ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಿಳೆಯರು ಸಾಮಾಜಿಕ ಬದ್ಧತೆ ಹಾಗೂ ಸ್ವಾಸ್ತ್ಯ ಕುರಿತು ಸ್ವಯಂ ರಕ್ಷಣಾ ಕೌಶಲ್ಯವನ್ನು ಅಳವಡಿಸಿಕೊಳ್ಳುವಂತೆ ಪಿಇಎಸ್ ಟ್ರಸ್ಟ್‌ನ ಜಂಟಿಕಾರ್ಯದರ್ಶಿ ಎಸ್.ವೈ. ಅರುಣಾದೇವಿ ಕರೆ ನೀಡಿದರು.
ಪಿಇಎಸ್‌ಐಟಿಎಂನ ಮಹಿಳಾ ಸಬಲೀಕರಣ ಘಟಕ ಹಾಗೂ ಸಿವಿಲ್ ವಿಭಾಗದ ಜಂಟಿ ಸಹಭಾಗಿತ್ವದಲ್ಲಿ ನಡೆದ ಮಹಿಳೆಯರಿಗಾಗಿ ಒಂದು ದಿನದ ಸ್ವಯಂ ರಕ್ಷಣಾ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಗೂ ಇದೇ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ಘಟಕದ ಲಾಂಛನವನ್ನು ಬಿಡುಗಡೆಗೊಳಿಸಿದರು.
ರಾಷ್ಟ್ರಮಟ್ಟದ ಕುಡೋ ಮತ್ತು ಕರಾಟೆಯಲ್ಲಿ ಪ್ರಶಸ್ತಿ ಗಳಿಸಿದ ಸಬ ತಸ್ಕಿನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಹಿಳೆಯರ ಸ್ವಯಂ ರಕ್ಷಣೆಗಾಗಿ ಇರುವ ವಿಧಾನಗಳನ್ನು ವಿವರವಾಗಿ ವಿವರಿಸಿದರು.
Also read: ಪೊಲೀಸ್ ತನಿಖೆಯಿಂದ ಚಂದ್ರಶೇಖರ್ ಸಾವಿನ ಸತ್ಯ ಬಯಲಾಗಲಿದೆ: ಸಂಸದ ರಾಘವೇಂದ್ರಪೊಲೀಸ್ ತನಿಖೆಯಿಂದ ಚಂದ್ರಶೇಖರ್ ಸಾವಿನ ಸತ್ಯ ಬಯಲಾಗಲಿದೆ: ಸಂಸದ ರಾಘವೇಂದ್ರ
ಕಾಲೇಜಿನ ಆಡಳಿತಾಧಿಕಾರಿಗಳಾದ ಡಾ. ಆರ್. ನಾಗರಾಜ ಮಾತನಾಡಿ, ಮಹಿಳೆಯರು ಶೈಕ್ಷಣಿಕ ಪ್ರಾಮುಖ್ಯತೆಯನ್ನು ಪಡೆದಿದ್ದೇ ಆದಲ್ಲಿ ಸಬಲೀಕರಣದತ್ತ ಸಾಗಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಚೈತನ್ಯ ಕುಮಾರ್ ಮಾತನಾಡಿ, ಮಹಿಳೆಯರು ಆರ್ಥಿಕ ಪ್ರಾಬಲ್ಯತೆಯನ್ನು ಪಡೆದಲ್ಲಿ ಮಾತ್ರ ಸಬಲೀರಣ ಸಾಧ್ಯವೆಂದು ತಿಳಿಸಿದರು.
ಸಮಾರಂಭದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಎಂ.ಎನ್. ಹಿರೇಮಠ್, ಸಹ ಪ್ರಾಧ್ಯಾಪಕಿ ವಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post