ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಷುಮ್ನಾ ಕ್ರಿಯಾ ಯೋಗದ ನಿಯಮಿತ ಅಭ್ಯಾಸದಿಂದ ಆಧುನಿಕ ಜೀವನ ಶೈಲಿಯ ಒತ್ತಡಗಳಿಂದ ಹೊರಬರಲು ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಲು ಹಾಗೂ ಶಾಶ್ವತ ಆನಂದವನ್ನು ಪಡೆಯಲು ಸಹಾಯಕಾರಿಯಾಗಿದೆ ಎಂದು ಏರ್‌ಲೈನ್ ಪೈಲಟ್ ದಿವ್ಯಾ ನಾರಾಯಣ್ ವಿವರಿಸಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಪೆಸಿಟ್ #PESIT ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ಸುಶುಮ್ನಾ ಕ್ರಿಯಾ ಯೋಗ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸುಷುಮ್ನಾ ಕ್ರಿಯಾ ಯೋಗದ ಇತಿಹಾಸ ಮತ್ತು ಪ್ರಕ್ರಿಯೆಯ ಬಗ್ಗೆ ಒಳನೋಟಗಳನ್ನು ನೀಡಿದರು. ಇದು ಸರಳವಾದ ಹಾಗೂ ಅತ್ಯಂತ ಪರಿಣಾಮಕಾರಿ ಧ್ಯಾನವಾಗಿದೆ ಎಂದು ತಿಳಿಸಿದರು.
Also read: ಹಿರಿಯ ಸಾಹಿತಿ ಕಮಲಾ ಹಂಪನಾ ಇನ್ನಿಲ್ಲ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post