ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶನಿಯು ಆಡಳಿತಗಾರ, ಚಿಂತಕ, ಕೂಲಿ ಕೆಲಸ (ಅಂದರೆ ನಮ್ಮ ನಮ್ಮ ಕೆಲಸ ಮಾಡಿಕೊಳ್ಳುವಿಕೆ), ಎಲುಬು ಇತ್ಯಾದಿ. ಕುಜನ ಯೋಧ, ಪ್ರತಾಪಿ, ರಕ್ಷಣಾ ಪಡೆಯ ಚಿಂತನೆ. ರೋಗ ವಿಚಾರಕ್ಕೆ ಬಂದಾಗ ಜ್ವರ ಬಾಧೆ, ರಕ್ತದೊತ್ತಡ ಇತ್ಯಾದಿ. ಗುರುವಿನಿಂದ ಜ್ಞಾನ, ವಿವೇಕ, ಪರಿಜ್ಞಾನ ಇತ್ಯಾದಿ. ಅದಕ್ಕಾಗಿ ಗುರುವನ್ನು ದೇವರೆಂದರು.
ಈಗ-ಈ ಮೂರೂ ಗ್ರಹರೂ ಒಟ್ಟಿಗಿದ್ದಾರೆ. ಅವರ ಅಂತರ ಕುಂಡಲಿಯಲ್ಲಿ ತಿಳಿಸಿದೆ. ಮಕರವು ಕುಜನಿಗೆ ಉಚ್ಛ ಕ್ಷೇತ್ರ ಬಲಿಷ್ಟತೆ ಜಾಸ್ತಿ. ಶನಿಗೆ ಸ್ವಕ್ಷೇತ್ರ ಬಲಿಷ್ಟತೆ ಜಾಸ್ತಿ. ಗುರುವಿಗೂ ನೀಚವಾದರೂ ಉತ್ತಮ ಕ್ಷೇತ್ರ. ಇಲ್ಲಿ ಗುರುವಿನ ನೀಚ ಭಂಗ ಮಾಡುವ ಶನಿ ಮತ್ತು ಕುಜರು ಯುದ್ಧ ಸ್ಥಿತಿಯಲ್ಲಿದ್ದಾರೆ. ಇದು ನೀಚ ಭಂಗಕ್ಕೆ ಅಡ್ಡಿ. ಅಂದರೆ ವಿವೇಚನೆ ಕೆಲಸ ಮಾಡಲ್ಲ ಎಂದರ್ಥ.
ಮೂವತ್ತು ವರ್ಷದ ಹಿಂದೆ ಶನಿಯು ಮಕರದಲ್ಲಿದ್ದಾಗ, ಮತ್ತೆ ಧನುವಿಗೆ ವಕ್ರನೂ ಆಗಿದ್ದಾಗ, ಅಯೋಧ್ಯಾ ಆಂದೋಲನದಲ್ಲಿ ನಡೆದ ಗಲಾಟೆಯನ್ನು ನೆನಪಿಸುತ್ತದೆ ಇಂದಿನ Lockdown. ಅದೇ ರೀತಿ ಬರ್ಲಿನ್ ವಾಲ್ ಕೂಡಾ ಒಡೆಯಲ್ಪಟ್ಟಿತು.

ಹಾಗೆಂದು, ಪ್ರಜೆಗಳು ಸರಕಾರದ ಆದೇಶಕ್ಕೆ ತಕ್ಕಂತೆ, ಮನೆಯಲ್ಲೇ ಇದ್ದು ಸಹಕರಿಸಿದರೆ ಅಪಾಯ ಕಡಿಮೆಯಾದೀತು. ವೈರಸ್ ಜಿಹಾದಿ ಕ್ರಮದಲ್ಲಿ ದುಷ್ಟರು ಮುನ್ನುಗ್ಗಬಹುದು. ಅದರಿಂದ ತಪ್ಪಿಸಿಕೊಳ್ಳಲು ನಮಗಿರುವ ದಾರಿ ಎಂದರೆ, ಮನೆಯಲ್ಲೇ ಉಳಿಯೋದು, ಮಿತ ಆಹಾರ ಸೇವನೆ, ದೇವರ ಸ್ಮರಣೆ.
ಮುಂದೆ ಒಂದು ತಿಂಗಳ ಒಳಗೆ ಅನೇಕ ದುಷ್ಟರು ಸಾಯಲಿದ್ದಾರೆ. ಸಜ್ಜನರು ನಿಟ್ಟುಸಿರು ಯಾವಾಗ ಬಿಡುವಂತಾಗುತ್ತದೆ ಎಂದರೆ ಒಂದು ತಿಂಗಳ ಬಳಿಕ. ಆದರೂ ನಾವೀಗ ಉಪಯೋಗಿಸುತ್ತಿರುವ ಮಾಸ್ಕ್’ಗಳನ್ನು ಹಾಕದೆ ಓಡಾಡಬೇಕಾದರೆ 2021 ಫೆಬ್ರವರಿ ನಂತರವೇ.
ಆಡಳಿತದ ಆದೇಶ ಪಾಲಿಸಿ, ರೋಗ ಮುಕ್ತರಾಗೋಣ.
Get in Touch With Us info@kalpa.news Whatsapp: 9481252093







Discussion about this post