ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನನ್ನ ಮೆಚ್ಚಿನ ಊರು. ಬಹಳ ಜನರು ಇಲ್ಲಿ ನನಗೆ ಸ್ನೇಹಿತರಿದ್ದಾರೆ. ಶಿವಮೊಗ್ಗಕ್ಕೆ ಬರುವುದೇ ಒಂದು ಖುಷಿ ಎಂದು ನಟ ಶರಣ್ #Actor Sharan ಸಂತೋಷ ವ್ಯಕ್ತಪಡಿಸಿದರು.
ಪಾಲಿಕೆಯಿಂದ ಆಯೋಜಿಸಲಾಗಿರುವ ಸಿನಿಮಾ ದಸರಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಮೊಗ್ಗ ನನ್ನ ಮೆಚ್ಚಿನ ಊರು. ಬಹಳ ಜನರು ಇಲ್ಲಿ ನನಗೆ ಸ್ನೇಹಿತರಿದ್ದಾರೆ. ನನ್ನ ಹೃದಯದಲ್ಲಿ ಶಿವಮೊಗ್ಗಕ್ಕೆ ಒಂದು ಸ್ಥಾನ ನೀಡಿದೆ ಎಂದರು.
ದಸರಾದಂತಹ #Dasara ಹಬ್ಬದಲ್ಲೂ ಕೂಡ ಸಿನಿಮಾ ಕ್ಷೇತ್ರಕ್ಕೆ ಸ್ಥಾನ ಕೊಟ್ಟಿರುವುದು ಅತ್ಯಂತ ಶ್ಲಾಘನೀಯ. ಸಿನಿಮಾ ಕೂಡ ಇಂದು ಕಷ್ಟವಾಗುತ್ತಿದೆ. ಇರುವ ಥಿಯೇಟರ್’ಗಳೆಲ್ಲ ಮುಚ್ಚಿಬಿಟ್ಟಿವೆ. ಸಿನಿಮಾ ನಿರ್ಮಾಣ ಕೂಡ ಕಷ್ಟವಾಗುತ್ತಿದೆ. ಇಷ್ಟರ ನಡುವೆಯೂ ಸಿನಿಮಾ ಉಳಿಯುತ್ತದೆ ಎಂದರು.
ನಟಿ ಕಾರುಣ್ಯಾ ರಾಮ್ #Karunya Ram ಮಾತನಾಡಿ, ಶಿವಮೊಗ್ಗ ಒಂದು ಬ್ಯೂಟಿಫುಲ್ ಜಿಲ್ಲೆ. ಇಲ್ಲಿಗೆ ಬರುವುದೆಂದರೆ ಮನಸ್ಸು ಉಲ್ಲಾಸಗೊಳ್ಳುತ್ತದೆ. ರೋಮಾಂಚನವಾಗುತ್ತದೆ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾವೇ ಅತ್ಯಂತ ವಿಜೃಂಭಣೆಯಿAದ ನಡೆಯುತ್ತದೆ ಎಂಬುದು ಇಲ್ಲಿಗೆ ಬಂದಾಗ ಗೊತ್ತಾಯಿತು. ಶಿವಮೊಗ್ಗದಲ್ಲೂ ಕೂಡ ಒಂದು ಸ್ಟಾರ್ ನೈಟ್ಸ್ ಕಾರ್ಯಕ್ರಮ ಆಯೋಜನೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಪಾಲಿಕೆ ಮಾಜಿ ಸದಸ್ಯರಾದ ನಾಗರಾಜ್ ಕಂಕಾರಿ, ರೇಖಾ ರಂಗನಾಥ್, ಇ. ವಿಶ್ವಾಸ್, ಎಚ್. ಪಾಲಾಕ್ಷಿ, ಪ್ರಗತಿ ಸ್ಟುಡಿಯೋ ಅಶ್ವತ್ಥ್ ನಾರಾಯಣ್, ನೀನಾಸಂಃ ಬಿಂಬಶ್ರೀ, ನಿರ್ದೇಶಕ ಪ್ರವೀಣ್ ಕೃಪಾಕರ್, ಬಸವರಾಜ್ ಮೊದಲಾದವರಿದ್ದರು.
ಚೈತ್ರಾ ನಿರಂತರ ಕಾರ್ಯಕ್ರಮ ನಿರೂಪಿಸಿದರು. ನಟ ಶರಣ್, ನಟಿ ಕಾರುಣ್ಯಾರಾಮ್, ಹಾಡು ಹೇಳಿ ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post