ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವ ಮಾನಸಿಕ ಆರೋಗ್ಯದ ಅಂಗವಾಗಿ ಅ.5ರಿಂದ 8ರವರೆಗೆ ಶ್ರೀವಿಜಯದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರಿಗಾಗಿ ಮಾನಸಿಕ ಆರೋಗ್ಯದ ಕುರಿತ ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಡಾ.ಪವಿತ್ರಾರ 4 ಪುಸ್ತಕಗಳು ಈ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ.
ನೇರವಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಹೆಣ್ಣು ಹೆಜ್ಜೆ ಮತ್ತು ಚಿತ್ತ ಸಮುದ್ರ ಎಂಬ ಪುಸ್ತಕಗಳನ್ನು ಅ. 5 ರಂದು 9 ಗಂಟೆಗೆ ಶ್ರೀಧರ್ ನರ್ಸಿಂಗ್ ಹೋಂನಲ್ಲಿ ಮಾನಸಿಕ ಆರೋಗ್ಯ ಫಲಾನುಭವಿಗಳು ಮತ್ತು ಅವರ ಆತ್ಮೀಯರು ಬಿಡುಗಡೆ ಮಾಡಲಿದ್ದಾರೆ.
ಅ.6 ರಂದು ನೃತ್ಯಕ್ಕೆ ಸಂಬಂಧಿಸಿದ ನೃತ್ಯ ಸಾಂಗತ್ಯ ಎಂಬ ಪುಸ್ತಕವನ್ನು ಶ್ರೀವಿಜಯದ ನೃತ್ಯ ವಿದ್ಯಾರ್ಥಿಗಳು ಪವಿತ್ರಾಂಗಣದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಅ.8ರಂದು ಪ್ರಬಂಧ ಸಂಕಲನ ವಿಹಾರಿ ಮನೋಹಾರಿ ರಾಜೇಂದ್ರನಗರದ ಅನಿಕೇತನ ಬಯಲು ಕಿರು ರಂಗಮಂದಿರದಲ್ಲಿ ಪ್ರೊ.ಜೆ.ಎಲ್. ಪದ್ಮನಾಭ ಮತ್ತು ನಾಗರಾಜ ಕಂಕಾರಿ ಅವರಿಂದ ಹಿರಿಯ ನಾಗರಿಕರು, ಆಡುವ ಮಕ್ಕಳು ಮತ್ತು ಸಾಯಂಕಾಲದ ವಾಯುವಿಹಾರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post