ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೆ ಅಮಿತ್ ಶಾ ಅವರ #Amith Shah ಸೂಚನೆಯ ಮೇರೆಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡನ್ನು ನಿಲ್ಲಿಸಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ #Sangolli Rayanna Briged ಆರಂಭಿಸಿದಾಗ ಯಡಿಯೂರಪ್ಪ #Yadiyurappa ದೆಹಲಿಗೆ ತೆರಳಿ ಅಮಿತ್ ಶಾ #Amith Shah ಬಳಿ ದೂರು ನೀಡಿದರು. ಆಗ ಅಮಿತ್ ಶಾ ನನ್ನ ದೆಹಲಿಗೆ ಕರೆಸಿದರು ಎಂದರು.
ನಾನು ಹೋಗಿದ್ದೆ ಅಲ್ಲಿ ಮೂರು ಗಂಟೆಗಳ ಕಾಲ ಚರ್ಚೆ ನಡೆಯಿತು. ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಹಿಂದುಳಿದ ವರ್ಗದವರು ಇದ್ದಾರೆ. ನಿಮಗೆ ಹಿಂದುಳಿದ ವರ್ಗದವರು ಬೇಡವಾ ಎಂದು ಪ್ರಶ್ನೆ ಮಾಡಿದೆ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಒಪ್ಪಲಿಲ್ಲ ಅಮಿತ್ ಶಾ ನಿಲ್ಲಿಸಲು ಸೂಚಿಸಿದರು. ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದೆ ಎಂದರು.
Also read: ಮೋಸ ಮಾಡಿಲ್ಲ ಎಂದು ರಾಘವೇಂದ್ರ ಅಯೋಧ್ಯೆಯಲ್ಲಿ ಗಂಟೆ ಹೊಡೆಯಲಿ: ಈಶ್ವರಪ್ಪ ಸವಾಲ್
ಕಳೆದ ಚುನಾವಣೆಯಲ್ಲಿ ಚುನಾವಣೆಯಿಂದ ಹಿಂದೆ ಸರಿಯಲು ಹೇಳಿದರು. ತಕ್ಷಣ ಕೇಂದ್ರದವರಿಗೆ ಪತ್ರ ಬರೆದು ಹಿಂದೆ ಸರಿದೆ. ಕಾಂತೇಶ್ ಗೆ ಹಾವೇರಿಯಲ್ಲಿ ಟಿಕೆಟ್ ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡಿದರು. ಅಪ್ಪ ಮಕ್ಕಳ ಹಿಡಿತದಲ್ಲಿ ಬಿಜೆಪಿ ಇದೆ. ಇದರ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ವಿವರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post