ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯೋಗ ಪ್ರಾಣಾಯಾಮ #Yoga-Pranayama ಧ್ಯಾನದಿಂದ ಬೌದ್ಧಿಕ ಶಾರೀರಿಕ ಹಾಗೂ ಮಾನಸಿಕ ಸದೃಢತೆಯ ಜೊತೆಗೆ ಖಿನ್ನತೆ ದೂರವಾಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಗುಂಡಪ್ಪ ಶೆಡ್ಡಿನ ಮಲ್ಲೇಶ್ವರ ನಗರದ ಯೋಗಾಚಾರ್ಯ ಸಿವಿ ರುದ್ರಾರಾಧ್ಯ ಯೋಗ ಭವನದಲ್ಲಿ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾದ 15 ದಿನಗಳ ಕಾಲ ಯೋಗ ಪ್ರಾಣಯಾಮ ಧ್ಯಾನ #Meditation ಹಾಗೂ ಜೀವನ ಕೌಶಲ್ಯಗಳ ಬಗ್ಗೆ ಮಾತನಾಡಿದರು.
ಯೋಗ ಪ್ರಾಣಾಯಾಮ ಧ್ಯಾನ ಸದಾ ನಮ್ಮಲ್ಲಿ ಸಕಾರಾತ್ಮಕ ಭಾವನೆ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಒದಗಿಸುತ್ತದೆ. ನಮ್ಮ ದೇಹದಲ್ಲಿ ಇರುವ ಪ್ರತಿಯೊಂದು ಅಂಗಾಂಗಗಳು ಸಮಾತೋಲನದಿಂದ ಹಾಗೂ ನೆಮ್ಮದಿಯಿಂದ ಇರಬೇಕಾದರೆ ಯೋಗ ಪ್ರಾಣಾಯಾಮ ಹಾಗೂ ಧ್ಯಾನವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.

Also read: ಅಧ್ಯಯನ – ಪ್ರವಾಸದಿಂದ ಜ್ಞಾನ, ಸಂವಹನ ಕಲೆ ವೃದ್ಧಿ: ಶ್ರೀ ಮರುಳಸಿದ್ಧ ಸ್ವಾಮೀಜಿ
ಇದೇ ಸಂದರ್ಭದಲ್ಲಿ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತನಾದ ಶಿವಗಂಗಾ ಯೋಗ ಕೇಂದ್ರದ ಯೋಗಚಾರ್ಯ ಸಿವಿ ರುದ್ರಾರಾಧ್ಯ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಪ್ರಪಂಚದ 197 ದೇಶಗಳಲ್ಲಿ ಯೋಗ ಪ್ರಾಣಾಯಾಮ.ಧ್ಯಾನ ಕ್ಕೇ ವಿಶೇಷ ಮಹತ್ವ ದೊರಕಿದೆ. ಯೋಗ ಎಂದರೆ ಈಗ ಸಾಮಾನ್ಯರ ಗ್ರಹಿಕೆಯಲ್ಲಿ ಆಸನಗಳು ಮಾತ್ರ ಆದರೆ ಯೋಗ ದರ್ಶನದ ವ್ಯಾಪ್ತಿ ಇನ್ನೂ ವಿಸ್ತಾರ ಹಾಗೂ ಆಳವು ಆಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಈ 8 ಸಾಧನೆಗಳನ್ನು ಒಳಗೊಂಡಿರುವುದೇ ಹಟವಾದ ಯೋಗ ಎಂದರು.
ಬೌದ್ಧಿಕ, ಶಾರೀರಿಕ ಮತ್ತು ಮಾನಸಿಕ ಸಾಧನೆಗೆ ಒದಗಿಸಿರುವ ಮೆಟ್ಟಿಲುಗಳು ಯೋಗ ನಮ್ಮ ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡುತ್ತದೆ ಹಾಗೂ ಅಸ್ತಮಾ ರೋಗವನ್ನು ಯೋಗದಿಂದ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಈ ಉಚಿತ ಯೋಗ ಶಿಬಿರಗಳನ್ನು ಸಾರ್ವಜನಿಕರು ಸದ್ಯುಪಯೋಗ ಪಡೆಸಿಕೊಂಡಿದ್ದೀರಿ ಎಂಬ ನಿಟ್ಟಿನಲ್ಲಿ ಯೋಗ ಹಾಗೂ ಧ್ಯಾನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೆ. ಈ. ಕಾಂತೇಶ್, ವಿಶ್ವಾಸ್, ಸುಧಾಕರ್ ಮೊಗೇರಾ, ಛಾಯಾಗ್ರಹಕ ಮೋಹನ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ, ಸಂತೋಷ್ ಬಳ್ಳಿಕೆರೆ ಹಾಗೂ ಯೋಗ ಶಿಕ್ಷಕರು ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post