ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಿಂದ ಬೆಂಗಳೂರಿಗೆ ಮಂಗಳವಾರ ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಭದ್ರಾವತಿ ತಾಲ್ಲೂಕ್ ಬಿ.ಆರ್.ಪ್ರಾಜೆಕ್ಟ್ ನಿವಾಸಿಯಾದ ಅನ್ನಪೂರ್ಣ ಅವರನ್ನು ಅಮಾನುಷವಾಗಿ ಹತ್ಯೆಗೈದು ರೈಲಿನಲ್ಲಿ ಹೊರಗೆ ತಳ್ಳಿರಬಹುದು ಎನ್ನಲಾದ ಘಟನೆಯ ಬಗ್ಗೆ ಅಂದು ಕಾರ್ಯನಿರ್ವಾಹಿಸುತ್ತಿದ್ದ ರೈಲ್ವೆ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಂಡು, ಕೊಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಹಾಗೂ ಕೊಲೆಗಡಕರುಗಳನ್ನು ಶೀಘ್ರವಾಗಿ ಬಂಧಿಸುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ರಮೇಶ್ ಶೆಟ್ಟಿ ಶಂಕರಘಟ್ಟ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಇಂತಹ ಘಟನೆಗಳಿಂದ ರಾತ್ರಿ ಹೊತ್ತು ರೈಲುಗಳಲ್ಲಿ ಮಹಿಳೆಯರಿಗೆ ಮೀಸಲಾದ ಬೋಗಿಯಲ್ಲಿ ಏಕಾಂಗಿ ಹೆಣ್ಣು ಮಕ್ಕಳು ಪ್ರಯಾಣಿಸುವುದು ಎಷ್ಟು ಸುರಕ್ಷಿತ ಎಂಬುದು ಪ್ರಯಾಣಿಕರು ಯೋಚಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಆಧಿಕಾರಿಗಳು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
Also read: ಸಮುದ್ರದಲ್ಲಿ ಬೋಟ್ ಮುಳುಗಡೆ: ಸ್ಥಳೀಯರ ಸಮಪ್ರಜ್ಞೆಯಿಂದ ಮೀನುಗಾರರ ರಕ್ಷಣೆ
ಬಿ.ಆರ್.ಪ್ರಾಜೆಕ್ಟ್ ನಲ್ಲಿ ಸುಮಾರು 60 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸವಾಗಿರುವ ಅತ್ಯಂತ ಸುಸಂಸ್ಕøತ ವರ್ಗದ ರಾನಡೆ ಕುಟುಂಬಕ್ಕೆ ಸೇರಿದ ಈ ಹೆಣ್ಣುಮಗಳು ಅನ್ನಪೂರ್ಣ ಅತ್ಯಂತ ಸೌಮ್ಯ ಸ್ವಭಾವದ ಬುದ್ದಿವಂತೆ. ತಾನು ಕೆಲಸ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯಲ್ಲಿಯೂ ಒಳ್ಳೆಯ ಹೆಸರನ್ನು ಗಳಿಸಿದ್ದ ಇವರಿಗೆ ಈ ರೀತಿಯ ಸಾವು ಬರದಿತ್ತು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















