ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬದುಕಿನಲ್ಲಿ ಅಧ್ಯಯನ ಮತ್ತು ಅನುಭವಿಲ್ಲದ ಮಾತುಗಳು ಅರ್ಥಹೀನ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಅಭಿಪ್ರಾಯಪಟ್ಟರು.
ಗುರುವಾರ ನಗರದ ಕಸ್ತೂರ ಬಾಲಿಕ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕಿ ಜ್ಯೋತಿ ರಚಿಸಿರುವ ಸಾಮಾನ್ಯ ಕಂಪ್ಯೂಟರ್ ಅಧ್ಯಯನಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

Also read: India strengthens the CITES protection to Leith’s Soft-shelled Turtle
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಾವಿದ್ದೇವೆ. ಯಾರಲ್ಲಿ ಅತಿ ಹೆಚ್ಚು ಜ್ಞಾನ ಮಾಹಿತಿ ಇದೆಯೊ ಅವರೇ ನಿಜವಾದ ಶ್ರೀಮಂತ. ತಂತ್ರಜ್ಞಾನದ ಕಲಿಕೆಗೆ ಯಾವುದೇ ಸೀಮಿತತೆ ಇಲ್ಲ. ಲ್ಯಾಟಿನ್ ಭಾಷೆಯಲ್ಲಿ ಕಂಪ್ಯೂಟರ್ ಎಂದರೇ ಯೋಚಿಸಿ ಕೆಲಸ ಮಾಡುವುದು ಎಂದರ್ಥ. ಅದರೇ ಇಂದು ಕಂಪ್ಯೂಟರ್ ಅನೇಕ ಯೋಚಿತ ತಾಂತ್ರಿಕ ಬದಲಾವಣೆಗಳಿಗೆ ಕಾರಣವಾಗಿದೆ. ನಾವು ಕಲಿಯುವ ಎಕ್ಸೆಲ್, ವರ್ಡ್ ಮೂಲಕ ಉನ್ನತ ಉದ್ಯೋಗವಕಾಶ ಪಡೆಯಲು ಸಾಧ್ಯ.

ಕಾಲೇಜಿನ ಪ್ರಾಂಶುಪಾಲರಾದ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಲಾಯಿತು.












Discussion about this post