ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ Kote Marikamba Fair ಅದ್ಧೂರಿ ಚಾಲನೆ ದೊರೆತಿದ್ದು, ತವರು ಮನೆಯಾದ ಗಾಂಧಿಬಜಾರ್‌ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ದೇವಿಯ ದರ್ಶನಕ್ಕೆ ಜನರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದು, ನಗರದಲ್ಲಿ ಇಂದು ಬಿಸಿಲಿನ ತಾಪ ಕಡಿಮೆಯಾಗಿ ಮೋಡ ಕವಿದ ವಾತಾವರಣ ಇರುವುದು ಸಾರ್ವಜನಿಕರ ಮೊಗದಲ್ಲಿ ಕೊಂಚ ಸಮಾಧಾನ ಮೂಡಿಸಿದೆ.
ಶಿವಮೊಗ್ಗ ನಿವಾಸಿಗಳಲ್ಲಿ ಮಾರಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದ್ದು, ಹಲವು ದಿನಗಳಿಂದ ಬೆಲೆ ಏರಿಕೆ ಬಿಸಿಯಿಂದ ನಲುಗಿದ್ದ ಜನತೆಗೆ ತರಕಾರಿ ಬೆಲೆಯಲ್ಲಿ ತುಸು ಇಳಿಕೆ ಕಂಡಿರುವುದು ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ.
ಯಾವು ತರಕಾರಿ ಬೆಲೆ ಎಷ್ಟು?
ಕಳೆದ ಹಲವು ದಿನಗಳಿಂದ 100ರ ಸಮೀಪದಲ್ಲಿದ್ದ ಹಸಿಮೆಣಸಿನ ಬೆಲೆ 50-60ಕ್ಕೆ ಕುಸಿದೆ. ಟೊಮೆಟೋ ಕೆಜಿಗೆ 8-10, ಬೀನ್ಸ್, ಜವಳಿಕಾಯಿ, ಮನೆಯವರೆ ಇತರೆ ತರಕಾರಿಗಳು ಎಂದಿನಂತೆ 30ರ ಆಸುಪಾಸಿನಲ್ಲಿದೆ.
Also read: ಸೃಷ್ಟಿಯ ಸತ್ಯ ತಿಳಿಯಲು ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ ಅಗತ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ
ಇನ್ನು ನಿಂಬಿ, ಬೆಳ್ಳುಳ್ಳಿ, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಸೌತೆಕಾತೆ, ತೆಂಗಿನಕಾಯಿ, ಆಲೂಗಡ್ಡೆ, ಬೀಟ್‌ರೂಟ್ ಎಂದಿನ ದರ ಕಾಯ್ದುಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post