ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ಕತ್ತಲಾಗುತ್ತಿದ್ದಂತೆ ಯಾವುದೊ ಪ್ರಪಂಚಕ್ಕೆ ತಿರುಗುತ್ತದೆ. ಹಗಲಿಡಿ ಭಿಕ್ಷಾಟನೆ ಹೆಸರಲ್ಲಿ ಜನರಿಂದ ಸುಲಿಗೆ ಮಾಡಿದ ಹಣ ರಾತ್ರಿಯಾಗುತ್ತಿದ್ದಂತೆ ತೀರ್ಥ ಸೇವನೆಗೆ ಬಳಕೆಯಾಗಿ ಜಗಳ ಹೊಡೆದಾಟ ಶುರುವಾಗುತ್ತದೆ. ಇದಕ್ಕೆ ಬಸ್ ಸ್ಟ್ಯಾಂಡ್ ನ ಯಾವುದೋ ಮೂಲೆ ಆಗಬೇಕಿಂದಿಲ್ಲ. ಮುಂದುಗಡೆ ಪ್ರಯಾಣಿಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಮಿಸಿದ್ದ ವಿಶಾಲ ಜಾಗವೇ ಇವರುಗಳ ಕಾಯಕಕ್ಕೆ ವೇದಿಕೆಯಾಗುತ್ತದೆ.ಕೆಲವು ಅಮಾಯಕ ಪ್ರಯಾಣಿಕರು ಇಲ್ಲಿ ವಿಶ್ರಾಂತಿಗೆ ಬಂದಿದ್ದರೆ ಅವರನ್ನು ಹೆದರಿಸಿ ಸುಲಿಗೆ ಮಾಡುವ ಕಾಯಕವೂ ನಡೆಯುತ್ತದೆ.

ಸ್ಥಳದಲ್ಲಿ ಕಾರ್ಯನಿಮಿತ್ತ ಇರುವ ಒಂದಿಷ್ಟು ಜನರಿಗೆ ಪ್ರತಿನಿತ್ಯದ ಗೋಳು ಇದಾದ್ದರಿಂದ ಗೊಣಗಾಡುವುದು, ಉಳಿದ ಪ್ರಯಾಣಿಕರು ಆದಷ್ಟು ಬೇಗ ಈ ಸ್ಥಳದಿಂದ ದೂರ ಹೋದರೆ ಸಾಕು ಎಂದು ಚಡಪಡಿಸುವುದು ಕಂಡುಬಂತು!
ಶಿವಮೊಗ್ಗ ಪೊಲೀಸರು ಪ್ರೈವೇಟ್ ಬಸ್ ನಿಲ್ದಾಣದ ಈ ಪಬ್ಲಿಕ್ ಇಷ್ಯೂಗೆ ಒಂದು ಫುಲ್ ಸ್ಟಾಪ್ ನೀಡುವರೇ? ಕಾದು ನೋಡೋಣ.
ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ










Discussion about this post