ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯೋಗಾಚಾರ್ಯ ಡಾ ಸಿ.ವಿ.ರುದ್ರಾರಾಧ್ಯರ ನೇತೃತ್ವದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಉಚಿತ ಯೋಗ ಶಿಕ್ಷಣ ನೀಡುತ್ತಿರುವ ಯೋಗ ಶಾಖೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಯೋಗ ಶಿಕ್ಷಣಾರ್ಥಿಗಳಿಂದ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಾಮಾನ್ಯ ಶಿಷ್ಟಾಚಾರದಂತೆ ಯೋಗ ಅಭ್ಯಾಸದ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ವರ್ಷದ ಯೋಗ ದಿನದ ಧ್ಯೇಯ ವಾಕ್ಯದಂತೆ ” ಸ್ವಹಿತ ಮತ್ತು ಸಮಾಜಕ್ಕಾಗಿ ಯೋಗ ” ಎಂಬುದನ್ನು ನಮ್ಮ ಕೇಂದ್ರ ನಿರಂತರವಾಗಿ ಪಾಲಿಸುತ್ತಿದೆ ಎಂದು ನಿವೃತ್ತ ಸಂಸ್ಕøತ ಉಪನ್ಯಾಸಕರು ಡಾ. ಪದ್ಮನಾಭ ಅಡಿಗ ಪ್ರಾಮುಖ್ಯತೆ ತಿಳಿಸಿದರು.
ಭಾರತದ ಪ್ರಾಚೀನ ಸಂಸ್ಕೃತಿಯಲ್ಲಿ ಆರೋಗ್ಯಕ್ಕೆ ಬಹಳ ಮಹತ್ತ್ವ ಕೊಟ್ಟಿದ್ದರು ಎಂಬುದಕ್ಕೆ ಯೋಗಪದ್ಧತಿ ಒಂದು ಉದಾಹರಣೆಯಾಗಿದೆ. ಇಂತಹ ಯೋಗವನ್ನು ಸಮಸ್ತ ಪ್ರಪಂಚದ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಒಂದು ಹವ್ಯಾಸವಾಗಿ ರೂಢಿಸಬೇಕೆಂದು ಸೆಪ್ಟೆಂಬರ್, 2014 ರಲ್ಲಿ ಭಾರತದ ಪ್ರಧಾನಿ ನರೇಂದ್ರಮೋದಿಯವರು ವಿಶ್ವಸಂಸ್ಥೆಯ ಮೂಲಕ ಕರೆಕೊಟ್ಟರು ಎಂದರು.
Also read: ಜೂನ್ 24-26 | ಶೃಂಗೇರಿ ಶ್ರೀಗಳು ಶಿವಮೊಗ್ಗಕ್ಕೆ | ಧರ್ಮಾಧಿಕಾರಿಗಳು ನೀಡಿದ ಕಾರ್ಯಕ್ರಮದ ವಿವರ ಹೀಗಿದೆ
ಯೋಗಪದಕ್ಕೆ ಅನೇಕಾರ್ಥಗಳಿವೆ. ಕವಚ, ಉಪಾಯಮ್ ಧ್ಯಾನ, ಸಂಬಂಧ, ಯುಕ್ತಿ, ಯೋಗ್ಯತೆ ಮೊದಲಾದ ಅರ್ಥಗಳಿದ್ದು ಪತಂಜಲಿಯು ಇದನ್ನು ಧ್ಯಾನದ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಯೋಗ ಶಬ್ದಕ್ಕೆ ಯೋಗಕ್ಕೆ ಅರ್ಹ ಎಂಬರ್ಥದಲ್ಲಿ ಯುಚ್ ಪ್ರತ್ಯಯ ಬಂದು ಯೋಗ್ಯ ಎಂಬ ಶಬ್ದವಾಗಿದೆ. ಸಂಸ್ಕೃತದಲ್ಲಿ ಯೋಗ ಶಬ್ದವನ್ನು ಯುಜಿರ್ ಯೋಗೇ, ಯುಜ್ ಸಮಾಧೌ ಮತ್ತು ಯುಜ್ ಸಂಯಮನೇ ಎಂಬ ಮೂರು ಧಾತುಗಳಿಂದ ನಿಷ್ಪತ್ತಿ ಮಾಡಬಹುದು. ಪತಂಜಲಿಯು ಯುಜ್ ಸಮಾಧೌ ಎಂಬ ಧಾತುವಿನಿಂದ ಯೋಗ ಎಂಬ ಪದವನ್ನು ಹೇಳಿದ್ದಾರೆ. ಆದ್ದರಿಂದ ಯೋಗ ಎಂದರೆ ಏಕಾಗ್ರತೆ, ಸಮಾಧಿ ಎಂದು ಅರ್ಥ. ಯೋಗವು ಆತ್ಮವಿದ್ಯೆಯೂ ಹೌದು ಎಂದರು.
ಇಂದಿನ ಯುವ ಜನಾಂಗವು ಜೀವನಮೌಲ್ಯಗಳ ಕೊರತೆಯಿಂದ ಡ್ರಗ್ಸ್ ಮೊದಲಾದ ಚಟಗಳಿಗೆ ಬಲಿಯಾಗುತ್ತಿದೆ. ಜನರ ಆರೋಗ್ಯ ಸತತವಾಗಿ ಹದಗೆಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯೋಗವು ನಮ್ಮನ್ನು ರಕ್ಷಿಸುತ್ತದೆ ಎಂಬ ಭಾವನೆಯಿಂದ ಈ ಉತ್ಸವವನ್ನು ಆಚರಿಸುತಿದ್ದೇವೆ. ಅಧ್ಯಾತ್ಮ ಲೋಕದಲ್ಲಿ ಜೀವಾತ್ಮಪರಮಾತ್ಮನ ಸಂಯೋಗವೇ ಯೋಗವಾಗಿದೆ ಎಂದರು.
ಎಲ್ಲಾ ಶಾಖೆಗಳ ಶಿಕ್ಷಕರು ಮತ್ತು ಯೋಗ ಕೇಂದ್ರದ ಕಾರ್ಯದರ್ಶಿಯವರಾದ ಎಸ್.ಎಸ್. ಜ್ಯೋತಿ ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post