ಕಲ್ಪ ಮೀಡಿಯಾ ಹೌಸ್
ಜೀವನವು ಕೇವಲ ನಿಂತ ನೀರಲ್ಲ ಮಳೆ ಬಂದ ಮೇಲೆ ಹೇಗೆ ಪ್ರಶಾಂತ ವಾತಾವರಣ ಇರುವುದೋ ಹಾಗೆಯೇ ಬದುಕಿನ ನೆಮ್ಮದಿಯು ಸಹಾ ಅಷ್ಟೇ ತಂಗಳಿಯ ಸ್ಪರ್ಶ ದ ಹಾಗೆ ಚರ್ಮಕ್ಕೆ ಮುದ ನೀಡುತ್ತದೆ.
ಮಳೆ ಬರಬೇಕಾದರೆ ಗುಡುಗು ಸಿಡಿಲುಗಳು ಬರದೆ ಇದ್ದರೆ ಹೇಗೆ ಮಳೆ ಅನ್ನಿಸಿಕೊಳ್ಳೋದಿಲ್ಲವೋ ಹಾಗೆಯೇ ಜೀವನದಲ್ಲಿ ಕಷ್ಟಗಳು ಬರದೆ ಇದ್ದರೆ ಜೀವನ ಪರಿಪೂರ್ಣ ಎನ್ನಿಸಿಕೊಳ್ಳುವುದಿಲ್ಲ.
ಜೀವನದುದ್ದಕ್ಕೂ ನೀರಿನಲ್ಲಿ ಇಜಾಡಲು ಸಾಧ್ಯವಿಲ್ಲ ಆದರೂ ಕೆಲವೊಮ್ಮೆ ಸಂದರ್ಭ ಗಳು ಇಜಾಡಿಸುತ್ತದೆ ಕಾರಣ ಕಷ್ಟಗಳು ಕೆಲವೊಮ್ಮೆ ಹುಟ್ಟುತ್ತಲೇ ಜೊತೆಯಲ್ಲಿ ಇದ್ದಿಬಿಡುತ್ತದೆ.
ತುಂತುರು ಮಳೆ ಹನಿಗಳ ಸ್ಪರ್ಶತೆ ಹೇಗೆ ಹಿತಕರವೋ ಹಾಗೆಯೇ ಮನುಷ್ಯನ ಬಾಳಲ್ಲಿ ಭಾವನೆ ತುಂಬಿಕೊಂಡಿರುವ ಜೋಡಿ ಹೃದಯಗಳ ಪರಿಶುದ್ದ ಮಿಲನವು ಕೂಡ ಅಷ್ಟೇ ಜೀವನದಲ್ಲಿ ಮುಖ್ಯವಾಗಿ ಮುದವನ್ನು ನೀಡಿ ಹೃದಯ ದ ಇಚ್ಚಾ ಶಕ್ತಿಯನ್ನು ದುಪ್ಪಟ್ಟು ಮಾಡುತ್ತದೆ.
ದಿನ ಕಳೆದಂತೆ ವರ್ಷಗಳು ಉರುಳಿದಂತೆ ಮಳೆಯು ಸಹ ತನ್ನ ಚಲನೆಯನ್ನು ಬದಲಿಸಿ ಕೊಳ್ಳುತ್ತಾ ಹೋಗುತ್ತದೆ ಅರಣ್ಯವು ನಾಶವಾಗುತ್ತಾ ಹೋದರೆ ಹೇಗೆ ಮಳೆಯು ತನ್ನ ವೈಭವವನ್ನು ತೋರಿಸಲು ಸಾಧ್ಯ ಆಗುವುದಿಲ್ಲವೋ ಅದೇ ಮನುಷ್ಯನ ಜೀವಕ್ಕೆ ಭಾವನೆ ಗಳೇ ಕೊಲೆ ಆಗಿ ಹೋದರೆ ಮೊದಲಿನ ಚೈತನ್ಯ ಆತ್ಮ ಶಕ್ತಿ ಸೌಲ್ಪ ಮಟ್ಟಿಗೂ ಅವರಲ್ಲಿ ಇರಲು ಸಾಧ್ಯವಿಲ್ಲ.
ಪ್ರಕೃತಿ ಯಲ್ಲಿ ಮಳೆ ಹೇಗೆ ತನ್ನ ನಿತ್ಯ ಚಲನೆಯಲ್ಲಿ ಹೇಗೆ ತೊಂದರೆ ಊಟದರೆ ಭೂಮಿಯ ಮೇಲೆ ಪರಿಣಾಮ ಉಂಟಾಗುವುದೋ ಹಾಗೆಯೇ ಎರಡು ಹೃದಯಗಳ ಭಾವನೆಗಳು ಯಾವಾಗಲೂ ಒಂದೇ ರೀತಿ ಯೋಚಿಸಿದ್ದಲ್ಲಿ ಮಾತ್ರ ತನ್ನ ಕೊನೆಯ ದಿನಗಳ ಒರೆಗೂ ಗಟ್ಟಿತನದ ಜೀವನ ನೆಡೆಸಲು ಸಾಧ್ಯ.
ಮಳೆಯ ನೀರಿಗೆ ಹೇಗೆ ಕಣ್ಣೀರು ತನ್ನ ನಂಬಿರೋ ಹೃದಯಕ್ಕೆ ಕಾಣುವುದಿಲ್ಲವೋ ಹಾಗೆಯೇ ಮನುಷ್ಯ ನ ನಿತ್ಯದ ಜೀವನದಲ್ಲೂ ಕಾಣದಂತೆ ಮಾಡಿರುವ ಎಷ್ಟೋ ತ್ಯಾಗಗಳು ತನ್ನ ಮತ್ತೊಂದು ಹೃದಯಕ್ಕೆ ಅರಿವಾಗುವುದಿಲ್ಲ ಕೆಲವೊಮ್ಮೆ ಇದೆ ಭಾವನೆಗಳು ತನ್ನವರನ್ನ ತಮ್ಮನ್ನು ಬಿಟ್ಟು ದೂರದಲ್ಲಿ ನಿಲ್ಲಿಸಿಬಿಡುತ್ತದೆ ಪರಸ್ಪರ ಮಾತುಗಳು ಸಹ ನಿಲ್ಲುತ್ತವೆ. ತೋರ್ಪಡಿಕೆಯು ಬೇಡವೆನಿಸಿದರು ಸಹಾ ತನ್ನ ಆತ್ಮ ಶ್ರದ್ಧೆ ಇಂದ ಮಾಡುವ ಕೆಲಸಗಳು, ತ್ಯಾಗಗಳು ತೋರಿಕೆ ಆದರಷ್ಟೇ ತನ್ನ ನಂಬಿರುವ ಮತ್ತೊಂದ್ದು ಜೀವಕ್ಕೆ ತನ್ನ ಅನಿವಾರ್ಯತೆ ತಿಳಿದಿಬಿಡುತ್ತದೆ, ಆ ಕ್ಷಣ ತಮ್ಮನ್ನ ಬಿಟ್ಟು ಆ ಒಂದು ಜೀವ ಬೇರೆ ಒಂದು ಜಗತ್ತು ಇದೆ ಎನ್ನುವುದೇ ತನ್ನ ಮನದಲ್ಲಿ ಬರುವುದಿಲ್ಲ.
ಪ್ರಕೃತಿಯ ಸುಂದರ ಮಡಿಲಿನಲ್ಲಿ ಸಣ್ಣ ಸಣ್ಣ ತುಂತುರು ಮಳೆಗಳು ಪ್ರಕೃತಿಯ ಸೌಂದರ್ಯಕ್ಕೆ ಎಷ್ಟು ಚಲುವನ್ನು ಕೊಡುವುದೋ ಅದೇ ತುಂತುರು ಮಳೆಯು ತನ್ನ ಬಾಳೆಂಬ ಮನದ ಮೇಲೆ ಸ್ಪರ್ಶವಾದರೆ ತನ್ನ ಅಂತರಾತ್ಮವೂ ಕೂಡ ಜಾಗೃತಗೊಂಡು ನಂಬಿಕೆಯ ದೋಣಿಯಲ್ಲಿ ಹತ್ತಿ ತನ್ನವರ ಜೊತೆಯಲ್ಲಿ ಬಾಳೆಂಬ ಪಯಣದಲ್ಲಿ ಸುಂದರವಾಗಿ ಸಾಗುತ್ತಾರೆ.
ಮಳೆ ಮತ್ತು ಮನುಷ್ಯನ ಜೀವನಕ್ಕೆ ಅದ್ಬುತ ಸಂಬಂಧಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿ ಜೊತೆಯಲ್ಲಿಯೇ ಬಂದಿದೆ ಅಂತೆಯೇ ಅದಕ್ಕೆ ಅನುಗುಣವಾಗಿ ಜೀವನದ ಮುಖ್ಯ ಕ್ಷಣ ವನ್ನು ಸಹ ಕಳೆದುಕೊಳ್ಳದೆ ಮುಂಜಾನೆಯ ತುಂತುರು ಮಳೆಯಲ್ಲಿ ಕೈ ಹಿಡುದು ಆತ್ಮ ವಿಶ್ವಾಸ ದಿಂದ ಹೆಜ್ಜೆಯನ್ನು ಇಟ್ಟಲ್ಲಿ ಮಾತ್ರ ಜೋಡಿ ಹೃದಯಗಳ ಭಾವನೆಗಳು ಗಟ್ಟಿಯಾಗಿ ನಂಬಿಕೆ ಎಂಬ ದೋಣಿಯ ಮೇಲೆ ಚಲಿಸುತ್ತಾ ಇರುತ್ತದೆ.
ಭಾವನೆಗಳು ನಿರಂತರ, ನಂಬಿಕೆಯ ತಳಹದಿಯನ್ನು ಕಳಚದೆ ಕಾಪಾಡಿ ಕಾಪಾಡಿಕೊಳ್ಳುವುದು ಮುಖ್ಯ ಕರ್ತವ್ಯ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post