ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರ ಭಕ್ತರ ಬಳಗದ ವತಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಲೋಕಸಭಾ ಚುನಾವಣೆಗೆ #LoksabhaElection2024 ಸ್ಪರ್ಧಿಸಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ತಮ್ಮ ಪತ್ನಿಯ ಹೆಸರಿನಲ್ಲಿರುವುದೂ ಸೇರಿ ಒಟ್ಟು 134 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ.
ತಾವು ಸಲ್ಲಿಸಿರುವ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್’ನಲ್ಲಿ #Affidavit ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ.

ಈಶ್ವರಪ್ಪ ಹೆಸರಿನಲ್ಲಿ 300 ಗ್ರಾಂ ಬಂಗಾರ #Gold ಇದ್ದು, ಬೆಳ್ಳಿ 2 ಕೆಜಿ, ಪತ್ನಿಯ ಬಳಿ 500 ಗ್ರಾಂ ಬಂಗಾರ, 5 ಕೆಜಿ ಬೆಳ್ಳಿಯಿದೆ. ಶಿವಮೊಗ್ಗದಲ್ಲಿ #Shivamogga ವಾಸದ ಮನೆ, ಜಯನಗರದಲ್ಲಿ ಈಶ್ವರಪ್ಪ ನಿವೇಶನ ಹೊಂದಿದ್ದಾರೆ.

ಇನ್ನು, ಈಶ್ವರಪ್ಪನವರು 5.87 ಕೋಟಿ ರೂ. ಸಾಲ ಮಾಡಿದ್ದು, ಪತ್ನಿ ಹೆಸರಿನಲ್ಲಿ 70.80 ಲಕ್ಷ ರೂ. ಸಾಲವಿದೆ.

ಈಶ್ವರಪ್ಪ ಅವರು ತಮ್ಮ ಪತ್ನಿಗೆ ಸಾಲ ನೀಡಿದ್ದು, ಇಬ್ಬರ ಬಳಿಯೂ ಸಹ ಒಂದೇ ಒಂದು ವಾಹನವಿಲ್ಲ. ಬಿಕಾಂ ಪದವೀಧರ ಈಶ್ವರಪ್ಪ ಅವರ ವಿರುದ್ಧ ಒಂದೇ ಒಂದು ಪ್ರಕರಣವಿಲ್ಲ ಎಂದು ಅಫಿಡವಿಟ್’ನಲ್ಲಿ ಉಲ್ಲೇಖಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post