್, ಪ್ರತಿ ಮನೆಗೂ ತದ್ಧ ಕುಡಿಯುವ ನೀರು ಒದಗಿಸುವ “ಪರ್-ಘರ್ನಲ್-ಸ-ಜಲ್” ಯೋಜನೆಗೆ 60 ಸಾವಿರ ಕೋಟಿ ರೂ ಮೀಸಲಿಡಲಾಗಿದೆ, 2022-23 ನೇ ಸಾಲಿನಲ್ಲಿ 3.8 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವುದು ಅತ್ಯಂತ ಮಹತ್ವದ್ದು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2022-23 ನೇ ಸಾಲಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 80 ಲಕ್ಷ ಮನೆ ಪೂರ್ಣಗೊಳಿಸಲು 48 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿರುವ ಕ್ರಮ ಈ ಬಜೆಟ್ ಬಡವರ ಪರ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.
ಅಟಲ್ ಜೀ ರವರ ಕನಸು:
- ದೇಶದ ಸವಾಂ೯hcಣ ಅಭಿವೃದ್ಧಿಯ ಬಗ್ಗೆ ಸಮಗ್ರ ಕನಸು ಕಂಡಿದ್ದ ಮಹಾನ್ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸು ಮಾಡಲು ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರ ಒಂದಲ್ಲ ಒಂದು ಯೋಜನೆ ರೂಪಿಸುತ್ತಲೇ ಬಂದಿದೆ. ಇದೀಗ ಬಜೆಟ್‌ನಲ್ಲಿ ಈ ಉದ್ದೇಶಕ್ಕಾಗಿ 44 ಸಾವಿರ ಕೋಟಿಯ ಬೃಹತ್ ಹೂಡಿಕೆಗೆ ತೀರ್ಮಾನಿಸಿರುವುದು ಒಂದು ಮಹತ್ವದ ಕನಸು ನನಸಾಗುವ ದಾರಿಯಲ್ಲಿ ಇಟ್ಟಿರುವ ಹೆಜ್ಜೆ. ನದಿ ಜೋಡಣೆಯಿಂದ ನೆರ, ಬರಗಳು ನೀಗಲಿವೆ. ಜಲಸಾರಿಗೆ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರಿ ಅಭಿವೃದ್ಧಿ ಆಗಲಿದೆ ಎಂಬ ನಿರೀಕ್ಷೆ ಇದೆ.
ತಂತ್ರಜ್ಞಾನದ ಮೋಡಿ
- ಇತ್ತೀಚಿಗೆ, ದೆಹಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಬೆಂಗಳೂರನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ. ಇದು ತಕ್ಷಣದ ಬೆಳವಣಿಗೆ ಮಾತ್ರ ರಾಜ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಛಾಪನ್ನು ಸದ್ದ ಕಾಯ್ದುಕೊಳ್ಳುವುದು ಉಚಿತ. ಹೀಗಿರುವಾಗ, ಸ್ಟಾರ್ಟ್‌ಅಪ್‌ಗಳ ವಿಸ್ಕತ ತೆರಿಗೆ ಪ್ರಯೋಜನಗಳು ಈ ಬಾರಿ ಬಜೆಟ್ ನಲ್ಲಿ ಸಿಕ್ಕಿದೆ.
- ಏಪ್ರಿಲ್ 1, 2016 ರ ನಡುವೆ ಮಾರ್ಚ್ 31, 2021 ರವರೆಗೆ ಆರಂಭವಾದ ಸ್ಟಾರ್ಟ್ ಅಪ್ ಗಳು ಈ ಪ್ರಯೋಜನಕ್ಕೆ ಅರ್ಹವಾಗಿವೆ. ಇಂತಹ ಸ್ಟಾರ್ಟ್‌ಅಪ್‌ಗಳು ತಮ್ಮ ಒಟ್ಟಾರೆ ವಾರ್ಷಿಕ ವಹಿವಾಟು ಇಲ್ಲದಿರುವಾಗ ಹತ್ತು ವರ್ಷಗಳ ಕಾರ್ಯಾಚರಣೆಗಳ ಒಟ್ಟು ಸಮಯದ ಚೌಕಟ್ಟಿನಲ್ಲಿ ಮೂರು ವರ್ಷಗಳಲ್ಲಿ ಮಾಡಿದ ಲಾಭದ ಮೇಲೆ ಶೇ. 100% ರಷ್ಟು ತೆರಿಗೆ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ 25 ಕೋಟಿ ರೂ.ಗಿಂತ ಹೆಚ್ಚು ಇರುವಂತಿಲ್ಲ. ಇಂತಹ ಸ್ಟಾರ್ಟ್ ಅಪ್ ಗಳಿಗೆ ಇದನ್ನು ಈಗ ಮಾರ್ಚ್ 31, 2023 ಕ್ಕೆ ವಿಸ್ತರಿಸಲಾಗಿದೆ.
- ತಂತ್ರಜ್ಞಾನವನ್ನು ರೈತರ ಹೊಲ ಗದ್ದೆಗಳಿಗೆ ಇಳಿಸುವ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವದ ಕನಸಿಗೆ ಪ್ರಧಾನಿ ಅವರು ಈ ಬಜೆಟ್ ನಲ್ಲಿ ಶಕ್ತಿ ತುಂಬಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ನಬಾರ್ಡ್ ಮೂಲಕ ವಿವಿಧ ಕಾರ್ಯಕ್ರಮಗಳ ಜಾರಿಗೆ ಸರ್ಕಾರ ಮುಂದಾಗಲಿದೆ. ನೈಸರ್ಗಿಕ ಕೃಷಿ ಜತೆಗೆ ಶೂನ್ಯ ಬಂಡವಾಳ ಹಾಗೂ ಸಾವಯವ ಕೃಷಿ ಪದ್ಧತಿ ಫೋತ್ಸಾಹಕ್ಕೆ ಘೋಷಿಸಿರುವ ಕ್ರಮಗಳು ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ಹೆಚ್ಚು ಆರೋಗ್ಯ ಪೂರ್ಣವಾಗಿತ್ತದೆ ಎಂದು ಭರವಸೆ ಹೊಂದಲು ಅಡ್ಡಿ ಇಲ್ಲ.
ಭವಿಷ್ಯದ ಪ್ರಜೆಗಳ ಭವಿಷ್ಯ
- ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಸತ್ಯವನ್ನು ಕೇಂದ್ರ ಸರ್ಕಾರ ಚೆನ್ನಾಗಿ ಮನಗಂಡಿದೆ. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆನ್‌ಲೈನ್ ಬಳಕೆಯ ಸಮರ್ಪಕ ಬಳಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ “ಒನ್ ಕ್ಲಾಸ್, ಒನ್ ಟಿವಿ ಚಾನೆಲ್” ಯೋಜನೆಯಡಿ 200 ಟಿ.ವಿ ಚಾನಲ್, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪಸುವ ಘೋಷಣೆಗೆ ಮುಂದಾಗಿರುವುದು ಮುಂದಿನ ದಿನಗಳಲ್ಲಿ ಶಿಕ್ಷಣದ ಸಮಗ್ರ ಅಭಿವೃದ್ಧಿಗೆ ಪೂರಕ ಹೆಜ್ಜೆ ಇಟ್ಟಿರುವುದರ ಸಂಕೇತ. ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿರುವ ಶಿಕ್ಷಣ ಕ್ಷೇತ್ರಕ್ಕೆ ಇದು ಸಂಜೀವಿನಿ,
ರಕ್ಷಣಾ ಕ್ಷೇತ್ರಕ್ಕೆ ಬಲ
- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರಕ್ಷಣೆಗೆ ಕಟಿಬದ್ದವಾಗಿದೆ. ದೇಶದ ಗಡಿಯನ್ನು ರಕ್ಷಿಸುವಲ್ಲಿ ಹಾಗೂ ಆಂತರಿಕ ಶಾಂತಿ ಕಾಪಾಡುವಲ್ಲಿ ಅಭೂತಪೂರ್ವ ಕೆಲಸ ಮಾಡುತ್ತ ಬಂದಿದೆ. ರಕ್ಷಣಾ ಕ್ಷೇತ್ರಕ್ಕೆ ಈ ಭಾರಿ ಬಜೆಟ್ ನಲ್ಲಿ 5,25,166 ಕೋಟಿ ಮೀಸಲಿಟ್ಟಿರುವುದು ಒಂದು ದಾಖಲೆಯೇ ಸರಿ. ಜತೆಗೆ ಸೇನಾ ಸಲಕರಣೆಯಲ್ಲಿ ಸ್ವಾವಲಂಬನೆ ಮಂತ್ರವನ್ನು ಜಪಿಸಲಾಗಿದೆ. ರಕ್ಷಣಾ ಉಪಕರಣಗಳ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗಿದೆ. ರಕ್ಷಣಾ ಉಪಕರಣಗಳ ಖರೀದಿಯಲ್ಲಿ ಶೇ. 68 ರಷ್ಟನ್ನು ದೇಶಿಯ ಕೈಗಾರಿಕೆಗಳಿಗೆ ಮೀಸಲಿಡಲು ನಿರ್ಧರಿಸಿರುವುದು ಒಂದು
ಐತಿಹಾಸಿಕ ಕ್ರಮ,
ರೈಲ್ವೆ ಕ್ಷೇತ್ರದ ಅಭಿವೃದ್ಧಿ
- ಅತ್ಯಾಧುನಿಕ ಮತ್ತು ಐಷಾರಾಮಿಯಾದ 400 ‘ವಂದೇ ಭಾರತ್’ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದನೆ ಮಾಡಲಾಗುವುದು, ಈ ಹೊಸ ರೈಲುಗಳು ಪ್ರಯಾಣಿಕರಿಗೆ ಹಿತಾನುಭವವನ್ನು ನೀಡಲಿದ್ದು, ಸಣ್ಣ ಉದ್ಯಮಗಳು (ಎಂಎಸ್.ಎಂ.ಇ.) ಮತ್ತು ರೈತರಿಗೆ ನೆರವಾಗಲು ಹೊಸ ಸೇವೆಗಳನ್ನು ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆ ಪರಿಚಯಿಸಲಿದೆ.
- 2018 ರಲ್ಲಿ 180 ಕಿಮೀ ವೇಗದಲ್ಲಿ ಓಡಲು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಆವೃತ್ತಿ-1 ‘ವಂದೇ ಭಾರತ್’ ರೈಲಿನ ಮೊದಲ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಿ ಮತ್ತು ವಿನ್ಯಾಸಗೊಳಿಸಲಾಗಿತ್ತು. ಭಾರತೀಯ ರೈಲ್ವೆ ಎಂಜಿನಿಯರ್‌ಗಳು ಈ ರೈಲನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದರು. ‘ವಂದೇ ಭಾರತ್’ ರೈಲಿನ ಎರಡನೇ ಆವೃತ್ತಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗದ ನಂತರ, ಭಾರತೀಯ ರೈಲ್ವೆ ಪ್ರತಿ ತಿಂಗಳು 7 ರಿಂದ 8 ರೈಲುಗಳನ್ನು
ತಯಾರಿಸಲು ಪ್ರಾರಂಭಿಸುತ್ತದೆ. - ಹೊಸ 400 ಹೊಸ ತಲೆಮಾರಿನ ‘ವಂದೇ ಭಾರತ್’ ಪ್ರೀಮಿಯರ್ ರೈಲುಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುವ ಜನರ ನಿರೀಕ್ಷೆಯೊಂದಿಗೆ ಪ್ರತ್ಯೇಕ ವಿಭಾಗವನ್ನು ರಚಿಸುತ್ತವೆ. ಸರಳ ರೀತಿಯಲ್ಲಿ, ‘ವಂದೇ ಭಾರತ್’ ರೈಲು ಹೊಸ ತಂತ್ರಜ್ಞಾನಗಳೊಂದಿಗೆ ಹೊಸ ವೇದಿಕೆಯಾಗಿದೆ ಎಂದು ತಿಳಿಯಬೇಕು. 2021 ರಲ್ಲಿ ಪ್ರಧಾನಿ ಘೋಷಿಸಿದ್ದ 75 ‘ವಂದೇ ಭಾರತ್’ ರೈಲುಗಳ ಸಂಖ್ಯೆಯನ್ನು ಮುಂದಿನ ಮೂರು ವರ್ಷಗಳಲ್ಲಿ 400 ರೈಲುಗಳಿಗೆ ಏರಿಕೆ ಮಾಡಲಾಗಿದೆ.
- ಹೊಸ ಪೀಳಿಗೆಯ 400 ವಂದೇ ಭಾರತ್ ರೈಲುಗಳು ಪರಿಸರ ಸ್ನೇಹಿಯಾಗಿದ್ದು, ಇವುಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿ, ಉತ್ಪಾದನೆ ಮಾಡಲಾಗುವುದು. ಸಮಯಪಾಲನೆ ಮತ್ತು ಅತ್ಯಾಧುನಿಕ ಸೌಕರ್ಯಗಳನ್ನು ಈ ರೈಲುಗಳು ಒದಗಿಸುತ್ತವೆ. ದೇಶದ ಹಲವು ನಗರಗಳ ನಡುವೆ ‘ವಂದೇ ಭಾರತ್’ ರೈಲುಗಳು ಸಂಚರಿಸಲಿವೆ.
- ದೇಶದ ಎಲ್ಲಾ ಮೆಟ್ರೋ ಕಾಮಗಾರಿಗಳಿಗೆ ರೂ.19,130/- ಕೋಟಿಗಳನ್ನು ಒದಗಿಸಲಾಗಿದೆ.
ಸಹಕಾರ ಕ್ಷೇತ್ರಕ್ಕೆ ನೆರವು
- ಸಹಕಾರ ಸಂಘಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿರುವುದು ಸಂತಸದ ವಿಷಯ. ಪ್ರಸ್ತುತ ಸಹಕಾರ ಸಂಘಗಳು ಪಾವತಿಸುತ್ತಿದ್ದ ಶೇ.18% ರ ತೆರಿಗೆಯನ್ನು ಶೇ. 15% ಕ್ಕೆ ಇಳಿಕೆ ಮಾಡಿದೆ. ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮತ್ತು 10 ಕೋಟಿ ರೂಪಾಯಿವರೆಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್ ಚಾರ್ಜ್ ಅನ್ನು ಶೇ.12% ಶೇ.7% ಕ್ಕೆ ಇಳಿಕೆ ಮಾಡುವುದಾಗಿ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಇದರಿಂದಾಗಿ ಸಹಕಾರ ಸಂಘಗಳು ಮತ್ತು ಸಹಕಾರ ಸಂಘಗಳ ಸದಸ್ಯರ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.
ಸಹಹಕಾರ ಕ್ಷೇತ್ರಕ್ಕೆ ನೆರವು
- ಸಹಕಾರ ಸಂಘಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿರುವುದು ಸಂತಸದ ವಿಷಯ, ಪ್ರಸ್ತುತ ಸಹಕಾರ ಸಂಘಗಳು ಪಾವತಿಸುತ್ತಿದ್ದ ಶೇ.18% ರ ತೆರಿಗೆಯನ್ನು ಶೇ. 15% ಕ್ಕೆ ಇಳಿಕೆ ಮಾಡಿದೆ. ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮತ್ತು 10 ಕೋಟಿ ರೂಪಾಯಿವರೆಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್ ಚಾರ್ಜ್ ಅನ್ನು ಶೇ.12% ಶೇ.7% ಕ್ಕೆ ಇಳಿಕೆ ಮಾಡುವುದಾಗಿ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಇದರಿಂದಾಗಿ ಸಹಕಾರ ಸಂಘಗಳು ಮತ್ತು ಸಹಕಾರ ಸಂಘಗಳ ಸದಸ್ಯರ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.
ಆರೋಗ್ಯ ಕ್ಷೇತ್ರ
- ಈ ಬಜೆಟ್‌ನಲ್ಲಿ ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮಕ್ಕೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯನ್ನು ನೋಡಲ್ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ತಂತ್ರಜ್ಞಾನದ ಬೆಂಬಲ ನೀಡಲಾಗುವುದು.
- ರಾಷ್ಟ್ರೀಯಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಮುಕ್ತ ವೇದಿಕೆಯನ್ನು ಆರಂಭಿಸಲಾಗುವುದು. 23 ಮಾನಸಿಕ ಆರೋಗ್ಯ ಕೇಂದ್ರಗಳ ನೆಟ್‌ವರ್ಕ್ನ್ನು ಸ್ಥಾಪಿಸಲಾಗುವುದು. ಇದಕ್ಕೆ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಹಾಗೂ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಸರ್ವೇಷನ್ ಟೆಕ್ನಾಲಜಿ-ಬೆಂಗಳೂರು (ಐ.ಐ.ಐ.ಟಿ.ಬಿ) ತಂತ್ರಜ್ಞಾನ ಬೆಂಬಲವನ್ನು ಒದಗಿಸುತ್ತದೆ.
- ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಎಲ್ಲಾ ವಯಸ್ಸಿನ ಜನರಿಗೆ ಈ ಉಪಕ್ರಮವು ಹೆಚ್ಚು ಅಗತ್ಯವಿರುವ ಮಾನಸಿಕ ಆರೋಗ್ಯ ಬೆಂಬಲವನ್ನು ಒದಗಿಸುತ್ತದೆ. ಈ ಉಪಕ್ರಮವು 23 ಶ್ರೇಷ್ಠತೆಯ ಕೇಂದ್ರಗಳ ಜಾಲವನ್ನು ಒಳಗೊಂಡಿರುತ್ತದೆ ಮತ್ತು ನಿಮ್ಹಾನ್ಸ್ ಇವುಗಳಿಗೆ ನೋಡಲ್ ಕೇಂದ್ರವಾಗಿದೆ. ಸಾಂಕ್ರಾಮಿಕ ರೋಗದ ಕಳೆದ ಎರಡು ವರ್ಷಗಳಲ್ಲಿ ದೈಹಿಕ, ಮಾನಸಿಕ ಮತ್ತು ಆರ್ಥಿಕ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿರುವ ದೇಶಾದ್ಯಂತ ಲಕ್ಷಾಂತರ ಜನರಿಗೆ ಇದು ಸಹಾಯ ಮಾಡುವ ನಿರೀಕ್ಷೆಯಿದೆ,
- ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ತಜ್ಞರ ಕೊರತೆ ಮತ್ತು ಮನೋರೋಗ, ಆತಂಕ, ಖಿನ್ನತೆ, ಮಾದಕ ದ್ರವ್ಯ ಸೇವನೆ ಮುಂತಾದ ವಿವಿಧ ಅಸ್ವಸ್ಥತೆಗಳಿಗೆ ಚಿಕಿತ್ಸೆಯ ಅಂತರವಿರುವುದರಿಂದ ಈ ಕಾರ್ಯಕ್ರಮವು ಸ್ವಾಗತಾರ್ಹ ಕ್ರಮವಾಗಿದೆ.
- ಸಾಂಕ್ರಾಮಿಕ ರೋಗದ ಮೊದಲ ಮತ್ತು ಎರಡನೆಯ ಅಲೆಗಳ ಸಮಯದಲ್ಲಿ 25 ಲಕ್ಷಕ್ಕೂ ಹೆಚ್ಚು ಟೆಲಿ ಕೌನ್ಸೆಲಿಂಗ್ ಸೆಷನ್‌ಗಳನ್ನು ನಡೆಸುವುದರೊಂದಿಗೆ ಕರ್ನಾಟಕದಲ್ಲಿ ಇದೇ ರೀತಿಯ ಉಪಕ್ರಮವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾವೇರಿ, ಕೃಷ್ಣಾ ಮತ್ತು ಪೆನ್ನಾರ್ ನದಿ ಜೋಡಣೆ ಪ್ರಸ್ತಾಪ ಇರುವುದು ಸ್ವಾಗತಾರ್ಹ
- ಬಜೆಟ್ ಮಂಡಿಸಿದ ಹಣಕಾಸು ಸಚಿವರು ಮಹಾಭಾರತದ ಶಾಂತಿ ಪರ್ವದ ಸಾಲೊಂದನ್ನು ಉಲ್ಲೇಖಿಸಿದರು. ಧರ್ಮದ ಹಾದಿಯಲ್ಲಿ ಸರ್ಕಾರವನ್ನು ನಡೆಸುವ ದೊರೆ, ಪ್ರಜೆಗಳ ಕಲ್ಯಾಣಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎನ್ನುವುದು ಅದರ ಅರ್ಥ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಮಂಡಿಸಿರುವ ಬಜೆಟ್ “ಸಬ್ ಕಾ ಸಾತ್, ಸಬ್ ಕಾ ವಿಕಾಸ್” ಎಂಬ ಅದ್ಭುತ ಮಂತ್ರವನ್ನು ತನ್ನ ತಿರುಳಾಗಿ ಹೊಂದಿದೆ. ಜತೆಗೆ ಬಡವರ ಬದುಕಿನಲ್ಲಿ ಆರ್ಥಿಕ ಚೈತನ್ಯದ ಹೊಸ ಬೆಳಕು ಮೂಡಿಸುವ ಸಂಕಲ್ಪವನ್ನು ಒಳಗೊಂಡಿದೆ.
- ಕಾವೇರಿ, ಪೆನ್ನಾರ್ ಸೇರಿದಂತೆ ದೇಶದ ಪ್ರಮುಖ 5 ನದಿಗಳ ಜೋಡಕೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಕೃಷ್ಣಾ-ಪೆನ್ನಾರ್ ನದಿ, ನರ್ಮದಾ-ಗೋದಾವರಿ, ಗೋದಾವರಿ- ಕೃಷ್ಣ ಜೋಡಣೆಗೂ ಅನುಮೋದನೆ ನೀಡಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಒಟ್ಟು 44,000 ಕೋಟಿ ರೂಪಾಯಿ ನೀಡಲಾಗಿದೆ.
- ಒಟ್ಟಾರೆ ಬಜೆಟ್ ಭಾರತವನ್ನು ಜಗತ್ತಿನಲ್ಲಿಯೇ ಅತ್ಯಂತ ಬಲಶಾಲಿ ದೇಶವನ್ನಾಗಿ ರೂಪಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಒಳಗೊಂಡ ಆರ್ಥಿಕ ಕ್ರಮವಾಗಿದೆ. ಆರ್ಥಿಕ ವ್ಯವಸ್ಥೆಯ ಭವಿಷ್ಯದ ಸವಾಲುಗಳನ್ನು ಎದುರಿಸಲು ದೇಶವನ್ನು ಸಜ್ಜು ಮಾಡುವ ದೂರದೃಷ್ಟಿಯನ್ನು ಹೊಂದಿದೆ. ದೇಶದ ಸಮಗ್ರ ಕಲ್ಯಾಣಕ್ಕೆ ಹೊಸ ಚೈತನ್ಯ ನೀಡಲಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್, ಶಾಸಕ ಅಶೋಕ್ ನಾಯ್ಕ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವರಾಜು, ಬಿ. ಕೆ. ಶ್ರೀನಾಥ್, ಧರ್ಮಪ್ರಸಾದ್, ಸೂಡಾ ಅಧ್ಯಕ್ಷ ಎನ್. e. ನಾಗರಾಜ್, ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ. ಆರ್. ಮಧುಸೂದನ್, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕೆರೆಕೈ, ಮಾಧ್ಯಮ್ ಪ್ರಮುಖ್ ಅಣ್ಣಪ್ಪ ಸೇರಿದಂತೆ ಪ್ರಮುಖರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post