ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಗೋಪಾಲದಾಸರ ಹಾಗೂ ಶ್ರೀ ಸತ್ಯಾಭಿಜ್ಞತೀರ್ಥರ ಆರಾಧನೆಯನ್ನು ಪ್ರಯುಕ್ತ ಗೆಳೆಯ ವೃಂದದ ವತಿಯಿಂದ ಶಿವಮೊಗ್ಗದ ಎಲ್ಲ ಮಾಧ್ವ ಸಮುದಾಯದ ಸಹಕಾರದಿಂದ ಇಂದು ಬೆಳಿಗ್ಗೆ ಶ್ರೀ ಸಂಜೀವಾಂಜನೆಯ ದೇವಸ್ಥಾನದಿಂದ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು.
ಅನಂತರ ಮಹಿಳೆಯರಿಂದ ಭಜನಾ ಕಾರ್ಯಕ್ರಮ ಹಾಗೂ ಪಂಡಿತ ಧರ್ಮಾಚಾರ್ ಪಾಂಡುರಂಗಿ ಇವರಿಂದ ಉಪನ್ಯಾಸವು ನಡೆಸಲಾಯಿತು.
Also read: ಯೋಗ, ಪ್ರಾಣಾಯಾಮದಿಂದ ಮಾನಸಿಕ ಖಿನ್ನತೆ ದೂರ: ಕೆ. ಎಸ್. ಈಶ್ವರಪ್ಪ
ಗೆಳೆಯವೃಂದದ ಪ್ರಮುಖರಾದ ಹೆಚ್.ಎಸ್. ನಾಗೇಂದ್ರ, ಅನಂತಮೂರ್ತಿ ರಾಮದ್ಯಾನಿ, ಕುಷ್ಟಗಿ ಅನಂತಾಚಾರ್, ಮೃತ್ತಿಕ ವಾಸುದೇವ ಮೂರ್ತಿ, ಹಂಡೆ ಬಿಂಧು ಮಾಧವ, ವಸಂತರಾವ್, ಪದ್ಮಾ, ಸುಧಾ ಕುಷ್ಟಗಿ, ಲಕ್ಷ್ಮಿಬಾಯಿ ರಾಯಚೂರು, ಮೀನಾಕ್ಷಿ ಮುಂತಾದವರು ಯಾಯಿವಾರದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post