ಕಲ್ಪ ಮೀಡಿಯಾ ಹೌಸ್ | ಸಿಡ್ನಿ |
ಕೋವಿಡ್-19 ಓಮಿಕ್ರಾನ್ ರೂಪಾಂತರಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ವಿವಾಹವನ್ನೇ ನ್ಯಾಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಅವರು ರದ್ದು ಮಾಡಿದ್ದಾರೆ.
ಓಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಒಂಬತ್ತು ಪ್ರಕರಣಗಳ ಕ್ಲಸ್ಟರ್ ಮದುವೆಯ ನಂತರ ಉತ್ತರದಿಂದ ದಕ್ಷಿಣ ದ್ವೀಪಗಳಿಗೆ ಸಾಮುದಾಯಿಕವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದ ಜಾರಿಗೆ ಬರುವಂತೆ ನ್ಯೂಜಿಲೆಂಡ್ ಸರ್ಕಾರ ರಾಷ್ಟ್ರದಾದ್ಯಂತ ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ.
ಈ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿಯವರು ತಮ್ಮ ವಿವಾಹವನ್ನೇ ರದ್ದು ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post