No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Wednesday, September 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಾಮರಾಜನಗರ

ರಾಷ್ಟ್ರೀಯ ಏಕತೆಯ ಹರಿಕಾರ ಶ್ರೀ ಶಂಕರಾಚಾರ್ಯರು: ಸುರೇಶ್ ಋಗ್ವೇದಿ

ಚಾಮರಾಜನಗರ | ಶ್ರೀ ವಿಧುಶೇಖರ ಭಾರತೀಯರ ವರ್ಧಂತಿ ಮಹೋತ್ಸವ ಹಾಗೂ ಪ್ರವಚನ ಕಾರ್ಯಕ್ರಮ

kalpa News by kalpa News
August 19, 2026
in ಚಾಮರಾಜನಗರ
0
shri-shankaracharya-the-herald-of-national-unity
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  |

ಭಾರತ ದೇಶ, ಸಂಸ್ಕೃತಿ, ಪರಂಪರೆ, ಧರ್ಮ, ತತ್ವಗಳು ಸಂಕಷ್ಟದಲ್ಲಿ ದ್ದಾಗ ಅವತರಿಸಿದ ಶ್ರೀ ಶಂಕರಾಚಾರ್ಯರು ಭಾರತೀಯ ಸನಾತನ ಹಿಂದೂ ಧರ್ಮವನ್ನು ಕಾಪಾಡಿ, ಸಮನ್ವಯಗೊಳಿಸಿ, ಸರಳಗೊಳಿಸಿ, ಅರ್ಥೈಸಿ, ಪ್ರತಿಯೊಬ್ಬರೂ ಅನುಸರಿಸುವಂತೆ ರಕ್ಷಿಸಿದ ರಾಷ್ಟ್ರೀಯ ಏಕತೆಯ ಹರಿಕಾರರು ಎಂದು ಕರ್ನಾಟಕ ಶ್ರೀ ಶಂಕರ ಅಭಿಯಾನದ ಪ್ರಧಾನರಾದ, ವಿಪ್ರಶ್ರೀ, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಶ್ರೀಶಂಕರ ಅಭಿಯಾನ ಕರ್ನಾಟಕ, ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯುತ್ ಕ್ಲಬ್, ಶಾರದಾ ಶಂಕರ ಭಕ್ತ ಮಂಡಳಿ, ನಗರದ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶೃಂಗೇರಿ ಶಾರದಾ ಪೀಠದ 37ನೇ ಜಗದ್ಗುರುಗಳಾದ ಶ್ರೀ ಶ್ರೀ ವಿಧು ಶೇಖರ ಭಾರತೀಯರ ವರ್ಧಂತಿ ಮಹೋತ್ಸವ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಆದಿಶಂಕರರು ವಿಶ್ವದ ಜ್ಞಾನದ ಕಣಜ. ಜ್ಞಾನಮಾರ್ಗದ ಮೂಲಕ ಇಡೀ ವಿಶ್ವಕ್ಕೆ ಮಹತ್ವವಾದ ಅದ್ವೈತ ತತ್ವ ವನ್ನು ನೀಡಿ ಭಾರತದ ಶಕ್ತಿಯನ್ನು ಇಮ್ಮಡಿಗೊಳಿಸಿದರು.PES Shivamogga

ಪುರಾಣಗಳು,ಭಗವದ್ಗೀತೆ, ವೇದಗಳು ಉಪನಿಷತ್ತುಗಳಿಗೆ ಅರ್ಥವನ್ನು ನೀಡಿ ಮಾನವ ಜನಾಂಗಕ್ಕೆ ಶುದ್ಧವಾದ ತತ್ವವನ್ನು ನೀಡಿ ಏಕತೆಯ ಭಾವದಿಂದ, ಸಮನ್ವಯತೆಯಿಂದ ಸಮೃದ್ಧವಾದ ಜೀವನವನ್ನು ನಡೆಸಲು ಮಾನವನಿಗೆ ಮಾರ್ಗದರ್ಶನವನ್ನು ನೀಡಿದ ಮಹಾ ಸಾಧಕರು.

Also read>> ಸೃಷ್ಟಿಯ ವೈವಿಧ್ಯತೆಯೇ ಅದ್ಭುತ, ಎಲ್ಲೆಡೆ ಸಮಾನತೆ ಹುಡುಕುವುದು ಮೂರ್ಖತನ : ರಾಘವೇಶ್ವರ ಶ್ರೀ

ಕೇರಳದ ಪೂರ್ಣಾನದಿ ದಡದಲ್ಲಿರುವ ಕಾಲಡಿಯಲ್ಲಿ ಸಾಮಾನ್ಯ ಶಕ 788 ರಲ್ಲಿ ಜನಿಸಿ ತಮ್ಮ 32 ವರ್ಷಗಳ ಅಲ್ಪಾವಧಿಯ ಜೀವನ ಕಾಲದಲ್ಲಿ ಭಾರತದ ಪುಣ್ಯ ಭೂಮಿಯನ್ನು ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿ ತಮ್ಮ ವೇದಾಂತ ಪ್ರವಚನವನ್ನು, ಭಕ್ತಿ ಪ್ರಧಾನವಾದ ಗೀತೆಗಳು ಪ್ರವಚನಗಳನ್ನು ನೀಡಿ ಇಡೀ ದೇಶ ತಮ್ಮ ಶಿಷ್ಯರಾಗುವಂತೆ ಮಾಡಿದರು. ದಿಗ್ವಿಜಯ ಯಾ ತ್ರೆಯ ಮೂಲಕ ಪೂರ್ವದ ಜಗನ್ನಾಥದಿಂದ ಹಿಡಿದು ಪಶ್ಚಿಮದ ದ್ವಾರಕದವರೆಗೆ, ದಕ್ಷಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೂ ಸಂಚಾರ ಮಾಡಿ ವಿವಿಧ ದೇವಸ್ಥಾನಗಳನ್ನು ಪುನರ್ ನಿರ್ಮಿಸಿ,ವಿವಿಧ ಮತಧರ್ಮಗಳ ಪಂಡಿತರನ್ನು ವಾದದಲ್ಲಿ ಜಯಿಸಿ, ಕಾಶ್ಮೀರದ ಸರ್ವಜ್ಞ ಪೀಠವನ್ನು ಏರಿದರು. ಕಾಶ್ಮೀರದ ಸರ್ವಜ್ಞ ಪೀಠವು ಜ್ಞಾನದ ಸಂಕೇತ.ಪುಣ್ಯಭೂಮಿ. ಭಾರತದ ಆಧ್ಯಾತ್ಮದ ತುದಿಯನ್ನು ಮುಟ್ಟಿದ ಶಂಕರರು ತಮ್ಮ ಕೊನೆಯ ದಿನಗಳನ್ನು ಉತ್ತರದ ಕೇದಾರದಲ್ಲಿ ಕಳೆದು ಬ್ರಹ್ಮ ನಿರ್ವಾಣವನ್ನು ಪಡೆದರು.Kumadvathi College Shikariura

ಮಾನವನ ಜೀವನವು ಜ್ಞಾನ,ಭಕ್ತಿ,ವೈರಾಗ್ಯ ಮುಂತಾದ ಸಾರ್ಥಕ ಗುಣಗಳಿಂದ ಜೀವನ ರೂಪಿತವಾಗಬೇಕು. ಅದಕ್ಕಾಗಿ ಅದ್ವೈತ ಮಾರ್ಗವನ್ನು ಅನುಸರಿಸಬೇಕು. ಈ ಜಗತ್ತಿನಲ್ಲಿ ಎಲ್ಲವೂ ಒಂದೇ, ಎಲ್ಲವೂ ಬ್ರಹ್ಮ. ಪ್ರಪಂಚದಲ್ಲಿ ಬದಲಾವಣೆಗಳು ಆಗುತ್ತದೆ ಈ ಬದಲಾವಣೆಗಳು ಮುಖ್ಯವಲ್ಲ. ಸತ್ಯವೂ ಅಲ್ಲ.ಎಲ್ಲ ವಸ್ತುಗಳು ಮತ್ತು ಕ್ರಿಯೆಗಳ ಹಿಂದೆ ಇರುವ ಸತ್ಯವೇ ಬ್ರಹ್ಮ. ಬ್ರಹ್ಮ ಬೇರೆ ಮನುಷ್ಯರು ಬೇರೆ ಅಲ್ಲ. ಮನುಷ್ಯರಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದು. ಪರಮಾತ್ಮನು ಸರ್ವರಲ್ಲಿಯೂ ಎಲ್ಲೆಲ್ಲಿಯೂ ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ಈ ದೃಷ್ಟಿಯನ್ನು ಪಡೆದವರಿಗೆ ಪ್ರಪಂಚವೆಲ್ಲವೂ ನಮ್ಮ ದೇಶವೇ. ಪ್ರಪಂಚದ ಎಲ್ಲರೂ ಅಣ್ಣ ತಮ್ಮ ಅಕ್ಕ ತಂಗಿ ಆಗಿ ಕಾಣುತ್ತಾರೆ ಎಂದು ತಿಳಿಸಿದರು.

ಸನಾತನ ಧರ್ಮ ಅರ್ಥವಾಗಲು ಬ್ರಹ್ಮಸೂತ್ರ, ಉಪನಿಷತ್ತು,ಭಗವದ್ಗೀತೆಗಳಿಗೆ ಅರ್ಥವನ್ನು ಬರೆದು ಜನಸಾಮಾನ್ಯರು ಕೂಡ ಅನುಸರಿಸುವಂತೆ ಸ್ತೋತ್ರಗಳನ್ನು ರಚಿಸಿ, ಗ್ರಂಥಗಳನ್ನು ಬರೆದು,ಪೂಜಾ ವ್ಯವಸ್ಥೆಯನ್ನು ಪರಿಷ್ಕರಿಸಿ ಕೊಟ್ಟಂತಹ ಶ್ರೀ ಶಂಕರರು ದೇಶದ ಸಾಂಸ್ಕೃತಿಕ ಏಕತೆಗಾಗಿ ಕುಂಭಮೇಳವನ್ನು ಆರಂಭಿಸಿದವರು ಶಂಕರರೆ. ಇಡೀ ಜಗತ್ತಿಗೆ ಸನ್ಮಾರ್ಗದಲ್ಲಿ ಆಧ್ಯಾತ್ಮ ಚಿಂತನೆ, ಆಧ್ಯಾತ್ಮ ಶ್ರೇಷ್ಠತೆ,ಆಧ್ಯಾತ್ಮ ರಹಸ್ಯಗಳನ್ನು ಜಗತ್ತಿಗೆ ತಿಳಿಸುತ್ತಿರುವ ಶ್ರೀ ಶಾರದಾ ಶಂಕರ ಮಠದ 37ನೇ ಸನ್ನಿಧಾನಂಗಳಾಗಿ, ತಿರುಪತಿಯ ಕುಪ್ಪ ವೆಂಕಟೇಶ ಪ್ರಸಾದ ಶರ್ಮರು ಇಂದು ಶ್ರೀ ಶ್ರೀ ವಿಧು ಶೇಖರ ಭಾರತಿ ಮಹಾಸ್ವಾಮಿಗಳಾಗಿ ಶ್ರೀ ಶೃಂಗೇರಿ ಶಾರದಾ ಪೀಠದ 37 ನೇ ಜಗದ್ಗುರುವಾಗಿ ಇಡೀ ಜಗತ್ತಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿ ಆಧ್ಯಾತ್ಮದ ಬೋಧನೆಯನ್ನು ತಮ್ಮ ಧರ್ಮ ವಿಜಯ ಯಾತ್ರೆಯ ಮೂಲಕ ಇಡೀ ಭಾರತವನ್ನು ಸಂದರ್ಶಿಸಿ ಸಮಸ್ತರಿಗೂ ಶಾಸ್ತ್ರಗಳ ಅಭ್ಯಾಸದ ವಿವರಣೆಯನ್ನು, ವೇದಾಂತದ ತಿಳುವಳಿಕೆಯನ್ನು ತಮ್ಮದೇ ಆದ ವಾಗ್ಚರಿಯ ಮೂಲಕ ಆಶೀರ್ವದಿಸುತ್ತಿರುವ ವಿಧು ಶೇಖರ ಭಾರತೀಯವರ ಮಾರ್ಗದರ್ಶನ ಆಶೀರ್ವಾದ ಇಡೀ ಜಗತ್ತಿಗೆ ಸಮಸ್ತರಿಗೂ ಸಿಗಲಿ.

ಆ ಮೂಲಕ ಭಾರತವು ಆಧ್ಯಾತ್ಮಿಕ ಮಹಾಶಕ್ತಿಯಾಗಿ ಹೊರಹೊಮ್ಮಲಿ. ಶೃಂಗೇರಿ ಶಾರದಾ ಪೀಠ ಸದಾ ಕಾಲ ಧರ್ಮ ಮಾರ್ಗ, ಜ್ಞಾನಮಾರ್ಗ ಭಕ್ತಿ ಮಾರ್ಗ,ಮೋಕ್ಷ ಮಾರ್ಗ ಮತ್ತು ಮನುಷ್ಯನ ಪರಿಪೂರ್ಣತೆಗೆ ಸಾಕ್ಷಿಯಾಗಿ ರೂಪಿತವಾಗಿದೆ.

ವಿಧು ಶೇಖರ ಭಾರತಿ ಹಾಗೂ ಅವರ ಗುರುಗಳಾದ ಶ್ರೀ ಶ್ರೀ ಭಾರತೀಯ ತೀರ್ಥ ಮಹಾಸ್ವಾಮಿಗಳವರ ಆಶೀರ್ವಾದ ಹಾಗೂ 36 ಜಗದ್ಗುರುಗಳ ಪರಂಪರೆಯನ್ನು ಹೊಂದಿರುವ ಶ್ರೀ ಶೃಂಗೇರಿ ಪೀಠ ಮಹಾಪೀಠ ವಾಗಿ ಜನತೆಗೆ ಆಶೀರ್ವದಿಸುತ್ತಿರುವುದು ನಮ್ಮೆಲ್ಲರ ಪುಣ್ಯ, ಸೌಭಾಗ್ಯವೆಂದು ಋಗ್ವೇದಿ ತಿಳಿಸಿದರು.

ಶ್ರೀ ಶಂಕರರ ಸ್ತೋತ್ರಗಳ ಪಾರಾಯಣ,ಅಷ್ಟೋತ್ತರ ಶತನಾಮಾವಳಿ, ಪೂಜೆ, ಭಜನೆ ಜರುಗಿತು. ಶ್ರೀ ಶಾರದಾ ಭಜನಾ ಮಂಡಳಿಯ ನಿರ್ದೇಶಕರಾದ ಕುಸುಮ, ದಿನೇಶ್, ಗಣೇಶ್ ಸರಸ್ವತಿ, ವಾಣಿ, ಪೂಜಾ, ಸುಂದರ್,ಶರಣ್ಯ, ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsKalpa News Advertising DisclaimerKalahamsa Infotech private limited

Tags: ChamarajanagaraShri Shringeri SharadapeetaShri Vidhushekara Bharathi SwamijiSuresh Rigvediಚಾಮರಾಜನಗರ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಸೃಷ್ಟಿಯ ವೈವಿಧ್ಯತೆಯೇ ಅದ್ಭುತ, ಎಲ್ಲೆಡೆ ಸಮಾನತೆ ಹುಡುಕುವುದು ಮೂರ್ಖತನ : ರಾಘವೇಶ್ವರ ಶ್ರೀ

Next Post

ಗೋಕಳ್ಳರು ಪರಾರಿ, ಜಾಮೀನು ಮುನ್ನವೇ ಬಂಧಿಸಿ: ಪೊಲೀಸರಿಗೆ ಸಂಸದ ರಾಘವೇಂದ್ರ ಆಗ್ರಹ

kalpa News

kalpa News

Next Post
shikaripura-mp-raghavendra-demands-arrest-cow-thieves

ಗೋಕಳ್ಳರು ಪರಾರಿ, ಜಾಮೀನು ಮುನ್ನವೇ ಬಂಧಿಸಿ: ಪೊಲೀಸರಿಗೆ ಸಂಸದ ರಾಘವೇಂದ್ರ ಆಗ್ರಹ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL