ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರಸೂತಿ ತಜ್ಞ ಡಾ. ಟಿ.ಆರ್. ನಾಗೇಂದ್ರಪ್ಪ ಅವರ ತಂದೆಯವರಾದ ರಂಗಪ್ಪ ತಂಡಿಗೆ ( 78) ಮಂಗಳವಾರ ತಾಲೂಕಿನ ಜೇಡಗೇರಿಯ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ರಂಗಪ್ಪ ತಂಡಿಗೆ ಅವರು ಹಳೇಸೊರಬ ವ್ಯವಸಾಯ ಸಹಕಾರ ಸಂಘದಲ್ಲಿ ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಗ್ರಾಮ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು.
Also read: ಭದ್ರಾವತಿ | ವಿದ್ಯುತ್ ಶಾಕ್’ಗೆ ಯುವಕ ಬಲಿ | ಘಟನೆ ನಡೆದಿದ್ದು ಹೇಗೆ?
ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸಂತಾಪ: ರಂಗಪ್ಪ ತಂಡಿಗೆ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆ ಗೌರವಾಧ್ಯಕ್ಷ ಯು.ಎನ್. ಲಕ್ಷ್ಮೀಕಾಂತ್, ಅಧ್ಯಕ್ಷ ಜೆ.ಎಸ್. ನಾಗರಾಜ ಜೈನ್, ಹಿರಿಯ ವೈದ್ಯ ಡಾ. ಎಂ.ಕೆ. ಭಟ್, ದಂತ ವೈದ್ಯ ಡಾ. ಎಚ್.ಇ. ಜ್ಞಾನೇಶ್, ಈಡಿಗ ಸಮಾಜದ ಹಲವು ಮುಖಂಡರು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಯವರು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post