ಕಲ್ಪ ಮೀಡಿಯಾ ಹೌಸ್ | ಸೊರಬ |
ಕರುನಾಡಿನ ಜವಾಬ್ದಾರಿಯುತ ಪ್ರಜೆಯಾಗಿ, ನವೆಂಬರ್ ಕನ್ನಡಿಗರಾಗದೇ, ನಿತ್ಯ ಕನ್ನಡವನ್ನು #Kannada ಬಳಸುವ ಮೂಲಕ ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಪ್ರತಿಯೊಬ್ಬರೂ ಕಟಿಬದ್ಧರಾಗುವ ದೃಢ ಸಂಕ್ಪಲ್ಪ ಮಾಡಬೇಕು ಎಂದು ಮಧುಕೇಶ್ವರ ಪಾಟೀಲ್ ಕರೆ ನೀಡಿದರು.
ತಾಲ್ಲೂಕಿನ ಆನವಟ್ಟಿ ಪಟ್ಟಣದ ಶ್ರೀ ಶಾಂತಾಚಾರ್ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಕೆಪಿಎಸ್ ಶಾಲಾ ಆವರಣದಲ್ಲಿ ಜನದನಿ ಕರ್ಣಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ #KannadaRajyotsava ಮತ್ತು ‘ಜನದನಿ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ಯಭಾಷಿಕರಿಗೂ ಸಹ ಕನ್ನಡವನ್ನು ಕಲಿಸಿ, ನಾವು ಹೆಚ್ಚು ಕನ್ನಡವನ್ನು ಬಳಕೆ ಮಾಡಿ, ಭಾಷಾ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು. ರಾಜ್ಯದಲ್ಲಿ ಕನ್ನಡ ನಾಡು-ನುಡಿ, ಗಡಿಯ ವಿಷಯದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಖಂಡಿಸುತ್ತಾ ಬಂದಿರುತ್ತದೆ. ಈ ಮೂಲಕ ಕನ್ನಡಿಗರನ್ನು ಒಗ್ಗೂಡಿಸಲು ವೇದಿಕೆಯು ಶ್ರಮಿಸುತ್ತಿದೆ. ಆನವಟ್ಟಿಯಲ್ಲಿಯೂ ಕಳೆದ ಸುಮಾರು 6 ವರ್ಷಗಳಿಂದ ಉತ್ತಮ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜನದನಿ ಕರ್ಣಾಟಕ ರಕ್ಷಣ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೆ.ಇ. ವಿಜಯಕುಮಾರ್ ಮಾತನಾಡಿ, ಜನದನಿ ಸಂಘಟನೆ ವತಿಯಿಂದ ಕಳೆದ ಆರು ವರ್ಷಗಳಿಂದ ವಿವಿಧ ಜನಪರ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ರಕ್ತದಾನ ಶಿಬಿರ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಹಿಂದುಳಿದ ಪ್ರದೇಶದ ಶಾಲಾ ಮಕ್ಕಳಿಗೆ ಪಠ್ಯ ಸಾಮಗ್ರಿಗಳ ವಿತರಣೆಯಂತಹ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ, ಸರಕು ಸಾಗಾಣಿಕೆ ವಾಹನಗಳ ಚಾಲಕರಿಗೆ ಆಹಾರದ ವ್ಯವಸ್ಥೆ ಹಾಗೂ ದುಡಿದು ಬದುಕುವ ವರ್ಗ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಥೆ ನೊಂದವರ ನಿರಾಶ್ರಿತರ ಧ್ವನಿಯಾಗಿದೆ. ಸಾರ್ವಜನಿಕರ ಸಹಕಾರದಿಂದ ಇಲ್ಲಿಯವರೆಗೆ ಬೆಳೆದು ನಿಂತಿದೆ. ನೆಲ ಜಲ ನಾಡು ನುಡಿಯ ಹೋರಾಟದ ಹಿನ್ನೆಲೆಯ ಈ ನಮ್ಮ ಸಂಸ್ಥೆ ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸದಾ ಜನಮನದ ಜೀವನಾಡಿಯಾಗಿರುತ್ತದೆ ಎಂದರು.
Also read: Union Finance Minister appreciates Path Shala-Jeevan Yatra book by students
ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಸ್. ಜಗದೀಶ್, ಮೆಸ್ಕಾಂ ಕಿರಿಯ ಇಂಜಿನಿಯರ್ ಜಿ. ಸಂದೀಶ್, ವೈದ್ಯ ವಿ.ಪಿ. ಶಿವಕುಮಾರ್, ಹೆಡ್ ಕಾನ್ಸ್‍ಟೇಬಲ್ ಎಂ.ಎಲ್. ಸಿದ್ದೇಶ, ಆಯುಷ್ ವೈದ್ಯಾಧಿಕಾರಿ ಎಂ.ಕೆ. ಮಹೇಶ್, ರಂಗಭೂಮಿ ಕಲಾವಿದ ರಾಜಶೇಖರ ಬಿ.ಕೆ. ಚಿಕ್ಕಬ್ಬೂರು, ಆಯುಷ್ ಮೆಡಿಕಲ್ ಅಧಿಕಾರಿ ಕೆ. ವಿಶುೃತಾ, ಸಮಾಜ ಸೇವಕ ಕೆ.ಪಿ. ಶ್ರೀಧರ್, ಹಾಗೂ ಇಸ್ರೋ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಪಡೆದ ಎ.ಬಿ. ಭುವನ್ ಅವರಿಗೆ ಜನದನಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಾಲಾಜಿ ನೃತ್ಯ ಶಾಲೆ ಮಕ್ಕಳಿಂದ ಭರತ ನಾಟ್ಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜ್ಯೂನಿಯರ್ ಯಶ್ ಅವರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ರೆಡ್ಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಡಾ.ಪ್ರಭು ಸಾಹುಕಾರ್, ಡಾ.ಶ್ರೀನಾಥ್, ಸಿ.ಪಿ. ಈರೇಶ್ ಗೌಡ, ಶಂಕರ್ ಶೇಟ್, ಆರ್.ಸಿ. ಪಾಟೀಲ್, ನಾಗರಾಜ್ ಗೌಡ, ಶ್ರೀ ಚಂದ್ರಶೇಖರ ಜರ್ಮಲಿ, ಮಹಾಬಲೇಶ್ವರ, ರಾಜು ಜೆಸಿಬಿ ಮಾಲೀಕರು ಅಗಸನಹಳ್ಳಿ ಶ್ರೀ ಬಸವರಾಜ್ ವೀರನಗೌಡ, ಅಸದ್, ಕರವೇ ಗೌರವಾಧ್ಯಕ್ಷ ಹಿರಣ್ಯಪ್ಪ ಕುಂಬ್ರಿ, ಕಾರ್ಯಧ್ಯಕ್ಷ ಎಸ್.ಎ. ಅಮಿತ್, ಗೌರವಾಧ್ಯಕ್ಷ ಜಿ. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಕೌಶಿಕ್, ಉಪಾಧ್ಯಕ್ಷರಾದ ಬಿ.ಬಿ. ಮಂಜುನಾಥ್, ವಿಜೇಂದ್ರ ಸ್ವಾಮಿ ಎಣ್ಣೆಕೊಪ್ಪ, ಕಾರ್ಯದರ್ಶಿಗಳಾದ, ಸಂತೋಷ್, ಸತೀಶ್ ಅಗಸನಹಳ್ಳಿ, ಪ್ರಮೋದ್ ದ್ವಾರಳ್ಳಿ, ಯುವರಾಜ್ ಆನವಟ್ಟಿ ಸತೀಶ್ ದ್ವಾರಳ್ಳಿ, ಎಲ್ಲಪ್ಪ ನೇರಲಿಗೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post