ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಬಾಡದಬೈಲಿನ ಶ್ರೀ ಶನೈಶ್ಚರ ಸ್ವಾಮಿ ಮತ್ತು ಮಾತಾ ಅನ್ನಪೂಣೇಶ್ವರಿ #Badadabailu Shanaishchara – Annapoorneshwari ದೇವರ 40ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಇಂದಿನಿಂದ ಆರಂಭಗೊಂಡಿದ್ದು, ಮಾರ್ಚ್ 14ರವರೆಗೂ ನಡೆಯಲಿದೆ.
ಇಂದು ದೇವಾಲಯದಲ್ಲಿ ವಾಸ್ತು, ರಾಕ್ಷೋಘ್ನ ಹವನ, ದಿಕ್ಪಾಲಬಲಿ ಪೂಜೆ, ಕ್ಷೇತ್ರಪಾಲ ಬಲಿ, ದೇವರಿಗೆ ಪೂಜೆ ನಡೆದಿದೆ.
ಮಾರ್ಚ್ 13ರ ನಾಳೆ ಮಹಾಗಣಪತಿ ಪೂಜೆ, ಪುಣ್ಯಾಹ, ಫಲ ಸಮರ್ಪಣೆ, ಸಪ್ತಶತಿ ಪಾರಾಯಣ, ಅನ್ನಪೂರ್ಣೇಶ್ವರಿ ಮೂಲಮಂತ್ರ ಹವನ, ಶ್ರೀ ದೇವರಿಗೆ ಮಹಾಪೂಜೆ ನಡೆಯಲಿದೆ.
ಮಾರ್ಚ್ 14ರ ಶನಿವಾರ, ಮಹಾಗಣಪತಿ ಪೂಜೆ, ಪುಣ್ಯಾಹ, ಶ್ರೀ ಶನೈಶ್ಚರ ಸ್ವಾಮಿಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ನವಗ್ರಹ ಪೂರ್ವಕ ಶನಿಮಂತ್ರ ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ, ಶ್ರೀ ಶನೈಶ್ಚರ ವ್ರತ, ಪೂರ್ಣಾಹುತಿ, ಮಹಾನೈವೇದ್ಯ ಪೂರ್ವಕ ಮಹಾಮಂಗಳಾರತಿ ಅನ್ನಸಂತರ್ಪಣೆ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















