ಕಲ್ಪ ಮೀಡಿಯಾ ಹೌಸ್ | ಉಳವಿ (ಸೊರಬ) |
ಉಳವಿ ಸಮೀಪದ ಹಲವಾರು ಗ್ರಾಮಗಳಲ್ಲಿ ಕುಂದಾಪುರದ ಮಹಾಗಣಪತಿ ಯಕ್ಷಕಲಾ ತಂಡದ ‘ಚಿಕ್ಕಮೇಳ’ ಕಲಾವಿದರು ಮನೆಮನೆಗಳಿಗೆ ತೆರಳಿ ಯಕ್ಷಗಾನದ ವಿವಿಧ ಕಥಾ ಸನ್ನಿವೇಶಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳನ್ನು ರಂಜಿಸಿದರು.
ಚಿಕ್ಕಮೇಳದ ಮೂಲಕ ಮನೆಗಳ ಅಂಗಳದಲ್ಲಿಯೇ ಯಕ್ಷಗಾನದ ಸೊಬಗನ್ನು ಪರಿಚಯಿಸಿದ ಕಲಾವಿದರು, ಸ್ವಲ್ಪ ಸಮಯದ ಅವಧಿಯಲ್ಲಿ ಆಯ್ದ ಪ್ರಸಂಗಗಳ ಸನ್ನಿವೇಶಗಳನ್ನು ಮನೋಜ್ಞವಾಗಿ ಅಭಿನಯಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಯಕ್ಷಗಾನ ಕಲೆಯ ಆಸಕ್ತಿಯನ್ನು ಜೀವಂತವಾಗಿಡುವಲ್ಲಿ ಇಂತಹ ಚಿಕ್ಕಮೇಳಗಳ ಪಾತ್ರ ಮಹತ್ವದ್ದಾಗಿದೆ.
ಈ ಸಂದರ್ಭದಲ್ಲಿ ಪುರುಷ ಪಾತ್ರದಲ್ಲಿ ಗಣೇಶ್ ಆಲ್ಮನೆ ಹಾಗೂ ಸ್ತ್ರೀ ಪಾತ್ರದಲ್ಲಿ ರವಿಕುಮಾರ್ ಅವರು ಗಮನ ಸೆಳೆದರು. ಚಂದ್ರಶೇಖರ ಶೆಟ್ಟಿ ಭಾಗವತರಾಗಿ, ಗಣೇಶ್ ಚಂಡೆ ವಾದಕರಾಗಿ ಸಾಥ್ ನೀಡಿದರು.
Also read>> ಕಸ್ತೂರಿ ರಂಗನ್ ವರದಿ: ಜನರ ಭಯ ನಿವಾರಣೆಗೆ ಜಿಲ್ಲೆಯ ನಾಯಕರ ಒಕ್ಕೊರಲ ಒತ್ತಾಯ
ಮನೆಮನೆಗಳಿಗೆ ತೆರಳಿ ಯಕ್ಷಗಾನ ಪ್ರದರ್ಶನ ನೀಡಿದ ಕಲಾವಿದರ ಪ್ರಯತ್ನಕ್ಕೆ ಸ್ಥಳೀಯ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂರ್ಭದಲ್ಲಿ ಸಂಚಾಲಕರಾದ ಅರಳಸುರಳಿ. ಚಂದ್ರಶೆಟ್ಟಿ, ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








