ಕಲ್ಪ ಮೀಡಿಯಾ ಹೌಸ್ | ಸೊರಬ |
ವೃಕ್ಷ ಲಕ್ಷ ಆಂದೋಲನ, ಜೀವವೈವಿಧ್ಯ ಮಂಡಳಿ, ಪರಿಸರ ಜಾಗೃತಿ ಟ್ರಸ್ಟ್ ಹಾಗೂ ಜೀವವೈವಿಧ್ಯ ಸಮಿತಿಗಳ ಸಹಯೋಗದಲ್ಲಿ ಹಲವು ಜೀವವೈವಿಧ್ಯ ಸಂರಕ್ಷಣಾ ಕಾರ್ಯಗಳಿಗೆ ಚಾಲನೆ, ತಳಮಟ್ಟದ ಜಂಟಿ ಕಾರ್ಯಕ್ರಮಗಳು, ಜೀವವೈವಿಧ್ಯ ಜಾಗೃತಿ ಜಾಥಾ ಇಂದು ಹಾಗೂ ನಾಳೆ ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನದ ಅಂಗವಾಗಿ ನಡೆಯಲಿದೆ.
ಜೀವ ವೈವಿಧ್ಯ ಮಂಡಳಿ, ಅರಣ್ಯ, ಕಂದಾಯ ಮುಂತಾದ ಇಲಾಖೆಗಳ ಅಧಿಕಾರಿಗಳು, ಪರಿಸರ ಕಾರ್ಯಕರ್ತರೊಂದಿಗೆ ರಚನಾತ್ಮಕ ಜೀವವೈವಿಧ್ಯ ಕಾರ್ಯಯೋಜನೆಗಳ ಕುರಿತು ಕಾರ್ಯಕ್ರಮವಿದೆ.

ಆನಂತರ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಕೃಷಿ ಜಯಂತಿ ನಿಮಿತ್ತ ಶ್ರೀ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದೇವರಕಾಡು ಘೋಷಣೆ, ಬೆಟ್ಟ ವನೀಕರಣ ಯೋಜನೆ ಮತ್ತು ಸಸ್ಯ ಲೋಕ ಪುನಃಶ್ಚೇತನ ಯೋಜನೆಗಳಿಗೆ ಚಾಲನೆ ನೀಡಿದರು. ನಂತರ ಬಿಎಂಸಿ ವರದಿ ಬಿಡುಗಡೆ ಮಾಡಿದ್ದಾರೆ.

ಮಧ್ಯಾಹ್ನ 4.30 ಘಂಟೆಗೆ ವೃಕ್ಷ ಜಾಥಾ ತಂಡ ಸಿದ್ದಾಪುರ ತಾಲೂಕು ಹಣಜೀಬೈಲ ನಾಟೀವೈದ್ಯ ಎಂ.ಎನ್. ಹೆಗಡೆ ಅವರನ್ನು ಭೇಟಿ ಮಾಡಿ ಅಭಿನಂದಿಸಲಿದೆ. ಸಂಜೆ 5.30ಕ್ಕೆ ಸೊರಬ ಸಮೀಪ ದಂಡಾವತಿ ಸಂರಕ್ಷಣಾ ಅಭಿಯಾನದಲ್ಲಿ ಜಾಥಾ ಪಾಲ್ಗೊಳ್ಳಲಿದೆ. ಪರಿಸರ ಜಾಗೃತಿ ಟ್ರಸ್ಟ್ ಸದಸ್ಯರು ಇರುತ್ತಾರೆ. ವರದಾ ತೀರದ ಅಂದವಳ್ಳಿ ಅರಣ್ಯ ನಾಶ ಸ್ಥಳಕ್ಕೆ ಭೇಟಿ ನೀಡಲಿದೆ. ಗ್ರಾಮದ ಜನತೆ ಕಾನು ಅರಣ್ಯ ಸಂರಕ್ಷಣಾ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ.

10 ಘಂಟೆಗೆ ಶ್ರೀ ನಾಗೇದ್ರ ಸಾಗರ ಅವರ ಜೇನು ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಲಿದೆ. ವರದಾ ಮೂಲದಲ್ಲಿ ದೇವರಕಾಡು ಸಂರಕ್ಷಣಾ ಪುರ್ನ ಸಂಕಲ್ಪ ಮಾಡಲಿದೆ. ಅಲ್ಲಿ ಹೆಗ್ಗೋಡು ಪಂಚಾಯತ್ ಜೀವವೈವಿಧ್ಯ ಸಮಿತಿಯವರ ಭೇಟಿ ಆಗಲಿದೆ.

ಮಧ್ಯಾಹ್ನ 1 ಘಂಟೆಗೆ ಹುಂಚ ಪಂಚಾಯತ್ ಜೀವವೈವಿಧ್ಯ ಸಮಿತಿ, ಭೂಮಿ ಸಂರಕ್ಷಣಾ ಸಮಿತಿ ಜೊತೆ, ವಿಎಫ್’ಸಿ ಜೊತೆ ಕುಮಧ್ವತಿ ನದೀ ಮೂಲಕ್ಕೆ ಭೇಟಿ ನೀಡಲಿದೆ.

ಸಂಜೆ 4.30 ಕ್ಕೆ ಜಾಥಾದವರು ತೀರ್ಥಹಳ್ಳಿ ತಾಲೂಕು ಪಂಚಾಯತದಲ್ಲಿ ನದೀ ಅರಣ್ಯ, ಕಾನು ಅರಣ್ಯಗಳ ಕುರಿತು ಜಂಟಿ ಸಮಾಲೋಚನಾ ಸಭೆ ನಡೆಸಲಿದೆ. ಜಾಥಾ ಸಮಾರೋಪ ತುಂಗಾನದೀ ತೀರದಲ್ಲಿ ಪುರುಷೋತ್ತಮರಾವ್ ಕೃಷಿ ನಿವಾಸದಲ್ಲಿ ಸಂಜೆ 6 ಘಂಟೆಗೆ ನಡೆಯಲಿದೆ.
Also read: ತಮ್ಮ ಮುಂದೆ ಜೈಶ್ರೀರಾಮ್ ಘೋಷಣೆ ಕೂಗಿದವರಿಗೆ ರಾಹುಲ್ ಗಾಂಧಿ ಮಾಡಿದ್ದೇನು?
ಬೇಡ್ತಿ ನದೀ ತೀರದಿಂದ ಆರಂಭವಾಗುವ ವೃಕ್ಷಲಕ್ಷ ಜೀವವೈವಿಧ್ಯ ಜಾಥಾ ಶಾಲ್ಮಲಾ ಅಘನಾಶಿನಿ, ವರದಾ, ಶರಾವತಿ, ಕುಮದ್ವತಿ, ದಂಡಾವತಿ, ತುಂಗಾ ನದೀ ಮೂಲಗಳಿಗೆ, ಕಣಿವೆಗಳಿಗೆ ಭೇಟಿ ನೀಡಲಿದೆ ಎಂದು ಜೀವವೈವಿಧ್ಯ ಮಂಡಳಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post