ಕಲ್ಪ ಮೀಡಿಯಾ ಹೌಸ್ | ಸೊರಬ |
ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಪ್ರದೇಶ ಮಂಜೂರು ವೇಳೆ ಕೇವಲ ದೊಡ್ಡ ಮರಗಳನ್ನು ಮಾತ್ರ ಲೆಕ್ಕ ಮಾಡಲಾಗುತ್ತದೆ. ಆದರೆ, ಅರಣ್ಯದಲ್ಲಿರುವ ಅಪಾರ ಸಸ್ಯಗಳ ನಾಶವಾಗುತ್ತವೆ ಎಂಬುದನ್ನು ಪರಿಗಣಿಸಬೇಕು. ಈ ವಿಷಯವನ್ನು ರಾಜ್ಯ, ಕೇಂಧ್ರ ಅರಣ್ಯ ಸಚಿವರ, ಎನ್‌ಬಿಎ ಗಮನಕ್ಕೆ ಮಂಡಳಿ ತರಬೇಕು ಎಂದು ಅನಂತ ಹೆಗಡೆ ಅಶೀಸರ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಜೀವವೈವಿಧ್ಯ ಮಂಡಳಿಯ ವಿಶೇಷ ಸಭೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟದಲ್ಲಿ ಪರಿಸರ ಮಾರಕ ಬೃಹತ್ ಯೋಜನೆಗಳಿಗೆ ಅನುಮತಿ ನೀಡದಂತೆ, ಹಸಿರು ಬಜೇಟ್, ಭೂಕುಸಿತ ಅಧ್ಯಯನ ವರದಿಯ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮುಂತಾದ ರಾಜ್ಯ ಜೀವವೈವಿಧ್ಯ ಮಂಡಳಿಯ ಇಲ್ಲಿಯವರೆಗಿನ ಕ್ರಿಯಾಶೀಲ ಕಾರ್ಯಕ್ರಮಗಳ ಕುರಿತು ಉಲ್ಲೇಖಿಸಿದರು.
ಗ್ರಾಪಂ ಜೀವವೈವಿಧ್ಯ ಸಮಿತಿಗಳ ಪುನರ್ರಚನೆ, ಸಂಸದರು, ಶಾಸಕರು, ವಕೀಲರು, ನ್ಯಾಯಾಧೀಶರಿಗೆ ಜೀವವೈವಿಧ್ಯ ಕಾಯಿದೆ ಮಹತ್ವದ ಕುರಿತು ಇನ್ನಷ್ಟು ಮಾಹಿತಿ ನೀಡುವುದು. ಯಾದಗಿರಿ ಜಿಲ್ಲೆಯಲ್ಲಿನ ಜೈವಿಕ ತಾಣಗಳ ಘೋಷಣೆ, ಖಾನಾಪುರ ತಾಲ್ಲೂಕು ಕುಣಕುಂಬಿ ಮಲಪ್ರಭಾ ನದೀ ಮೂಲಕ್ಕೆ ಜೀವ ವೈವಿಧ್ಯ ಮಾನ್ಯತೆ, ಸರ್ಕಾರ ಘೋಷಿಸಿರುವ 2.3ಲಕ್ಷ ಹೆಕ್ಟೇರ್ ಡೀಮ್ಡ ಅರಣ್ಯದ ರಕ್ಷಣೆಗೆ ಅನುದಾನ ನೀಡಲು ಮಂಡಳಿ ಮುಖ್ಯ ಮಂತ್ರಿಗಳಿಗೆ ಶಿಫಾರಸು ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಜೀವವೈವಿಧ್ಯ ಪ್ರಶಸ್ತಿ ನೀಡಿಕೆ, 6,000 ಪಂಚಾಯತಗಳಲ್ಲಿ ಜೀವವೈವಿಧ್ಯ ಅಭಿಯಾನ, ರಾಜ್ಯದ 15 ಸ್ಥಳಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಣೆ, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಪ್ರಗತಿ ಪರೀಶೀಲನಾ ಸಭೆ, ಮಾದರಿ ಜೀವವೈವಿಧ್ಯ ಸಮಿತಿ ಯೋಜನೆ, ಮತ್ಸ್ಯಧಾಮಗಳ ಘೋಷಣೆ, ಪಾರಂಪರಿಕ ವೃಕ್ಷಗಳ ಘೋಷಣೆ, ಜೀವವೈವಿಧ್ಯ ಕಾಯಿದೆ ಜಾರಿಗೆ, ಜೀವವೈವಿಧ್ಯ ಪರಿಸರ ಅರಣ್ಯ ರಕ್ಷಣೆ ಕುರಿತು ವಿಧಾನ ಸಭೆ ವಿಶೇಷ ಅಧಿವೇಶನ ನಡೆಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
Also read: ಕಲ್ಯಾಣ ಕರ್ನಾಟಕ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಚಾಲನೆ
ಮಂಡಳಿಯ ಎಬಿಎಸ್ ನಿಧಿಯಿಂದ 5 ಜಿಲ್ಲೆಗಳಲ್ಲಿ ಮಾದರಿ ಜೀವ ವೈವಿಧ್ಯ ಸಂರಕ್ಷಣಾ ಯೋಜನೆಗಳನ್ನು ಅರಣ್ಯ ಇಲಾಖೆ ಮೂಲಕ ಜಾರಿಗೊಳಿಸುವುದು, ನೈಸರ್ಗಿಕ ಪಾರಂಪರಿಕ ತಾಣಗಳ ಅಧಿಕೃತ ಪ್ರಕಟಣೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಜೀವ ವೈವಿಧ್ಯ ಕಾಯಿದೆ ಅನುಷ್ಠಾನ ಅಧಿಕಾರಿ ಎಂದು ಡಿಪಿಆರ್ ಮೂಲಕ ಆದೇಶ, ಪಾರಂಪರಿಕ ವೃಕ್ಷಗಳ ಘೋಷಣೆ, ಪ್ರತಿ ವರ್ಷ ಜೀವ ವೈವಿಧ್ಯ ಅಭಿಯಾನ, ಜೀವ ವೈವಿಧ್ಯ ಪ್ರಶಸ್ತಿ ನೀಡಿಕೆ, 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಆರ್.ಡಿಪಿಆರ್. ಇಲಾಖೆ ಜೊತೆ ಮಾತುಕತೆ ನಡೆಸಿ 5ರಷ್ಟು ಅನುದಾನ ಜೀವ ವೈವಿಧ್ಯ ಕಾರ್ಯಗಳಿಗೆ ಮೀಸಲಿಡಲು ಆದೇಶ, ಮಂಡಳಿ ಶಿಫಾರಸಿನಂತೆ ಮೀನುಗಾರಿಕಾ ಇಲಾಖೆ ಮೂಲಕ ಗುರುತಿಸಿದ ಇನ್ನೂ 15 ಮತ್ಸ್ಯ ಧಾಮಗಳನ್ನು ಅಧಿಕೃತ ಘೋಷಿಸಬೇಕು ಮುಂತಾದ ವಿಷಯಗಳು ಪ್ರಸ್ತಾಪಗೊಂಡವು.
ಮಂಡಳಿಯ ನೂತನ ಅಧ್ಯಕ್ಷ ರವಿ ಕಾಳಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.
ಪಿಸಿಸಿಎಫ್. ಆರ್.ಕೆ.ಸಿಂಗ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ವಿಜಯ ಮೋಹನ ರಾಜ್, ಆಯುಷ
ಕಮೀಶನರ್ ಡಾ. ರಾಮಚಂದ್ರ, ಪಂಚಾಯತ ರಾಜ್ ಇಲಾಖೆ ನಿರ್ದೆಶಕ ಯಾಲಕ್ಕಿ ಗೌಡ, ಪೊನ್ನಂ ಪೇಟೆ ಅರಣ್ಯ ಕಾಲೇಜಿನ
ಡೀನ್ ಡಾ. ಕುಶಾಲಪ್ಪ, ಕಡಲ ಪರಿಸರ ವಿಜ್ಞಾನಿ ಡಾ. ಪ್ರಕಾಶ ಮೇಸ್ತ, ಮಂಡಳಿ ಸದಸ್ಯ ಕೆ. ವೆಂಕಟೇಶ, ಮಂಡಳಿ ಸದಸ್ಯ
ಕಾರ್ಯದರ್ಶಿ ಅನಿತಾ ಅರೇಕಲ್ ಹಾಗೂ ಕೃಷಿ ಮತ್ತು ಆರೋಗ್ಯ ಇಲಾಖೆ, ಅಧಿಕಾರಿಗಳು ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post