ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ತಂತ್ರಜ್ಞಾನ ಯುಗದಲ್ಲಿ ನಿರಂತರ ಕಲಿಕೆಯ ಮೂಲಕ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ #Governer Thawarchand Gehlot ಕರೆ ನೀಡಿದರು.
ಅವರು ಇಂದು ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ #Kuvempu University 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ, ಎಲ್ಲರಿಗೂ ನಮಸ್ಕಾರ. ನಾನು ನಿಮ್ಮೆಲರನ್ನು ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಮಾತು ಆರಂಭಿಸುವ ಮೂಲಕ ನೆರೆದಿದ್ದ ಸಭಿಕರ ಕರತಾಡನಕ್ಕೆ ಭಾಜನರಾದ ಅವರು ಘಟಿಕೋತ್ಸವ ಕೇವಲ ಔಪಚಾರಿಕವಲ್ಲ. ಜೀವನ ಸಾರ್ಥಕ ಮಾಡಿಕೊಳ್ಳಲು ಕಲಿಕೆ ಎಲ್ಲರಿಗೂ ಮುಖ್ಯ. ಕೇವಲ ಜ್ಞಾನಕ್ಕಾಗಿ ವಿದ್ಯೆಯನ್ನು ಕಲಿಯುವುದಲ್ಲ, ವೈಯುಕ್ತಿಕ ವಿಕಾಸಕ್ಕೆ ಪ್ರೇರಣೆ ನೀಡುವ ಮಾಧ್ಯಮವಾಗಬೇಕು ಎಂದು ಅವರು ಆಶಿಸಿದರು.
ಜೀವನ ಸವಾಲಿನಿಂದ ಕೂಡಿದೆ. ಇದನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಂಡು ಜೀವನದಲ್ಲಿ ಜಯಶಾಲಿಗಳಾಗಬೇಕು. ಕೇವಲ ಭವಿಷ್ಯ ರೂಪಿಸಿಕೊಳ್ಳಲು ಪದವಿಯಲ್ಲ. ಬದಲಾಗಿ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಕೃತಿ ಸಮಾಜದಲ್ಲಿ ಸಂವೇದನಶೀಲರಾಗಿ ಬಾಳಲು ವಿದ್ಯೆ ಅವಶ್ಯ. ಶಿಕ್ಷಣವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದ ಅವರು, ಕೇವಲ ಭವಿಷ್ಯ ರೂಪಿಸಿಕೊಳ್ಳಲು ಜ್ಞಾನಾರ್ಜನೆಗೈಯ್ಯುವುದು ಸಾಧುವಲ್ಲ ಎಂದು ತಿಳಿಸಿದರು.
Also read: ಶಿವಮೊಗ್ಗ | ಶ್ರೀ ಗೋಪಾಲದಾಸರ ಹಾಗೂ ಶ್ರೀ ಸತ್ಯಾಭಿಜ್ಞತೀರ್ಥರ ಆರಾಧನೆ
ವಿಶ್ವದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಅದಕ್ಕೆ ಪದವಿ ಪಡೆದ ವಿದ್ಯಾರ್ಥಿಗಳು ಗಣನೀಯ ಕೊಡುಗೆ ನೀಡಬೇಕು. ಪಾಲಕರಿಗೆ ವಿದ್ಯೆ ಕಲಿಸಿದ ಗುರುಗಳಿಗೆ ವಿಶ್ವವಿದ್ಯಾಲಯಗಳಿಗೆ ಗೌರವ ನೀಡಬೇಕು. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿ.ವಿ.ಯ ಕುಲಾಧಿಪತಿ ತಾವರ್‌ಚಂದ್ ಗೆಲ್ಹೋಟ್, ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್.ಮಂಜುನಾಥ್, ಮೌಲ್ಯಾಮಾಪನ ಕುಲಸಚಿವ ಪ್ರೊ.ಗೋಪಿನಾಥ್ ಎಸ್.ಎಂ., ವಿವಿಧ ನಿಕಾಯದ ಡೀನರ್, ವಿಭಾಗಗಳ ಮುಖ್ಯಸ್ಥರು, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಕಾಗೋಡು ತಿಮ್ಮಪ್ಪ, ಡಾ.ಉನ್ನಿಕೃಷ್ಣನ್, ಡಿ.ನಾಗರಾಜ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post