ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರನ್ನು ವಿನಂತಿಸಿಕೊಳ್ಳಲಾಗಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಅನುಮತಿ ದೊರೆಯಬೇಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP B Y Raghavendra ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಸ್ವತಃ ಆಗಮಿಸಿ ವಿಮಾನ ನಿಲ್ದಾಣವನ್ನು ಉದ್ಘಾಟಿಸುವಂತೆ ಪ್ರಧಾನಿಯವರನ್ನು ಅಧಿಕೃತವಾಗಿ ಕೋರಲಾಗಿದೆ. ಸಾಮಾನ್ಯವಾಗಿ 15 ದಿನದ ಮುನ್ನ ಅವರು ಆಗಮಿಸುವ ಕುರಿತಂತೆ ಖಚಿತ ಪಡಿಸುತ್ತಾರೆ. ಈ ಕುರಿತಂತೆ ಅಧಿಕೃತ ಮಾತುಕತೆಗಳು ನಡೆದಿವೆ. ಖುದ್ಧು ಪ್ರಧಾನಿಯವರು ಆಗಮಿಸುತ್ತಾರೆ ಎಂಬ ಭರವಸೆ ನಮಗಿದೆ ಎಂದರು.
ಇನ್ನು, ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿದೆ. ವಿಮಾನ ನಿಲ್ದಾಣಕ್ಕೆ ಅಂತಿಮ ಲೈಸೆನ್ಸ್ ನೀಡುವ ಡಿಜಿಸಿಎ ಅಧಿಕಾರಿಗಳು ಬಹುತೇಕ ಈ ತಿಂಗಳ 10ನೆಯ ತಾರೀಕಿನ ವೇಳೆಗೆ ಇಲ್ಲಿಗೆ ಭೇಟಿ ನೀಡಲಿದ್ದಾರೆ. ಎರಡು ದಿನ ವಾಸ್ತವ್ಯ ಹೂಡಿ ಸಂಪೂರ್ಣ ಪರಿಶೀಲನೆ ನಡೆಸಿ, ಈ ಸಂಬಂಧಿತ ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post