ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅವರು ಪುಕ್ಸಟ್ಟೆ ಮಾತಿಗೆ ಬೆಲೆ ಕೊಡಲ್ಲ ಅಂದರೆ, ನಾನೂ ಸಹ ಅಂತಹ ವ್ಯಕ್ತಿಗಳ ಪುಕ್ಸಟ್ಟೆ ಮಾತಿಗೆ ನಾನೂ ಸಹ ಬೆಲೆ ಕೊಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B Y Vijayendra ಅವರಿಗೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #K S Eshwarappa ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಲು ನಿನ್ನ ಯೋಗ್ಯತೆ ಏನು, ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಏನಿದೆ, ನೀನಿನ್ನೂ ಬಚ್ಚಾ ಎಂದು ಏಕವಚನದಲ್ಲೇ ವಿಜಯೇಂದ್ರ ವಿರುದ್ಧ ಕಿಡಿ ಕಾರಿದರು.
ನಿಮ್ಮಪ್ಪನ ಶ್ರಮದಿಂದಾಗಿ ನೀನು ರಾಜ್ಯಾಧ್ಯಕ್ಷ ಆಗಿದಿಯಾ. ನಾನು 40 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. ನೀನೇನು ಮಾಡಿದ್ದೀಯಾ ಎಂದು ಪ್ರಶ್ನಿಸಿದರು.
Also read: ಗುರುವಾರ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಕೆ | ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ?
ಕ್ರಮ ಕೈಗೊಳ್ಳಲಿ ಬಿಡಿ
ನನ್ನ ಸ್ಪರ್ಧೆಯ ಬಗ್ಗೆಯೇ ಅವರಿಗೆ ಅರ್ಥವಾಗಿಲ್ಲ. ನಾನು ಈಗಾಗಲೇ ಪಕ್ಷದಿಂದ ಅರ್ಧ ಹೊರಬಂದಿದ್ದೇನೆ. ನಾನೀಗ ಪಕ್ಷೇತರ ಅಭ್ಯರ್ಥಿ. ಹೀಗಿರುವಾಗ ನನ್ನ ವಿರುದ್ಧ ಕ್ರಮಕೈಗೊಳ್ಳುವುದು ಏನು ಬಂತು. ಹಾಗೂ ಕ್ರಮ ಕೈಗೊಳ್ಳುವುದಾದರೆ ಕೈಗೊಳ್ಳಲಿ. ನಾನು ಹೆದರಲ್ಲ ಎಂದರು.
ರಾಷ್ಟ್ರಮಟ್ಟದಲ್ಲಿ ಸೋನಿಯಾ ಗಾಂಧಿ #Sonia Gandhi ಅವರ ಕುಟುಂಬ ರಾಜಕಾರಣದ ವಿರುದ್ಧ ಪ್ರಧಾನಿ ಮೋದಿ #PM Modi ಹೋರಾಡುತ್ತಿದ್ದಾರೆ. ರಾಜ್ಯದಲ್ಲಿ ಅಪ್ಪ ಮಕ್ಕಳ ಹಿಡಿತದಿಂದ ಪಕ್ಷವನ್ನು ಹೊರತರಲು ನಾನು ಹೋರಾಡುತ್ತಿದ್ದೇನೆ. ವಿಜಯೇಂದ್ರ ರಾಜೀನಾಮೆ ನೀಡಲೇಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post