ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸಾಮಾನ್ಯ ಜನರ ಸಬಲೀಕರಣದ ಬಗ್ಗೆ ಚಕಾರವೆತ್ತದೆ, ಯಾವುದೇ ನಿರ್ದಿಷ್ಟ ಕಾರ್ಯಕ್ರಮಗಳಿಲ್ಲದ, ದೂರದೃಷ್ಟಿ ಇಲ್ಲದ, ಕರ್ನಾಟಕದ ಪಾಲಿಗೆ ಪರಿಣಾಮಕಾರಿ ಘೋಷಣೆಗಳಿಲ್ಲದ, ಆರ್ಥಿಕ ಶಿಸ್ತನ್ನು ಒಳಗೊಳ್ಳದ ನಿರಾಸೆ ಬಜೆಟ್ ಮಂಡನೆಯಾಗಿದೆ ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರೂ ಆರ್ಥಿಕ ವಿಶ್ಲೇಷಕರೂ ಆದ ಡಾ.ಎಂ.ಎಸ್. ಮಂಜುನಾಥ್ ವಿಶ್ಲೇಷಣೆ ಮಾಡಿದ್ದಾರೆ.
2026 -27 ನೇ ಸಾಲಿನ ಕೇಂದ್ರ ಮುಂಗಡ ಪತ್ರ #Union Budget ಒಟ್ಟು ವೆಚ್ಚದ ಪರಿಷೃತ ಅಂದಾಜು 49.6 ಲಕ್ಷ ಕೋಟಿ, 26-27ನೇ ಸಾಲಿನ ಸ್ವೀಕೃತಿಗಳು ಮತ್ತು ವೆಚ್ಚಗಳು 36.5 ಲಕ್ಷ ಕೋಟಿ ಮತ್ತು 53.5 ಲಕ್ಷ ಕೋಟಿ ಅಂದಾಜಿಸಲಾಗಿದೆ. ದಾಖಲೆಯ 9ನೇ ಬಾರಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. 11 ಲಕ್ಷ ಕೋಟಿ ಬಂಡವಾಳ ವೆಚ್ಚ ಮಾಡಿದ್ದು, 28 ಲಕ್ಷ ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ ಎಂದಿದ್ದಾರೆ.
ಜಿಎಸ್ಟಿ ಸರಣಿಕರಣ ಮಾಡಿದ್ದು, ವಿತ್ತೀಯ ಕೊರತೆ ಶೇ. 4.4 ಇಳಿಕೆ ಮಾಡಲಾಗಿದೆ. ಜನಸಾಮಾನ್ಯರ ಮೇಲೆ ತೆರಿಗೆ ಭಾರ ಇಲ್ಲದ, ಸಬ್ ಕಾ ಸಾಥ್- ಸಬ್ ಕಾ ವಿಕಾಸ್, ವಿಕಾಸಿತ ಭಾರತ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇನ್ನು ಕರ್ನಾಟಕದ ಪಾಲಿಗೆ ಎರಡು ಹೈ ಸ್ಪೀಡ್ ರೈಲುಗಳಿಗೆ ಹಾಗೂ ಒಂದು ಟ್ರಕ್ಕಿಂಗ್ ಗೆ ಅವಕಾಶ ನೀಡಲಾಗಿದೆ. ಬಜೆಟ್ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿಯ ಮುಂಗಡ ಪತ್ರದಲ್ಲಿನ ಬಹಳಷ್ಟು ಘೋಷಣೆಗಳು ಈಡೇರದೆ ರಾಜ್ಯದ ನೀರಾವರಿ, ತೆರಿಗೆ ಪಾಲನ್ನು ಹಂಚದ ಕುರಿತು ದೂರುಗಳಿವೆ. ರಾಜ್ಯದ ಯೋಜನೆಗಳನ್ನು ವ್ಯತ್ಯಾಯಿಸಿರುವುದು, ಹೊಸ ವಿವಿ ಸ್ಥಾಪನೆ ಹೊರಡಿಸಿದ್ದು, ವಿವಿಯಲ್ಲಿನ ಮೂಲಭೂತ ಸಮಸ್ಯೆಗಳನ್ನು ಈವರೆಗೂ ಪರಿಗಣಿಸಿರುವುದಿಲ್ಲ ಎಂದಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಬಹಳ ನಿರಾಸೆಯ ಮುಂಗಡ ಪತ್ರವಾಗಿದೆ. ಬಡತನ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ನಿರ್ದಿಷ್ಟವಾದ ಕಾರ್ಯಕ್ರಮಗಳಿಲ್ಲ. ಮಹಿಳೆಯರಿಗೆ ಲಕಪತಿ ದೀದಿ ಯೋಜನೆ ಜಾರಿಗೆ ತರಲಾಗಿದೆ. ಬಂಡವಾಳದಾರರಿಗೆ, ಷೇರುಪೇಟೆ ಹೂಡಿಕೆದಾರರಿಗೆ ಬಹಳಷ್ಟು ನಿರಾಸೆ ಮೂಡಿಸಿದೆ. ಕಳೆದ ಬಾರಿಯ ಜಿಎಸ್ಟಿ ಹಂಚಿಕೆ ನಮ್ಮ ರಾಜ್ಯಕ್ಕೆ ಸಮರ್ಪಕವಾಗಿ ಹಂಚದೆ ಹಾಗೂ ಆರ್ಥಿಕ ಅಸಮಾನತೆ ನಿವಾರಣೆಗೆ ಯಾವುದೇ ಕಾರ್ಯಕ್ರಮ ಘೋಷಿಸದೆ, ಜನಪರ ಕಾರ್ಯಗಳಿಗೆ ಪ್ರಾಮುಖ್ಯತೆ ಇಲ್ಲದೆ, ಬಡ ಹಾಗೂ ಮಧ್ಯಮ ವರ್ಗಕ್ಕೆ ಯಾವುದೇ ಅನುಕೂಲಕರವಾಗದ ಮುಂಗಡ ಪತ್ರವಾಗಿದೆ ಎಂದು ತಿಳಿಸಿದ್ಧಾರೆ.
ಸಾಮಾನ್ಯ ಜನರ ಸಬಲೀಕರಣದ ಬಗ್ಗೆ ಚಕಾರವೆತ್ತದೆ, ಯಾವುದೇ ನಿರ್ದಿಷ್ಟ ಕಾರ್ಯಕ್ರಮಗಳಿಲ್ಲದ, ದೂರದೃಷ್ಟಿ ಇಲ್ಲದ, ಕರ್ನಾಟಕದ ಪಾಲಿಗೆ ಪರಿಣಾಮಕಾರಿ ಘೋಷಣೆಗಳಿಲ್ಲದ, ಆರ್ಥಿಕ ಶಿಸ್ತನ್ನು ಒಳಗೊಳ್ಳದ ನಿರಾಸೆ ಬಜೆಟ್ ಮಂಡನೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















